Maruti: ಬಡವರ ಬಂಧು, 5.5 ಲಕ್ಷ ಬೆಲೆ: ತಿಂಗಳಲ್ಲಿ 19,412 ಮಂದಿ ಖರೀದಿ: 34 ಕಿ.ಮೀ ಮೈಲೇಜ್
ಮಾರುತಿ ಸುಜುಕಿ (Maruti Suzuki) ಭಾರತದಲ್ಲಿ ಕೆಲ ದಶಕಗಳಿಂದ ಅಗ್ರ ಸ್ಥಾನದಲ್ಲಿ ಮುಂದುವೆರೆಯುತ್ತಿದೆ. ಫೆಬ್ರವರಿ 2024 ರಲ್ಲಿ ಟಾಪ್ 10 ಪಟ್ಟಿಯಲ್ಲೂ ಪ್ರಾಬಲ್ಯವನ್ನು ಮುಂದುವರೆಸಿದೆ. ಟಾಪ್ 10 ಕಾರುಗಳಲ್ಲಿ ಆಶ್ಚರ್ಯಕರವಾಗಿ 6 ಕಾರುಗಳು ಮಾರುತಿ ಕಾರುಗಳಾಗಿವೆ. ಇದರಲ್ಲಿ ವ್ಯಾಗನ್ ಆರ್ ಕಾರು ಭಾರತೀಯರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ.
ಫೆಬ್ರವರಿ 2024 ರಲ್ಲಿ ಎಲ್ಲಾ ಬ್ರಾಂಡ್‌ಗಳ ಕಾರುಗಳು ಸೇರಿ ಒಟ್ಟು 1,61,378 ಯುನಿಟ್‌ಗಳು ಮಾರಾಟವಾಗಿದ್ದು, ಇದರಲ್ಲಿ ಬರೋಬ್ಬರಿ 19,412 ಕಾರುಗಳು ಮಾರಾಟವಾಗಿವೆ. ಈ ಮೂಲಕ ಮಾರುತಿ ವ್ಯಾಗನ್ ಆರ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ವಾರ್ಷಿಕವಾಗಿ ಶೇ 14.94 ರಷ್ಟು ಬೆಳವಣಿಗೆಯನ್ನು ಸಾಧಿಸಿ, ಟಾಪ್ 10 ಕಾರುಗಳಲ್ಲಿ ವ್ಯಾಗನ್ಆರ್ ಪಾಲು ಶೇ12.03 ರಷ್ಟು ಧಕ್ಕಿಸಿಕೊಂಡಿದೆ.

ಮಾರುತಿ ವ್ಯಾಗನ್‍ಆರ್ ಕಡಿಮೆ ಬೆಲೆಗೆ ಲಭ್ಯವಿರುವುದು ಮತ್ತು ಹೆಚ್ಚಿನ ಮೈಲೇಜ್ ನೀಡುತ್ತಿರುವುದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಗ್ರಾಹಕರಲ್ಲಿ ಭಾರೀ ಸ್ವೀಕಾರ ಪಡೆಯುತ್ತಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ. ಮಾರುತಿ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಮಾದರಿಯು LXi, VXi, ZXi ಮತ್ತು ZXi ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಈ ಮಾದರಿಯ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 5,54,500 ಆಗಿದೆ.
ಪ್ರಸುತ, ಮಾರುತಿ ಸುಜುಕಿ ವ್ಯಾಗನ್‍ಆರ್ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ, ಮಾರುತಿ ವ್ಯಾಗನ್ಆರ್ (Maruti WagonR) ಕಾರಿನಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 1.0 ಲೀಟರ್ ಲೀಟರ್ ಎಂಜಿನ್ 66bhp ಮತ್ತು 89Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಸಿಎನ್‌ಜಿ ಆವೃತ್ತಿ ಕೂಡ ಇದ್ದು, ಇದು 34 ಕಿ.ಮೀ ಮೈಲೇಜ್ ನೀಡುತ್ತದೆ.

ಇನ್ನು ದೊಡ್ಡ 1.2ಲೀಟರ್ ಇನ್‌ಲೈನ್ ನಾಲ್ಕು-ಸಿಲಿಂಡರ್ ಎಂಜಿನ್ 88bhp ಮತ್ತು 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಮೋಟಾರ್‌ಗಳು ಡ್ಯುಯಲ್‌ಜೆಟ್, ಡ್ಯುಯಲ್ ವಿವಿಟಿ, ಐಎಸ್‌ಎಸ್ (ಐಡಲ್ ಸ್ಟಾರ್ಟ್ ಸ್ಟಾಪ್) ತಂತ್ರಜ್ಞಾನ ಮತ್ತು ಕೂಲ್ಡ್ ಇಜಿಆರ್ (ಎಕ್ಸಾಸ್ಟ್ ಗ್ಯಾಸ್ ರಿಸರ್ಕ್ಯುಲೇಷನ್) ಅನ್ನು ಹೊಂದಿವೆ. ಇದರ ಹೊಸ ತಂತ್ರಜ್ಞಾನವು ಅದರ ಮೈಲೇಜ್ ಹೆಚ್ಚಿಸಿ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.
ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರು ಆಂಡ್ರಾಯ್ಡ್ ಆಟೋ ಮತ್ತು Apple CarPlay ಕನೆಕ್ಟಿವಿಯೊಂದಿಗೆ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟ್ಯಾಕೋಮೀಟರ್, ವಿಂಗ್ ಮಿರರ್‌ಗಳಲ್ಲಿ ಟರ್ನ್ ಇಂಡಿಕೇಟರ್‌ಗಳು, ಫ್ರಂಟ್ ಫಾಗ್ ಲ್ಯಾಂಪ್‌ಗಳು ಮತ್ತು 4 ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ ಮ್ಯಾನ್ಯುವಲ್ AC, ಸೆಂಟ್ರಲ್ ಲಾಕಿಂಗ್, ಡಲ್ ಸ್ಟಾರ್ಟ್/ಸ್ಟಾಪ್ ಮತ್ತು 13-ಇಂಚಿನ ಸ್ಟೀಲ್ ವ್ಹೀಲ್ ಗಳನ್ನು ಹೊಂದಿದೆ.

ಫ್ರಂಟ್ ಪ್ಯಾಸೆಂಜರ್ ಸೈಡ್ ಸೀಟ್ ಅಂಡರ್ ಟ್ರೇ, ಎಲೆಕ್ಟ್ರಿಕಲ್ ಫೋಲ್ಡಿಂಗ್ ವಿಂಗ್ ಮಿರರ್‌ಗಳು, ರಿಯರ್ ವೈಪರ್, ವಾಷರ್ ಮತ್ತು ಡಿಫೊಗರ್ ಮತ್ತು 14-ಇಂಚಿನ ಅಲಾಯ್ ವ್ಹೀಲ್ ಗಳನ್ನು ಟಾಪ್-ಸ್ಪೆಕ್ ZXi+ ಗಾಗಿ ಕಾಯ್ದಿರಿಸಲಾಗಿದೆ. ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ, ಡ್ಯುಯಲ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, EBD ಜೊತೆಗೆ ABS, ಸ್ಪೀಡ್ ಅಲರ್ಟ್‌ಗಳು ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಹೊಂದಿದೆ.
ಮಾರುತಿ ವ್ಯಾಗನ್ಆರ್ ಫ್ಲೆಕ್ಸ್-ಫ್ಯುಯಲ್ ಹ್ಯಾಚ್‌ಬ್ಯಾಕ್ ಕೂಡ ಕಳೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಕಾಣಿಸಿಕೊಂಡಿತು. ಕಂಪನಿಯು ಫ್ಲೆಕ್ಸ್-ಇಂಧನ ವಾಹನಗಳನ್ನು ಹೊರತರಲು ಸಿದ್ಧವಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಹ್ಯಾಚ್‌ಬ್ಯಾಕ್‌ನ ಫ್ಲೆಕ್ಸ್-ಫ್ಯೂಯಲ್ ಆವೃತ್ತಿಯ ಉತ್ಪಾದನೆಯು 2025 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.


Click it and Unblock the Notifications