30 ಕಿ.ಮೀ ಮೈಲೇಜ್, ಆಕರ್ಷಕ ಬೆಲೆಯ ಮಾರುತಿ ಸ್ವಿಫ್ಟ್ EMI, ಆನ್ ರೋಡ್ ಬೆಲೆ ಎಷ್ಟು? ವಾರಗಳಲ್ಲಿ ಮನೆಗೆ ತನ್ನಿ
ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಲಗ್ಗೆ ಇಟ್ಟರೂ ಮಾರುತಿ ಸ್ವೀಫ್ ಕಳೆದ ಹಲವು ವರ್ಷದಿಂದ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಈ ಬಹುಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಯಾಗಿತ್ತು
ಈ ಮಾರುತಿ ಸುಜುಕಿ ಸ್ವಿಫ್ಟ್ ದೀರ್ಘಕಾಲದಿಂದಲೇ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸ್ವಿಫ್ಟ್ ಕಾರು 2018ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಯಿತು. ಈ ಮಾರುತಿ ಸ್ವಿಫ್ಟ್ ಭಾರತದಲ್ಲಿ ಮಧ್ಯಮ ವರ್ಗದ ಜನರಿಗೆ ಉತ್ತಮ ಆಯ್ಕೆಯಾಗಿದೆ. ಈ ಲೇಖನದಲ್ಲಿ ಮಾರುತಿ ಸ್ವಿಫ್ಟ್ ಕಾರಿನ ಇಎಂಐ, ಆನ್ ರೋಡ್ ಬೆಲೆ ಮತ್ತು ಕಾರಿನ ಸಂಪೂರ್ಣ ಮಾಹಿತಿ ಮತ್ತು ಇತರ ವಿವರವನ್ನು ನೀಡುತ್ತೇವೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಆರಂಭಿಕೆ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5,99,450 ಆದರೆ ಆನ್ ರೋಡ್ ಬೆಲೆಯು ರೂ.7,20,267 ಆಗಿದೆ. ಈ ಕಾರಿನ ಲೋ ವೆರಿಯೆಂಟ್ LXI ಮಾದರಿಗೆ 9.8 % ಬಡ್ಡಿ ದರದಲ್ಲಿ ಐದು ವರ್ಷದ ಲೋನ್ ಮಾಡಿದರೆ ಪ್ರತಿ ತಿಂಗಳು ನೀವು 13,710 ಗಳಷ್ಟು ಇಎಂಐ ಪಾವತಿಸಬೇಕು. ಇನ್ನು ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಡೌನ್ ಪೇಮೆಂಟ್ ರೂ.72,000 ಆಗಿದೆ.
ಮಾರುತಿ ಸ್ವಿಫ್ಟ್ ಕಾರು ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಸಾಲಿಡ್ ಫೈರ್ ರೆಡ್ ಸೇರಿದಂತೆ 3 - ಡುಯಲ್ ಟೋನ್, 6 - ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಜೊತೆಗೆ 5 ಸೀಟ್ ವ್ಯವಸ್ಥೆಯನ್ನು ಹೊಂದಿದೆ. ಈ ಮಾರುತಿ ಸ್ವಿಫ್ಟ್ ಕಾರು, 1.2 - ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ.

ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್, 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಸ್ವಿಫ್ಟ್ ಪೆಟ್ರೋಲ್ ರೂಪಾಂತರಗಳು 22.38 ಕಿ.ಮೀ - 22.56 ಕಿ.ಮೀ, ಸಿಎನ್‌ಜಿ ರೂಪಾಂತರಗಳು 30.90 ಕಿ.ಮೀ ಮೈಲೇಜ್ ನೀಡುತ್ತವೆ. ಇದರೊಂದಿಗೆ 268 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ.
ಮಾರುತಿ ಸುಜುಕಿ ಸ್ವಿಫ್ಟ್ ವಿನ್ಯಾಸ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿದ್ದು, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೈಟ್ - ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿವೆ. ಸುರಕ್ಷತೆಯಲ್ಲಿಯೂ ಮಾರುತಿ ಸುಜುಕಿ ಸ್ವಿಫ್ಟ್ ಅತ್ಯಾಧುನಿಕವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್, EBD, ABS, ಹಿಲ್-ಹೋಲ್ಡ್ ಕಂಟ್ರೋಲ್, ESC, ಫ್ರಂಟ್ & ರೇರ್ ಪಾರ್ಕಿಂಗ್ ಸೇನಾರ್ಸ್ ಹೊಂದಿದೆ.

ಇನ್ನು ಸುಜುಕಿ ಕಂಪನಿಯು ನ್ಯೂ ಜನರೇಷನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ತಾಯಿನಾಡು ಜಪಾನ್ ನಲ್ಲಿ ಪರಿಚಯಿಸಿದೆ. ಹೊಸ ಸುಜುಕಿ ಸ್ವಿಫ್ಟ್ ಕಾರು ಪರಿಷ್ಕೃತ ಸ್ಟೈಲಿಂಗ್ ಮತ್ತು ಹೊಸ ಇಂಜಿನ್ ಆಯ್ಕೆಗಳೊಂದಿಗೆ ನವೀಕರಿಸಿದ ಇಂಟಿಯರ್ ಗಳೊಂದಿಗೆ ಬರುತ್ತಿದೆ. 2024ರ ಮಾರುತಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಗುಜರಾತ್‌ನ ಮಾರುತಿ ಸುಜುಕಿಯ ಹಂಸಲ್‌ಪುರ ಘಟಕದಲ್ಲಿ ತಯಾರಿಸಲಿದೆ.
ಹೊಸ ಸ್ವಿಫ್ಟ್ ಕಾರಿನ ಎಂಜಿನ್‌ನಲ್ಲಿ 12V ನ ಮೈಲ್ಡ್ ಹೈಬ್ರಿಡ್ ಸಹ ಇರಲಿದ್ದು, ಇದರಿಂದ ಈ ಕಾರಿನ ಮೈಲೇಜ್ 35 ಕಿಮೀ ವರೆಗೂ ಸಿಗಲಿದೆ ಎಂದು ಹೇಳಲಾಗುತ್ತಿದೆ.ಇನ್ನು ಹೊಸ ಮಾದರಿಯು ಬಿಡುಗಡೆಯಾದ ಬಳಿಕ ಮಾರಾಟದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಾಣುವ ಸಾಧ್ಯತೆಗಳಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವೀಫ್ ಕಳೆದ ಹಲವು ವರ್ಷದಿಂದ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications