ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಲಗ್ಗೆ ಇಟ್ಟರೂ ಮಾರುತಿ ಸ್ವಿಫ್ಟ್ ಕಾರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಈ ಬಹುಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಯಾಗಿತ್ತು. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸ್ವಿಫ್ಟ್ ಕಾರು 2018ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಯಿತು.
ಈ ಮಾರುತಿ ಸುಜುಕಿ ಸ್ವಿಫ್ಟ್ ದೀರ್ಘಕಾಲದಿಂದಲೇ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಆದರೆ ಈ ಕಾರು ಕಳೆದ ತಿಂಗಳ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. 2024ರ ಮಾರ್ಚ್ ತಿಂಗಳಿನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಮಾದರಿಯ 15,728 ಯುನಿಟ್‌ಗಳು ಮಾರಾಟವಾಗಿವೆ. ಮಾರಾಟದ ಅಂಕಿ ಅಂಶದ ಪ್ರಕಾರ ಕಳೆದ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎರಡನೇ ಮಾರುತಿ ಹ್ಯಾಚ್‌ಬ್ಯಾಕ್ ಆಗಿದೆ.

2023ರ ಮಾರ್ಚ್ ತಿಂಗಳಿನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಮಾದರಿಯ 17,559 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.10 ರಷ್ಟು ಕುಸಿತವನ್ನು ಕಂಡಿದೆ. ಇದಕ್ಕೆ ಪ್ರಮುಖ ಕಾರಣ, ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಯಾಗುವುದು ಆಗಿದೆ. ಇದರಿಂದ ಜನರು ನ್ಯೂ ಜನರೇಷನ್ ಸ್ವಿಫ್ಟ್ ಕಾರನ್ನು ಖರೀದಿಸಲು ಕಾಯುತ್ತಿದ್ದಾರೆ. ಇದರಿಂದ ಪ್ರಸ್ತುತ ಮಾದರಿಯನ್ನು ಖರೀದಿಸುವುದರಿಂದ ಹಿಂದೆ ಸರಿದಿದ್ದಾರೆ.
ಕೆಲವು ಮಾರುತಿ ಸುಜುಕಿ ಡೀಲರ್‌ಶಿಪ್‌ಗಳು ಮುಂಬರುವ ಸ್ವಿಫ್ಟ್ ಮಾದರಿಯ ಪ್ರಿ-ಬುಕಿಂಗ್‌ಗಳನ್ನು ಅನಧಿಕೃತವಾಗಿ ಸ್ವೀಕರಿಸಲು ಪ್ರಾರಂಭಿಸಿವೆ ಎಂದು ವರದಿಯಾಗಿದೆ. ಸುಜುಕಿ ಕಂಪನಿಯು ನ್ಯೂ ಜನರೇಷನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ತಾಯಿನಾಡು ಜಪಾನ್ ನಲ್ಲಿ ಪರಿಚಯಿಸಿದೆ. ಹೊಸ ಸುಜುಕಿ ಸ್ವಿಫ್ಟ್ ಕಾರು ಪರಿಷ್ಕೃತ ಸ್ಟೈಲಿಂಗ್ ಮತ್ತು ಹೊಸ ಇಂಜಿನ್ ಆಯ್ಕೆಗಳೊಂದಿಗೆ ನವೀಕರಿಸಿದ ಇಂಟಿಯರ್ ಗಳೊಂದಿಗೆ ಬರುತ್ತಿದೆ.

2024ರ ಮಾರುತಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಗುಜರಾತ್‌ನ ಮಾರುತಿ ಸುಜುಕಿಯ ಹಂಸಲ್‌ಪುರ ಘಟಕದಲ್ಲಿ ತಯಾರಿಸಲಿದೆ. ಹೊಸ ಸ್ವಿಫ್ಟ್ ಕಾರಿನ ಎಂಜಿನ್‌ನಲ್ಲಿ 12V ನ ಮೈಲ್ಡ್ ಹೈಬ್ರಿಡ್ ಸಹ ಇರಲಿದ್ದು, ಇದರಿಂದ ಈ ಕಾರಿನ ಮೈಲೇಜ್ 35 ಕಿಮೀ ವರೆಗೂ ಸಿಗಲಿದೆ ಎಂದು ಹೇಳಲಾಗುತ್ತಿದೆ.ಇನ್ನು ಹೊಸ ಮಾದರಿಯು ಬಿಡುಗಡೆಯಾದ ಬಳಿಕ ಮಾರಾಟದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಾಣುವ ಸಾಧ್ಯತೆಗಳಿದೆ.
ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವೀಫ್ ಕಳೆದ ಹಲವು ವರ್ಷದಿಂದ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಪ್ರಸ್ರುತ ಮಾದರಿ ಸ್ವಿಫ್ಟ್ ಕಾರು ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಸಾಲಿಡ್ ಫೈರ್ ರೆಡ್ ಸೇರಿದಂತೆ 3 - ಡುಯಲ್ ಟೋನ್, 6 - ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.

ಜೊತೆಗೆ 5 ಸೀಟ್ ವ್ಯವಸ್ಥೆಯನ್ನು ಹೊಂದಿದೆ. ಈ ಮಾರುತಿ ಸ್ವಿಫ್ಟ್ ಕಾರು, 1.2 - ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಅನ್ನು ಒಳಗೊಂಡಿದೆ. ಮಾರುತಿ ಸುಜುಕಿ ಸ್ವಿಫ್ಟ್ ವಿನ್ಯಾಸ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿದೆ. ಈ ಕಾರಿನ 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೈಟ್ - ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿವೆ.
ಸುರಕ್ಷತೆಯಲ್ಲಿಯೂ ಮಾರುತಿ ಸುಜುಕಿ ಸ್ವಿಫ್ಟ್ ಅತ್ಯಾಧುನಿಕವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್, EBD, ABS, ಹಿಲ್-ಹೋಲ್ಡ್ ಕಂಟ್ರೋಲ್, ESC, ಫ್ರಂಟ್ & ರೇರ್ ಪಾರ್ಕಿಂಗ್ ಸೇನಾರ್ಸ್ ಹೊಂದಿದೆ. ಮಾರುತಿ ಸುಜುಕಿಯ ಪ್ರಮುಖ ಮತ್ತು ಪ್ರಸಿದ್ದ ಕಾರು ಮಾದರಿಯಾದ ಮಾರುತಿ ಸುಜುಕಿ ಸ್ವಿಫ್ಟ್, 2024 ರಲ್ಲಿ ಹಲವು ಫೀಚರ್ ಮತ್ತು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಸದ್ಯದಲ್ಲೇ ಬರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications