ಕೈಗೆಟುಕುವ ಬೆಲೆ, ಹೆಚ್ಚು ಮೈಲೇಜ್ ನೀಡುವ ಮಾರುತಿ ಕಾರುಗಳಿವು...
ಕಾಲ ಕಳೆದಂತೆ ಸಾಕಷ್ಟು ಬದಲಾಗಿದ್ದರೂ, ಕಾರು ಖರೀದಿಸುವಾಗ ಮೈಲೇಜ್ ಇನ್ನೂ ಪ್ರಮುಖ ವಿಷಯವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮೈಲೇಜ್ ಹೊಂದಿರುವ ಕಾರುಗಳಿಗೆ ಭರ್ಜರಿ ಬೇಡಿಕೆಯೊಂದಿಗೆ ಮಾರಾಟವಾಗುತ್ತದೆ. ಇದರಿಂದ ಕಾರು ತಯಾರಕರು ಪೆಟ್ರೋಲ್ ಮತ್ತು ಡೀಸೆಲ್‌ಗೆ ಖರ್ಚು ಮಾಡಿದ ಹಣಕ್ಕೆ ಉತ್ತಮ ಮೌಲ್ಯವನ್ನು ಒದಗಿಸಲು ಎಂಜಿನ್‌ಗಳನ್ನು ನವೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕಾರು ತಯಾರಕರು ಪೆಟ್ರೋಲ್ ಮತ್ತು ಡೀಸೆಲ್‌ಗೆ ಖರ್ಚು ಮಾಡಿದ ಹಣಕ್ಕೆ ಉತ್ತಮ ಮೌಲ್ಯವನ್ನು ಒದಗಿಸಲು ಮಾರುತಿ ಸುಜುಕಿ (Maruti Suzuki) ದೇಶದಲ್ಲಿ ಅತ್ಯುತ್ತಮ ಮೈಲೇಜ್ ಕಾರುಗಳನ್ನು ತಯಾರಿಸುವ ಕಂಪನಿಯಾಗಿದೆ. ಹೊಸ ಕಾರು ಖರೀದಿದಾರರು ಮೈಲೇಜ್ ಜೊತೆಗೆ ಬೆಲೆಯನ್ನೂ ಪರಿಗಣಿಸುತ್ತಾರೆ ಎಂಬುದನ್ನು ನಾವು ಮರೆಯುವಂತಿಲ್ಲ. ಈ ಲೇಖನದಲ್ಲಿ ನಾವು ರೂ 10 ಲಕ್ಷದೊಳಗಿನ ಅತ್ಯುತ್ತಮ ಮೈಲೇಜ್ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮಾರುತಿ ಸೆಲೆರಿಯೊ: ಈ ಪಟ್ಟಿಯಲ್ಲಿ ಮಾರುತಿ ಸೆಲೆರಿಯೊ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮಾರುತಿ ಸೆಲೆರಿಯೊದ 1.0-ಲೀಟರ್ ಪೆಟ್ರೋಲ್ ಮ್ಯಾನುಯಲ್ ರೂಪಾಂತರ 25.24 ಕಿ.ಮೀ ವರೆಗೆ ARAI ಸ್ಟ್ಯಾಂಡರ್ಡ್ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಆಟೋಮ್ಯಾಟಿಕ್ ರೂಪಾಂತರವು 26.68 ಕಿ.ಮೀ ವರೆಗೆ ಮೈಲೇಜ್ ಪಡೆಯುತ್ತಾರೆ. ಈ ಮಾರುತಿ ಸೆಲೆರಿಯೊ ಕಾರಿನ ಎಕ್ಸ್ ಶೋ ರೂಂ ಬೆಲೆಯು 5.36 ಲಕ್ಷದಿಂದ 7.10 ಲಕ್ಷ ಆಗಿದೆ.
ಮಾರುತಿ ಎಸ್-ಪ್ರೆಸ್ಸೊ: ಹೆಚ್ಚು ಮಾರಾಟವಾಗುವ ಮಾರುತಿ ಮಾಡೆಲ್ ಅಲ್ಲದಿದ್ದರೂ, ಮೈಲೇಜ್ ವಿಷಯದಲ್ಲಿ ಎಸ್-ಪ್ರೆಸ್ಸೊ ಕಿಂಗ್ ಆಗಿದೆ. ಕಾರಿನ 1.0-ಲೀಟರ್ ಪೆಟ್ರೋಲ್ ಎಂಜಿನ್ ಆಟೋಮ್ಯಾಟಿಕ್ ರೂಪಾಂತರದಲ್ಲಿ 25.3 ಕಿ.ಮೀ ಮತ್ತು ಮ್ಯಾನುವಲ್ 24.76 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ ಎಂದು ತಯಾರಕರು ಹೇಳುತ್ತಾರೆ. ಈ ಮಾರುತಿ ಎಸ್-ಪ್ರೆಸ್ಸೊ ಕಾರಿನ ಬೆಲೆಯು ಎಕ್ಸ್ ಶೋ ರೂಂ ಬೆಲೆ 4.26 ಲಕ್ಷದಿಂದ 6.11 ಲಕ್ಷ ರೂ. ಆಗಿದೆ.

ಮಾರುತಿ ಆಲ್ಟೊ ಕೆ10: ಭಾರತದಲ್ಲಿ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಕಾರು, ಆಲ್ಟೊ ಕೆ10 ಅತ್ಯುತ್ತಮ ಮೈಲೇಜ್ ಅನ್ನು ಸಹ ನೀಡುತ್ತದೆ. ಈ ಹ್ಯಾಚ್‌ಬ್ಯಾಕ್‌ನ ಆಟೋಮ್ಯಾಟಿಕ್ ರೂಪಾಂತರವು 24.9 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ARAI ಪ್ರಮಾಣೀಕರಿಸುತ್ತದೆ ಆದರೆ ಮ್ಯಾನುಯಲ್ ರೂಪಾಂತರವು 24.39 ಕಿ.ಮೀ ಅನ್ನು ನೀಡುತ್ತದೆ. ಈ ಮಾರುತಿ ಆಲ್ಟೊ ಕೆ10 ಬೆಲೆಯು ಎಕ್ಸ್ ಶೋ ರೂಂ ಬೆಲೆ 4 ಲಕ್ಷ ಆಗಿದೆ.
ಮಾರುತಿ ವ್ಯಾಗನರ್: ಈ ಟಾಲ್‌ಬಾಯ್ ಹ್ಯಾಚ್‌ಬ್ಯಾಕ್ ಎರಡು ಎಂಜಿನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. 1.0 ಲೀಟರ್ ಆವೃತ್ತಿಯು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 24.35 ಕಿ.ಮೀ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 25.19 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಆದರೆ 1.2-ಲೀಟರ್ ಎಂಜಿನ್ ಆವೃತ್ತಿಯು 23.9 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಿನ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ 5.54 ಲಕ್ಷದಿಂದ 8.50 ಲಕ್ಷ ಆಗಿದೆ.
ಮಾರುತಿ ಸ್ವಿಫ್ಟ್: ಹೆಚ್ಚಿದ ಮೈಲೇಜ್‌ನೊಂದಿಗೆ ಮಾರುತಿ ಇತ್ತೀಚೆಗೆ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಹೊಸ 1.2-ಲೀಟರ್ Z-ಸೀರಿಸ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಟೋಮ್ಯಾಟಿಕ್ ರೂಪಾಂತರದಲ್ಲಿ 25.75 ಕಿ.ಮೀ ಮತ್ತು ಮ್ಯಾನುವಲ್ 24.8 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಹೊಸ ಮಾರುತಿ ಸ್ವಿಫ್ಟ್ ಎಕ್ಸ್ ಶೋ ರೂಂ ಪ್ರಕಾರ ಆರಂಭಿಕ ಬೆಲೆಯು ರೂ.6.50 ಲಕ್ಷವಾಗಿದೆ.

ಮಾರುತಿ ಡಿಜೈರ್: ಭಾರತದಲ್ಲಿ ಡಿಜೈರ್ ಹೆಚ್ಚು ಜನಪ್ರಿಯವಾಗಲು ಅದರ ಮೈಲೇಜ್ ಒಂದು ಕಾರಣ. ಈ ಕಾರಿನಲ್ಲಿ 1.2-ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಮ್ಯಾನುವಲ್ ರೂಪಾಂತರಗಳಲ್ಲಿ 23.26 ಕಿ.ಮೀ ಮತ್ತು ಆಟೋಮ್ಯಾಟಿಕ್ ರೂಪಾಂತರಗಳಲ್ಲಿ 23.69 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಮಾರುತಿ ಡಿಜೈರ್ ಸೆಡಾನ್ ಬೆಲೆ 6.56 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ.
ಮಾರುತಿ ಬಲೆನೊ: ಮೈಲೇಜ್ ಜೊತೆಗೆ ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುವ ಮಾರುತಿಯ ಬೆಸ್ಟ್ ಸೇಲರ್‌ಗಳಲ್ಲಿ ಬಲೆನೊ ಒಂದಾಗಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಮ್ಯಾನುವಲ್‌ನಲ್ಲಿ 22.35 ಕಿ.ಮೀ ಮತ್ತು ಆಟೋಮ್ಯಾಟಿಕ್ ರೂಪಾಂತರಗಳಲ್ಲಿ 22.94 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಮಾರುತಿ ಬಲೆನೊ ಕಾರಿನ ಎಕ್ಸ್ ಶೋ ರೂಂ ಪ್ರಕಾರ ಬೆಲೆಯು 6.66 ಲಕ್ಷದಿಂದ 9.88 ಲಕ್ಷ ರೂ. ಆಗಿದೆ.


Click it and Unblock the Notifications