Maruti Suzuki Swift: ಹೊಸ ಮಾರುತಿ ಸ್ವಿಫ್ಟ್‌ಗೆ ಆಧುನಿಕ ಸೇಫ್ಟಿ ಫೀಚರ್ಸ್: 6 ಏರ್ ಬ್ಯಾಗ್, 25 km ಮೈಲೇಜ್

2024 ಮಾರುತಿ ಸುಜುಕಿ ಸ್ವಿಫ್ಟ್ (Maruti suzuki Swift) ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರೀಕ್ಷಿಸಲಾಗುತ್ತಿದೆ. ಹಳೆಯ ಮಾದರಿಗೆ ಹೋಲಿಸಿದರೆ ಈ ಕಾರು ಸಾಕಷ್ಟು ನವೀಕರಣಗಳನ್ನು ಪಡೆದಿದ್ದು, ಸುಧಾರಿತ ವಿನ್ಯಾಸ, ಹೊಸ ಇಂಟೀರಿಯರ್ ಹೊಂದಿದೆ. Z- ಸರಣಿಯು ಹೊಸ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ.

ಭಾರತದಲ್ಲಿ ಮುಂಬರುವ 2024 ಮಾರುತಿ ಸ್ವಿಫ್ಟ್ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ವರದಿಗಳ ಪ್ರಕಾರ, 2024ರ ಫೆಬ್ರವರಿಯಲ್ಲಿ ಸ್ವಿಫ್ಟ್ ಉತ್ಪಾದನೆಯು ಪ್ರಾರಂಭವಾಗಲಿದೆ. ಹಾಗೆಯೆ ಕಾರಿನ ಮಾರಾಟವು ಮಾರ್ಚ್ 2024 ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸಿದರೆ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ.

maruti-suzuki-swift-launch-details-latest-safety-features-and-25-km-mileage

ಹೊಸ ಮಾರುತಿ ಸ್ವಿಫ್ಟ್ ಸುರಕ್ಷತೆ: ಈಗಾಗಲೇ ಜಪಾನ್‌ನಲ್ಲಿ ಕಾಣಿಸಿಕೊಂಡ ಅಂತರಾಷ್ಟ್ರೀಯ ಸ್ವಿಫ್ಟ್ ಮಾದರಿಯು ಲೇನ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸೈನ್ ರೆಕಗ್ನಿಷನ್ ಫಂಕ್ಷನ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಬ್ಲೈಂಡ್ ಸ್ಪಾಟ್ ಮಾನಿಟರ್, ಡ್ರೈವರ್ ಮಾನಿಟರಿಂಗ್‌ನಂತಹ ಸುಧಾರಿತ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸುರಕ್ಷತಾ ವೈಶಿಷ್ಟ್ಯಗಳನ್ನು ಭಾರತೀಯ ಮಾದರಿಯಲ್ಲಿಯೂ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಭಾರತೀಯ ಹೊಸ ಸ್ವಿಫ್ಟ್ ಮಾದರಿಯು ಖಂಡಿತ 6 ಏರ್‌ಬ್ಯಾಗ್‌ಗಳು (ಟಾಪ್ ಮಾಡೆಲ್), ಇಬಿಡಿ, ಎಬಿಎಸ್, ಬ್ರೇಕ್ ಅಸಿಸ್ಟ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಲ್ಲದೆ ಹೊಸ ಸುಜುಕಿ ಸ್ವಿಫ್ಟ್ ಅನ್ನು HEARTECT ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಈ ಕಾರು ಕಡಿಮೆ ತೂಕ ಮತ್ತು ಬಲವಾದ ನಿರ್ಮಾಣ ಗುಣಮಟ್ಟದೊಂದಿಗೆ ಬರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ 265 ಲೀಟರ್ ಬೂಟ್ ಸ್ಪೇಸ್ ಸಹ ಹೊಂದಿದೆ.

maruti-suzuki-swift-launch-details-latest-safety-features-and-25-km-mileage

ಹೊಸ ಮಾರುತಿ ಸ್ವಿಫ್ಟ್ ವಿನ್ಯಾಸ: ಹೊಸ ಸ್ವಿಫ್ಟ್ ಗ್ರ್ಯಾಂಡ್ ಫ್ರಂಟ್ ವಿನ್ಯಾಸ, ಆಕರ್ಷಕ ಗ್ರಿಲ್, ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಬರಲಿದೆ. ಪ್ರಸ್ತುತ ಮಾದರಿಯಂತೆ ಡೋರ್ ಹ್ಯಾಂಡಲ್‌ಗಳನ್ನು ಹೊಂದಿರುವುದಿಲ್ಲ. ಸ್ವಲ್ಪ ಉತ್ತಮ ಶೈಲಿಯನ್ನು ಪಡೆಯುತ್ತದೆ. ಸ್ಪೋರ್ಟಿ ಅಲಾಯ್ ವೀಲ್‌ಗಳು, ಟೈಲ್‌ಗೇಟ್, ಸಿ-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ. ಬಲೆನೋ ರೀತಿಯ ಡ್ಯುಯಲ್-ಟೋನ್ ಇಂಟೀರಿಯರ್ ಕಲರ್ ಸ್ಕೀಮ್‌ನಲ್ಲಿ ಹೊಸ ಡ್ಯಾಶ್‌ಬೋರ್ಡ್ ಲೇಔಟ್ ನೀಡಲಾಗುವುದು.

ಎಂಜಿನ್ & ಮೈಲೇಜ್: ಹೊಸ ಸ್ವಿಫ್ಟ್ 1.2-ಲೀಟರ್, Z-ಸಿರೀಸ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 82bhp ಪವರ್ ಮತ್ತು 108Nm ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೈಬ್ರಿಡ್ ಎಂಜಿನ್ ಆಯ್ಕೆಯೊಂದಿಗೆ ಬರಲಿದೆ. 5-ಸ್ಪೀಡ್ ಮ್ಯಾನುವಲ್, ಹೊಸ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯು ಲಭ್ಯವಿರುತ್ತದೆ. ಕಾರಿನ ಹೈಬ್ರಿಡ್ ಮಾದರಿಯು 25.5 ಕಿ.ಮೀ ಮೈಲೇಜ್ ನೀಡಬಲ್ಲದು. ಸಾಮಾನ್ಯ ಮಾದರಿಯು 23.4 kmpl ಮೈಲೇಜ್ ನೀಡಬಲ್ಲದು.

maruti-suzuki-swift-launch-details-latest-safety-features-and-25-km-mileage

ವೈಶಿಷ್ಟ್ಯಗಳು: ಕ್ಲೈಮೆಟ್ ಕಂಟ್ರೋಲ್‌ಗಾಗಿ ಟಾಗಲ್, ಪುಶ್ ಬಟನ್ ಸ್ಟಾರ್ಟ್-ಸ್ಟಾಪ್, ಅನಲಾಗ್ ಡಯಲ್, ಎಂಐಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಕೀಲೆಸ್ ಎಂಟ್ರಿ, ರಿಮೋಟ್ ಸ್ಟೋರೇಜ್ ಡೋರ್ ಮಿರರ್, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸೆಂಟರ್ ಕನ್ಸೋಲ್ ಟ್ರೇ, ಡ್ರಿಂಕ್ ಹೋಲ್ಡರ್‌ಗಳು, ಬಾಗಿಲಿನ ಪಾಕೆಟ್‌ಗಳಂತಹ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, January 27, 2024, 10:18 [IST]
English summary
Maruti suzuki swift launch details latest safety features and 25 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+