Maruti suzuki Wagon R: ಈ ರೂಪಾಂತರಗಳ ಬೆಲೆ ಇಳಿಕೆ.. 5.54 ಲಕ್ಷ ಬೆಲೆ, 34 ಕಿ.ಮೀ ಮೈಲೇಜ್
ಮಾರುತಿ ಸುಜುಕಿ (Maruti Suzuki) ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಜನಮನ್ನಣೆ ಗಳಿಸಿದೆ. ಈ ಜನವರಿಯಿಂದ ಜಾರಿಗೆ ಬರುವಂತೆ ಅರೆನಾ ಮತ್ತು ನೆಕ್ಸಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ವಿವಿಧ ಮಾದರಿಗಳ ಬೆಲೆಯನ್ನು ಪರಿಷ್ಕರಿಸುತ್ತಿದೆ. ಸದ್ಯ, ಜನಪ್ರಿಯ ಹ್ಯಾಚ್‌ಬ್ಯಾಕ್ ವ್ಯಾಗನ್ಆರ್ ಆಯ್ದ ರೂಪಾಂತರಗಳ ಬೆಲೆ ಕೊಂಚ ಇಳಿಕೆಯಾಗಿದೆ.
ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki Wagon R) ಕಾರಿನ ವಿಎಕ್ಸ್ಐ 1.0 ಎಜಿಎಸ್, ಝಡ್ಎಕ್ಸ್ಐ 1.2 ಎಜಿಎಸ್, ಝಡ್ಎಕ್ಸ್ಐ ಪ್ಲಸ್ 1.2 ಎಜಿಎಸ್,ಝಡ್ಎಕ್ಸ್ಐ ಪ್ಲಸ್ 1.2 ಎಜಿಎಸ್ ಡುಯಲ್ ಟೋನ್ ರೂಪಾಂತರಗಳ ಬೆಲೆಯನ್ನು ರೂ.5,000 ಕಡಿಮೆ ಮಾಡಲಾಗಿದೆ. ಉಳಿದಂತೆ ಇತರೆ ರೂಪಾಂತರಗಳ ದರ ಯಾವುದೇ ರೀತಿಯಲ್ಲಿ ಬದಲಾಗದೆ ಹಾಗೆಯೇ ಇದೆ.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ವ್ಯಾಗನ್ಆರ್, ರೂ.5.54 ಲಕ್ಷದಿಂದ ರೂ.7.37 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಗ್ಯಾಲಂಟ್ ರೆಡ್, ಪೂಲ್‌ಸೈಡ್ ಬ್ಲೂ, ಸುಪೀರಿಯರ್ ವೈಟ್, ಸಿಲ್ಕಿ ಸಿಲ್ವರ್, ಮ್ಯಾಗ್ಮಾ ಗ್ರೇ ಸೇರಿದಂತೆ 2 ಡುಯಲ್ ಟೋನ್, 6 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಈ ಕಾರು ದೊರೆಯುತ್ತದೆ.
ಈ ಮಾರುತಿ ಸುಜುಕಿ ವ್ಯಾಗನ್ಆರ್ ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 1-ಲೀಟರ್ ಪೆಟ್ರೋಲ್ ಎಂಜಿನ್ 67 ಪಿಎಸ್ ಪವರ್ (ಶಕ್ತಿ), 89 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು, 1.2-ಲೀಟರ್ ಪೆಟ್ರೋಲ್ ಎಂಜಿನ್ 90 ಪಿಎಸ್ ಹಾಗೂ 113 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲು ಶಕ್ತವಾಗಿದೆ.
ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್/ 5-ಸ್ವೀಡ್ ಅಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಸಿಎನ್‌ಜಿ ಕಿಟ್ ಪಡೆದಿರುವ ಕಾರು, 998 ಸಿಸಿ ಎಂಜಿನ್ ಹೊಂದಿದ್ದು, 55.92 ಪಿಎಸ್ ಪವರ್ ಮತ್ತು 82 ಪೀಕ್ ಟಾರ್ಕ್ ಹೊರಹಾಕುತ್ತದೆ. ಮೈಲೇಜ್ ವಿಚಾರವಾಗಿ ಹೇಳುವುದಾದರೆ, ಪೆಟ್ರೋಲ್ ರೂಪಾಂತರಗಳು 23.56 ಕೆಎಂಪಿಎಲ್ ನಿಂದ 25.19 ಕೆಎಂಪಿಎಲ್, ಸಿಎನ್‌ಜಿ ರೂಪಾಂತರಗಳು ಪ್ರತಿ ಕೆಜಿಗೆ 34.05 ಕಿ.ಮೀ ಇಂಧನ ದಕ್ಷತೆಯನ್ನು ಹೊಂದಿವೆ.
ಮಾರುತಿ ಸುಜುಕಿ ವ್ಯಾಗನ್ಆರ್ ವಿನ್ಯಾಸದ ದೃಷ್ಟಿಯಿಂದಲೂ ಅತ್ಯತ್ತಮವಾಗಿದ್ದು, ಈ ಕಾರಿನಲ್ಲಿ 5 ಮಂದಿ ಪ್ರಯಾಣಿಸಬಹುದು. 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೋ, ಫೋನ್ ಕಂಟ್ರೋಲ್ ಸೇರಿದಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ 341 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದಿದೆ.
ಈ ವ್ಯಾಗನ್ಆರ್ ಉತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೇನಾರ್ಸ್, ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಪಡೆದಿದೆ. ಈ ಕಾರಿಗೆ ಟಾಟಾ ಟಿಯಾಗೊ, ಸಿಟ್ರಸ್ ಸಿ3 ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಇನ್ನು, ಮಾರುತಿ ಸುಜುಕಿ ವ್ಯಾಗನ್ಆರ್ ಪುಟ್ಟ ಕಾರಾಗಿದ್ದು, ಹೆಚ್ಚಿನ ಮೈಲೇಜ್ ನೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಈಗಾಗಲೇ ಬಹುತೇಕರ ಆದ್ಯತೆಯ ವಾಹನವಾಗಿದೆ. ಕಂಪನಿಯು ಮತ್ತಷ್ಟು ಸಂಖ್ಯೆಯಲ್ಲಿ ಮಧ್ಯಮ ವರ್ಗದವರನ್ನು ಸೆಳೆಯಲು ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಫ್ಲೆಕ್ಸ್ ಫ್ಯುಯೆಲ್ (Flex Fuel) ಚಾಲಿತ ವ್ಯಾಗನ್ಆರ್ ಕಾರನ್ನು ಪ್ರದರ್ಶಿಸಿದೆ. ಇದು ಪೆಟ್ರೋಲ್ ಮತ್ತು ಎಥೆನಾಲ್ ನೆರವಿನಿಂದ ಚಲಿಸಬಲ್ಲದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications