ಡಾಕ್ಟರ್, ಇಂಜಿನಿಯರ್‌ಗಳ ಅಗ್ಗದ ಬೆಲೆಯ ಫೇವರೆಟ್ ಕಾರು: ಲಿಮಿಟೆಡ್ ಎಡಿಷನ್ ವಿಶೇಷತೆಗಳು!

ಮಾರುತಿ ಸುಜುಕಿಯು ಇತ್ತೀಚೆಗೆ ಹೊಸ ವ್ಯಾಗನ್ ಆರ್ ಎಲ್ಎಕ್ಸ್ಐ ವಾಲ್ಟ್ಜ್ ಎಡಿಷನ್ (Wagon R LXI Waltz Edition) ಅನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ವ್ಯಾಗನ್ ಆರ್‌ಗಿಂತ ಹೆಚ್ಚುವರಿ ವೈಶಿಷ್ಟ್ಯಗಳು ಹಾಗೂ ಕಾಸ್ಮೆಟಿಕ್ ನವೀಕರಣಗಳನ್ನು ನೀಡಲಾಗಿದೆ. ಎಂದಿನಂತೆ ಇದು 5 ಸೀಟರ್ ಪೆಟ್ರೋಲ್ ಕಾರಾಗಿದ್ದು, ವ್ಯಾಗನ್ ಆರ್ ಎಲ್ಎಕ್ಸ್ಐ ವಾಲ್ಟ್ಜ್ ಎಡಿಷನ್‌ನಲ್ಲಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಫ್ರಂಟ್ ಪವರ್ ವಿಂಡೋಸ್, ವ್ಹೀಲ್ ಕವರ್‌ಗಳು, ಪ್ಯಾಸೆಂಜರ್ ಹಾಗೂ ಡ್ರೈವರ್ ಏರ್‌ಬ್ಯಾಗ್ ಅನ್ನು ನೀಡಲಾಗಿದೆ. ಈ ಹೊಸ ಎಡಿಷನ್‌ನ ಬೆಲೆ ಹಾಗೂ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಮಾರುತಿ ಸುಜುಕಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ ಅನ್ನು ಇತ್ತೀಚೆಗೆ 5,64,671 ರೂ.ಗಳಿಗೆ (ಎಕ್ಸ್ ಶೋರೂಂ) ಬಿಡುಗಡೆ ಮಾಡಲಾಯಿತು. 2024 ರಲ್ಲಿ ಮಾರುತಿಯ ಹೆಚ್ಚು ಮಾರಾಟವಾದ ಕಾರಿನ ಈ ಸೀಮಿತ ಆವೃತ್ತಿಯಲ್ಲಿ ಕಾಸ್ಮೆಟಿಕ್ ನವೀಕರಣಗಳು ಮತ್ತು ಹೆಚ್ಚುವರಿ ವೈಶಿಷ್ಟ್ಯಗಳಿಗೆ ಇವು ಕೊಡುಗೆ ನೀಡುತ್ತವೆ.

maruti-suzuki-wagon-r-waltz-edition-price-features-mileage-details

ಹೊಸ ನವೀಕರಣ & ವೇರಿಯೆಂಟ್: ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ ಕಾರಿನಲ್ಲಿ ಕ್ರೋಮ್ ಗ್ರಿಲ್, ಬಂಪರ್ ಪ್ರೊಟೆಕ್ಟರ್‌ಗಳು, ವ್ಹೀಲ್ ಆರ್ಚ್ ಕ್ಲಾಡಿಂಗ್, ಹೊಸ ಫಾಗ್ ಲ್ಯಾಂಪ್‌ಗಳು, ಸೈಡ್ ಸ್ಕರ್ಟ್‌ಗಳು ಮತ್ತು ಬಾಡಿ ಸೈಡ್ ಮೌಲ್ಡಿಂಗ್ ಅನ್ನು ಅಳವಡಿಸಲಾಗಿದೆ. ವಾಲ್ಟ್ಜ್ ಲಿಮಿಟೆಡ್ ಎಡಿಷನ್ ಅನ್ನು ಎಲ್‌ಎಕ್ಸ್‌ಐ, ವಿಎಕ್ಸ್‌ಐ ಮತ್ತು ಝಡ್‌ಎಕ್ಸ್‌ಐ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ.

ಎಂಜಿನ್ & ಮೈಲೇಜ್: ಕಂಪನಿಯ ಪ್ರಕಾರ ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ 24.35 ಕಿ.ಮೀ ಮೈಲೇಜ್ ನೀಡುತ್ತದೆ. ಇದು 1.0 ಲೀ. ಮತ್ತು 1.2ನ ಎರಡು ಕೆ-ಸೀರಿಸ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 1.0 ಲೀ. ಪೆಟ್ರೋಲ್ ಎಂಜಿನ್ 65.7 ಬಿಹೆಚ್ ಪವರ್ ಹಾಗೂ 89 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

maruti-suzuki-wagon-r-waltz-edition-price-features-mileage-details

ಇನ್ನು 1.2 ಲೀಟರಿನ ಪೆಟ್ರೋಲ್ ಎಂಜಿನ್ 88.5 ಬಿಹೆಚ್ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡು ಎಂಜಿನ್‌ ಆಯ್ಕೆಗಳಲ್ಲಿ ಬರುವ ಕಾರು ಮ್ಯಾನುವಲ್‌ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಿದೆ. ಉಳಿದಂತೆ ಮಾರುತಿ ವ್ಯಾಗನ್ ಆರ್ ಎಲ್ಎಕ್ಸ್ಐ ವಾಲ್ಟ್ಜ್ ಎಡಿಷನ್ ವೇರಿಯೆಂಟ್ 9 ಬಣ್ಣಗಳಲ್ಲಿ ಲಭ್ಯವಿದೆ.

ಫೀಚರ್ಸ್ & ಇಂಟೀರಿಯರ್: 6.2 - ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ಸ್ಪೀಕರ್‌ಗಳನ್ನು ಒಳಗೊಂಡಿದೆ. ಕ್ಯಾಬಿನ್ ಒಳಗೆ ಡಿಸೈನರ್ ಫ್ಲೋರ್‌ ಮ್ಯಾಟ್‌ಗಳು ಮತ್ತು ಸೀಟ್ ಕವರ್‌ಗಳನ್ನು ಒಳಗೊಂಡಿರುವ ಒಳಾಂಗಣ ಸ್ಟೈಲಿಂಗ್ ಕಿಟ್ ಅನ್ನು ನೀಡಲಾಗಿದೆ.

maruti-suzuki-wagon-r-waltz-edition-price-features-mileage-details

ಈ ಬೆಲೆ ಶ್ರೇಣಿಯಲ್ಲಿ, ನೀವು ಟಾಟಾ ಪಂಚ್ ಪ್ಯೂರ್ ಅನ್ನು ಸಹ ಪರಿಗಣಿಸಬಹುದು, ಇದರ ಬೆಲೆ ರೂ.6.13 (ಎಕ್ಸ್‌ ಶೋರೂಂ) ಲಕ್ಷವಿದೆ. ಮಾರುತಿ ಸ್ವಿಫ್ಟ್ ಎಲ್ಎಕ್ಸ್ಐ ಕಾರಿನ ಬೆಲೆಯು ರೂ.6.49 (ಎಕ್ಸ್‌ ಶೋರೂಂ) ಲಕ್ಷಗಳಾದರೆ, ಮಾರುತಿ ಸೆಲೆರಿಯೊ ವಿಎಕ್ಸ್ಐ ಕಾರಿನ ಬೆಲೆಯು ರೂ.5.83 (ಎಕ್ಸ್‌ ಶೋರೂಂ) ಲಕ್ಷಗಳಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, October 3, 2024, 10:17 [IST]
English summary
Maruti suzuki wagon r waltz edition price features mileage details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+