Maruti Suzuki: ಮಾರುತಿ ಎಕ್ಸ್ಎಲ್6 ಕಾರಿನ ಮಾರಾಟ ವಿವರ.. 26 Km ಮೈಲೇಜ್.. 11 ಲಕ್ಷ ಬೆಲೆ, 6 ಜನ ಹೋಗಬಹುದು!

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ನೆಕ್ಸಾ ಹಾಗೂ ಅರೆನಾ ಡೀಲರ್‌ಶಿಪ್ ಮೂಲಕ ಆಲ್ಟೊ, ಸೆಲೆರಿಯೊ, ಬಲೆನೊ, ಫ್ರಾಂಕ್ಸ್, ವ್ಯಾಗನ್ಆರ್, ಇಗ್ನಿಸ್, ಜಿಮ್ನಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಮೇನಲ್ಲಿ ಕೆಲವೊಂದು ಹ್ಯಾಚ್‌ಬ್ಯಾಕ್ ಹಾಗೂ ಎಂಪಿವಿ ಮಾರಾಟದಲ್ಲಿ ಕೊಂಚ ಮಟ್ಟಿಗೆ ನಷ್ಟ ಅನುಭವಿಸಿದೆ. ಎಕ್ಸ್ಎಲ್6 (XL6) ಕಾರಿನ ಮಾರಾಟ ಅಂಕಿಅಂಶವನ್ನು ನೋಡುವುದಾದರೆ, 3,241 ಯುನಿಟ್ ಮಾರಲಾಗಿದ್ದು, 2023ರ ಮೇ ತಿಂಗಳಿಗೆ ಹೋಲಿಸಿದರೆ (3,577 ಯುನಿಟ್) ಶೇಕಡ 9.39% ಕುಸಿತವನ್ನು ಕಂಡಿದೆ.

ಜನಪ್ರಿಯ ಎಂಪಿವಿಯಾಗಿದ್ದರೂ 'ಮಾರುತಿ ಸುಜುಕಿ ಎಕ್ಸ್ಎಲ್6' ಮಾರಾಟ ಪ್ರಮಾಣ ಇಳಿಕೆಯಾಗಿರುವ ಬಗ್ಗೆ ನಿಖರವಾದ ಕಾರಣಗಳು ಬಹಿರಂಗಗೊಂಡಿಲ್ಲ. ಆದಾಗ್ಯೂ, ಮುಂಬರುವ ತಿಂಗಳಲ್ಲಿ ಮಾರಾಟವು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಸದ್ಯ ದೇಶೀಯವಾಗಿ ಖರೀದಿಗೆ ದೊರೆಯುವ ಮಾರುತಿ ಎಕ್ಸ್ಎಲ್6 ಎಂಪಿವಿ ರೂ.11.61 ಲಕ್ಷದಿಂದ ರೂ.14.77 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Maruti Suzuki XL6 Car May 2024 Sales Report Rs 11 Lakh Price 26 Km Mileage

ಈ ಕಾರು ಆಕರ್ಷಕವಾದ ವಿನ್ಯಾಸ (ಡಿಸೈನ್)ವನ್ನು ಹೊಂದಿದ್ದು, ಜಿಟಾ, ಆಲ್ಫಾ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಿಗುತ್ತದೆ. ನೆಕ್ಸಾ ಬ್ಲೂ, ಒಪ್ಯುಲೆಂಟ್ ರೆಡ್, ಬ್ರೇವ್ ಖಾಕಿ, ಗ್ರ್ಯಾಂಡ್ಯೂರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಪರ್ಲ್ ಮಿಡ್ನೈಟ್ ಬ್ಲಾಕ್ ಒಳಗೊಂಡಂತೆ ಹಲವು ಬಣ್ಣ(ಕಲರ್)ಗಳನ್ನು ಪಡೆದಿದೆ.

ನೂತನ ಮಾರುತಿ ಸುಜುಕಿ ಎಕ್ಸ್ಎಲ್6 ಎಂಪಿವಿ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಸಿಗುತ್ತದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್ 103 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 137 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

Maruti Suzuki XL6 Car May 2024 Sales Report Rs 11 Lakh Price 26 Km Mileage

ಸಿಎನ್‌ಜಿ ಚಾಲಿತ ಕಾರು ಇದೇ ಎಂಜಿನ್ ಆಯ್ಕೆಯನ್ನು ಪಡೆದಿದೆ. ಆದರೆ 88 ಪಿಎಸ್ ಪವರ್ ಮತ್ತು 121.5 ಎನ್ಎಂ ಪೀಕ್ ಟಾರ್ಕ್ ಹೊರಹಾಕಲಷ್ಟೇ ಶಕ್ತವಾಗಿದ್ದು, ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಮಾತ್ರ ಪಡೆದಿದೆ. 20.27 ರಿಂದ 26.32 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 6 ಮಂದಿ ಆರಾಮದಾಯಕವಾಗಿ ಪ್ರಯಾಣಿಯಬಹುದು.

ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಎಂಪಿವಿ ಹತ್ತಾರು ವೈಶಿಷ್ಟ್ಯವನ್ನು ಹೊಂದಿದೆ. 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪ್ಯಾಡಲ್ ಶಿಫ್ಟರ್ಸ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, 360-ಡಿಗ್ರಿ ಕ್ಯಾಮೆರಾ, ಕ್ರೂಸ್ ಕಂಟ್ರೋಲ್ ಹಾಗೂ ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Maruti Suzuki XL6 Car May 2024 Sales Report Rs 11 Lakh Price 26 Km Mileage

ಎಕ್ಸ್ಎಲ್6 ಕಾರು ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. 4 ಏರ್‌ಬ್ಯಾಗ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಅನ್ನು ಹೊಂದಿದೆ. ಈ ಎಂಪಿವಿಗೆ ಕಿಯಾ ಕ್ಯಾರೆನ್ಸ್, ಮಹೀಂದ್ರಾ ಮರಾಜ್ಜೊ, ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರುಗಳು ದೊಡ್ಡ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, June 27, 2024, 17:19 [IST]
English summary
Maruti suzuki xl6 car may 2024 sales report rs 11 lakh price 26 km mileage
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+