ಭಾರತದ ನಂ.1 ಕಾರು... ದಾಖಲೆಯ ಮಾರಾಟ... 5.5 ಲಕ್ಷ ಬೆಲೆ... 34 ಕಿ.ಮೀ ಮೈಲೇಜ್
ಮಾರುತಿ ಸುಜುಕಿ (Maruti Suzuki) ಫೆಬ್ರವರಿ 2024 ರಲ್ಲಿ ಟಾಪ್ 10 ಕಾರು ಮಾರಾಟ ಪಟ್ಟಿಯಲ್ಲಿ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಜೊತೆಗೆ ಮಾರುತಿ ವ್ಯಾಗನ್ ಆರ್ ಕಾರು ಭಾರತೀಯರ ನೆಚ್ಚಿನ ಕಾರಾಗಿ ಹೊರಹೊಮ್ಮಿದ್ದು, ಇನ್ಯಾವುದೇ ಕಾರಿಗಿಲ್ಲದ ಮಾರಾಟ ದಾಖಲೆಯನ್ನು ನಿರ್ಮಿಸಿದೆ.
ಫೆಬ್ರವರಿ 2024 ರಲ್ಲಿ ಎಲ್ಲಾ ಬ್ರಾಂಡ್‌ಗಳ ಕಾರುಗಳು ಸೇರಿ ಒಟ್ಟು 1,61,378 ಯುನಿಟ್‌ಗಳು ಮಾರಾಟವಾಗಿದ್ದರೇ, ಇದರಲ್ಲಿ ವ್ಯಾಗನ್ ಆರ್‌ನ ಬರೋಬ್ಬರಿ 19,412 ಕಾರುಗಳು ಮಾರಾಟವಾಗಿವೆ. ಈ ಮೂಲಕ ಟಾಪ್ 10 ಕಾರುಗಳ ಮಾರಾಟದಲ್ಲಿ ವ್ಯಾಗನ್ಆರ್ ಶೇ12.03 ರಷ್ಟು ಪಾಲನ್ನು ಧಕ್ಕಿಸಿಕೊಂಡಿದೆ. ಅಲ್ಲದೇ ಶೇ 14.94 ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ಮಾರುತಿ ವ್ಯಾಗನ್ ಆರ್ ವಿಶೇಷತೆಗಳು: ಮಾರುತಿ ವ್ಯಾಗನ್ ಆರ್, ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 5,54,500 ಆಗಿದೆ. ಮಾರುತಿ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಮಾದರಿಯು LXi, VXi, ZXi ಮತ್ತು ZXi ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಪ್ರಸುತ, ಮಾರುತಿ ಸುಜುಕಿ ವ್ಯಾಗನ್‍ಆರ್ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ.
ವೈಶಿಷ್ಟ್ಯಗಳು: ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಆಂಡ್ರಾಯ್ಡ್ ಆಟೋ ಮತ್ತು Apple CarPlay ಕನೆಕ್ಟಿವಿಟಿ, ಮ್ಯಾನ್ಯುವಲ್ AC, ಸೆಂಟ್ರಲ್ ಲಾಕಿಂಗ್, ಡಲ್ ಸ್ಟಾರ್ಟ್/ಸ್ಟಾಪ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟ್ಯಾಕೋಮೀಟರ್, ವಿಂಗ್ ಮಿರರ್‌ಗಳಲ್ಲಿ ಟರ್ನ್ ಇಂಡಿಕೇಟರ್‌ಗಳು, ಫ್ರಂಟ್ ಫಾಗ್ ಲ್ಯಾಂಪ್‌ಗಳು ಮತ್ತು 4 ಸ್ಪೀಕರ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ, ಡ್ಯುಯಲ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, EBD ಜೊತೆಗೆ ABS, ಸ್ಪೀಡ್ ಅಲರ್ಟ್‌ಗಳು ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಹೊಂದಿದೆ. ಫ್ರಂಟ್ ಪ್ಯಾಸೆಂಜರ್ ಸೈಡ್ ಸೀಟ್ ಅಂಡರ್ ಟ್ರೇ, ಎಲೆಕ್ಟ್ರಿಕಲ್ ಫೋಲ್ಡಿಂಗ್ ವಿಂಗ್ ಮಿರರ್‌ಗಳು, ರಿಯರ್ ವೈಪರ್, ವಾಷರ್ ಮತ್ತು ಡಿಫೊಗರ್ ಮತ್ತು 14-ಇಂಚಿನ ಅಲಾಯ್ ವ್ಹೀಲ್ ಗಳನ್ನು ಟಾಪ್-ಸ್ಪೆಕ್ ZXi+ ಗಾಗಿ ಕಾಯ್ದಿರಿಸಲಾಗಿದೆ.
ಪ್ರಸ್ತುತ, ಮಾರುತಿ ವ್ಯಾಗನ್ಆರ್ (Maruti WagonR) ಕಾರಿನಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 1.0 ಲೀಟರ್ ಲೀಟರ್ ಎಂಜಿನ್ 66bhp ಮತ್ತು 89Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಸಿಎನ್‌ಜಿ ಆವೃತ್ತಿ ಕೂಡ ಇದ್ದು, ಇದು 34 ಕಿ.ಮೀ ಮೈಲೇಜ್ ನೀಡುತ್ತದೆ.

ಇನ್ನು ದೊಡ್ಡ 1.2ಲೀಟರ್ ಇನ್‌ಲೈನ್ ನಾಲ್ಕು-ಸಿಲಿಂಡರ್ ಎಂಜಿನ್ 88bhp ಮತ್ತು 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಮೋಟಾರ್‌ಗಳು ಡ್ಯುಯಲ್‌ಜೆಟ್, ಡ್ಯುಯಲ್ ವಿವಿಟಿ, ಐಎಸ್‌ಎಸ್ (ಐಡಲ್ ಸ್ಟಾರ್ಟ್ ಸ್ಟಾಪ್) ತಂತ್ರಜ್ಞಾನ ಮತ್ತು ಕೂಲ್ಡ್ ಇಜಿಆರ್ (ಎಕ್ಸಾಸ್ಟ್ ಗ್ಯಾಸ್ ರಿಸರ್ಕ್ಯುಲೇಷನ್) ಅನ್ನು ಹೊಂದಿವೆ. ಇದರ ಹೊಸ ತಂತ್ರಜ್ಞಾನವು ಅದರ ಮೈಲೇಜ್ ಹೆಚ್ಚಿಸಿ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications