Maruti: ಮಾರುತಿ ಗ್ರಾಹಕರಿಗೆ ಸಿಹಿಸುದ್ದಿ! 7 ಹೊಸ ಕಾರುಗಳು ಬರಲಿವೆ... ಮಿನಿ ಇವಿ ಕೂಡ ಇದೆ!
Maruti Suzuki: ದೈತ್ಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಹಲವಾರು ಹೊಸ ಎಲೆಕ್ಟ್ರಿಕ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಹಾಗಾದ್ರೆ ಮಾರುತಿ ಯಾವೆಲ್ಲಾ ಕಾರುಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಯಲು ಬಯಸುವ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಿದ್ದರೆ, ನಿಮಗಾಗಿ ಆ ಕಾರುಗಳ ವಿವರವಾದ ಇಲ್ಲಿದೆ.
ಮಾರುತಿ ಸುಜುಕಿ ಡಿಜೈರ್ (Maruti Suzuki Dzire): ಮಾರುತಿ ಸುಜುಕಿ 2024ರ ಡಿಜೈರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ವರದಿಗಳ ಪ್ರಕಾರ, ಈ ವರ್ಷದ ಜೂನ್‌ನಲ್ಲಿ ಪಾದಾರ್ಪಣೆ ಬಿಡುಗಡೆ ಮಾಡಲಿದ್ದಾರೆ. ಹೊಸ ಡಿಜೈರ್, ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸ್ವಿಫ್ಟ್ ಅನ್ನು ಆಧರಿಸಿದೆ. ಇದು ಹೊಸ ಮುಂಭಾಗದ ವಿನ್ಯಾಸ, ಹೊಸ ಹಿಂಭಾಗದ ವಿನ್ಯಾಸ ಮತ್ತು ಹೊಚ್ಚ ಹೊಸ ಒಳಾಂಗಣವನ್ನು ಹೊಂದಿರಲಿದೆ. ಇದು ಸಿಂಗಲ್ ಪ್ಲೇನ್ ಎಲೆಕ್ಟ್ರಿಕ್ ಸನ್ ರೂಫ್‌ನಂತಹ ಸೆಗ್ಮೆಂಟ್ ಮೊದಲ ವೈಶಿಷ್ಟ್ಯಗಳನ್ನು ಸಹ ಪಡೆದಿದೆ. ಹೊಸ ಮಾರುತಿ ಸ್ವಿಫ್ಟ್‌ನಂತೆ 25 ಕಿ.ಮೀ ಮೈಲೇಜ್ ನೀಡಲಿದೆ ಎಂದು ಹೇಳಲಾಗುತ್ತಿದೆ.

ಗ್ರ್ಯಾಂಡ್ ವಿಟಾರಾ 7 ಸೀಟರ್ (Grand Vitara 7 Seater): ಮಾರುತಿ ಸುಜುಕಿ ಹೊಸ ಗ್ರ್ಯಾಂಡ್ ವಿಟಾರಾ 7-ಸೀಟರ್ ಬಿಡುಗಡೆಗೆ ಸಜ್ಜಾಗುತ್ತಿದೆ. ಬಹುಶಃ 2025ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆಯಾಗಬಹುದು. ಈ ಮುಂಬರಲಿರುವ 7-ಸೀಟರ್ ಡಿಸೈನ್ ಹಾಗೂ ಪವರ್‌ಟ್ರೇನ್ ಅನ್ನು ಈಗಿರುವ 5-ಸೀಟರ್ ಹೈಬ್ರಿಡ್ ಎಸ್‌ಯುವಿಯೊಂದಿಗೆ ಹಂಚಿಕೊಳ್ಳಲಿದೆ.
ಇವಿಎಕ್ಸ್ ಎಲೆಕ್ಟ್ರಿಕ್ ಎಸ್ ಯುವಿ (EVX Electric SUV): ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾದ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು 2025ರ ಮೊದಲ ತ್ರೈಮಾಸಿಕದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಇವಿಎಕ್ಸ್ ಉತ್ಪಾದನೆಯನ್ನು ಯೋಜಿಸಲಾಗಿತ್ತು. ಆದರೆ ಈಗ ಅದನ್ನು ಫೆಬ್ರವರಿ 2025ಕ್ಕೆ ಮುಂದೂಡಲಾಗಿದೆ.

ಮಾರುತಿ ಸುಜುಕಿ ಪ್ರಸ್ತುತ ಬ್ಯಾಟರಿ ಪೂರೈಕೆ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುತ್ತಿದೆ. ಕಂಪನಿಯ ಈ ಮೊದಲ ಎಲೆಕ್ಟ್ರಿಕ್ ವಾಹನವನ್ನು 45 ಕಿಲೋವ್ಯಾಟ್ ಮತ್ತು 60 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಎಂಬ ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು. ಈ ಎರಡೂ ಬ್ಯಾಟರಿ ಪ್ಯಾಕ್‌ಗಳು ಒಮ್ಮೆ ಚಾರ್ಜ್ ಮಾಡಿದ್ರೆ ಕ್ರಮವಾಗಿ 415 ಕಿ.ಮೀ ಮತ್ತು 550 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿರಲಿವೆ. ಅಂದಾಜು ರೂ.25 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲಾಗುವುದು. ಶೀಘ್ರದಲ್ಲೇ ಕಂಪನಿಯು ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದೆ.
ಬಲೆನೊ ಫೇಸ್ ಲಿಫ್ಟ್ (Baleno facelift): ಭಾರತದಲ್ಲಿ ಬಲೆನೊ ಫೇಸ್ ಲಿಫ್ಟ್ ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ಕಂಪನಿಯು ಇದನ್ನು ಸ್ವಲ್ಪ ನವೀಕರಿಸಿದ ಬಾಹ್ಯ ವಿನ್ಯಾಸ, ಹೊಸ ಬಂಪರ್‌ಗಳು ಮತ್ತು ಅಲಾಯ್ ವೀಲ್‌ಗಳ ಸೆಟ್ ಅನ್ನು ನೀಡಲಿದೆ. ಹೆಚ್ಚುವರಿಯಾಗಿ, ADAS, ವೆಂಟಿಲೇಟೆಡ್ ಸೀಟುಗಳು, ಆರು ಏರ್‌ಬ್ಯಾಗ್‌ಗಳು ಸೇರಿದಂತೆ ಇತರ ಕೆಲವು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರಬಹುದು.

ಫ್ರಾಂಕ್ಸ್ ಹೈಬ್ರಿಡ್ ಮತ್ತು ಇವಿ (Fronx hybrid & EV): ವರದಿಗಳ ಪ್ರಕಾರ, ಫ್ರಾಂಕ್ಸ್ ಸರಣಿಯ ಹೈಬ್ರಿಡ್ 2025 ರಲ್ಲಿ ಪಾದಾರ್ಪಣೆ ಮಾಡಲಿದೆ. ಹೆಚ್ಚಾಗಿ, ಐಸಿಇ ಮತ್ತು ಹೈಬ್ರಿಡ್ ರೂಪಾಂತರಗಳ ನಡುವೆ ವ್ಯತ್ಯಾಸವನ್ನು ರಚಿಸಲು ಇದು ಕೆಲವು ಬಾಹ್ಯ ವಿನ್ಯಾಸ ವ್ಯತ್ಯಾಸಗಳನ್ನು ಸಹ ಪಡೆಯಲಿದೆ. ಇನ್ನು ಫ್ರಾಂಕ್ಸ್ ಇವಿ ವಿಷಯಕ್ಕೆ ಬಂದರೆ 2026 ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಮಾದರಿಯ ನಿಖರವಾದ ಪವರ್‌ಟ್ರೇನ್ ವಿಶೇಷಣಗಳನ್ನು ಬಹಿರಂಗಪಡಿಸಿಲ್ಲ.
ಮಾರುತಿ eWX (ಮಿನಿ EV): ಇವಿಎಕ್ಸ್ ಬಿಡುಗಡೆಯಾದ ನಂತರ 2026 ರಲ್ಲಿ ಬಿಡುಗಡೆಯಾಗಲಿರುವ ಇಡಬ್ಲ್ಯುಎಕ್ಸ್ ಮಾರುತಿ ಸುಜುಕಿಯ ಮಿನಿ ಎಲೆಕ್ಟ್ರಿಕ್ ಕಾರಾಗಿದೆ. ಹೊಸ ಕೆ-ಇವಿ ಪ್ಲಾಟ್ ಫಾರ್ಮ್ ಅನ್ನು ಆಧರಿಸಿರುವ ಈ ಕಾರು ಭಾರತದಲ್ಲಿ ಬಹಳ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರುತ್ತದೆ. ವರದಿಗಳ ಪ್ರಕಾರ, ಇದನ್ನು 25 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡಲಾಗುವುದು. ಅಂದಾಜು 230 ಕಿ.ಮೀ ರೇಂಜ್ ನೀಡಲಿದೆ.


Click it and Unblock the Notifications