ಟಾಟಾದ ಅವಳಿ CNG ಟ್ಯಾಂಕ್‌ ಸೆಟಪ್‌ನಂತಯೇ ಮಾರುತಿಯ ಹೊಸ CNG ಕಾರುಗಳು!

ಮಾರುತಿ ಸುಜುಕಿ ತನ್ನ ಪ್ರಯಾಣಿಕ CNG ವಾಹನಗಳಿಗೆ ಟ್ವಿನ್-ಟ್ಯಾಂಕ್ ಸೆಟಪ್ ಅನ್ನು ಪರಿಚಯಿಸಲು ನೋಡುತ್ತಿದೆ. ಮಾರುತಿಯ S-CNG ಫ್ಲೀಟ್ ಆಗಿರುವ ಆಲ್ಟೋ ಕೆ 10, ವ್ಯಾಗನ್ ಆರ್, ಡಿಜೈರ್, ಸೆಲೆರಿಯೊ, ಇಕೋ, ಎಸ್-ಪ್ರೆಸ್ಸೊ, ಫ್ರಾಂಕ್ಸ್, ಎರ್ಟಿಗಾ, ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾಗಳು ಟ್ವಿನ್-ಟ್ಯಾಂಕ್ ಸೆಟಪ್ ಪಡೆಯುವ ಸಾಧ್ಯತೆಯಿದೆ. ಹೊಸ ತಲೆಮಾರಿನ ಸ್ವಿಫ್ಟ್ ಕೂಡ ಶೀಘ್ರದಲ್ಲೇ ಸಿಎನ್‌ಜಿ ಆಯ್ಕೆಯನ್ನು ಪಡೆಯಲಿದೆ. ಇವು ತಲಾ 25 ರಿಂದ 30 ಲೀಟರ್ ಸಾಮರ್ಥ್ಯವನ್ನು ಹೊಂದಿರಬಹುದು. ಟ್ವಿನ್ ಟ್ಯಾಂಕ್ ಸೆಟಪ್ ಜೊತೆಗೆ ಬಿಡಿ ಟೈರ್ ಅನ್ನು ಬೂಟ್‌ನ ಕೆಳಗೆ ಸೇರಿಸುವುದಾಗಿ ವರದಿಯಾಗಿದೆ.

ಭಾರತದಲ್ಲಿ CNG ಕಾರುಗಳು ಸಾಕಷ್ಟು ಜನಪ್ರಿಯವಾಗಿದ್ದರೂ, ಬೂಟ್ ಸ್ಪೇಸ್‌ ಕೊರತೆಯು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಈ ಕಾರುಗಳಲ್ಲಿ 55-60 ಲೀಟರ್ CNG ಟ್ಯಾಂಕ್ ಮತ್ತು ಇತರ ಉಪಕರಣಗಳೇ ಬೂಟ್ ಸ್ಥಳದ ಹೆಚ್ಚಿನ ಭಾಗವನ್ನು ತೆಗೆದುಕೊಳ್ಳುತ್ತವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಕಳೆದ ವರ್ಷ, ಟಾಟಾ ತಲಾ 30 ಲೀಟರ್ ಡ್ಯುಯಲ್ ಟ್ಯಾಂಕ್ ಸೆಟಪ್ ಅನ್ನು ಪರಿಚಯಿಸಿ ಬೂಟ್ ಸ್ಪೇಸ್ ಸಮಸ್ಯೆಯನ್ನು ಪರಿಹರಿಸಿತ್ತು.

maruti-suzukis-new-cng-car-is-similar-to-tatas-twin-cng-tank-setup

ಇದನ್ನು ಮೊದಲು ಆಲ್ಟ್ರೊಜ್ ನೊಂದಿಗೆ ನೀಡಲಾಯಿತು. ಪ್ರಸ್ತುತ, ಡ್ಯುಯಲ್ CNG ಟ್ಯಾಂಕ್ ಸೆಟಪ್ ಟಿಯಾಗೊ, ಟಿಗೋರ್, ಪಂಚ್‌ನಲ್ಲಿ ಲಭ್ಯವಿದೆ. ಇದೇ ಟೆಕ್ನಾಲಜಿಯನ್ನು ಈಗ ಮಾರುತಿ ಕೂಡ ಬಳಸಿಕೊಳ್ಳಲು ಸಜ್ಜಾಗಿದೆ. ಇತ್ತೀಚಿನ ಮಾರುತಿ ಸುಜುಕಿ CNG ಕಾರುಗಳ ಟೀಸರ್‌ಗಳನ್ನು ಗಮನಿಸಿದರೆ, ತನ್ನ S-CNG ಪ್ಲಾಟ್ ಫಾರ್ಮ್‌ಗೆ ಟ್ವಿನ್-ಟ್ಯಾಂಕ್ ಸೆಟಪ್ ಅನ್ನು ಸೇರಿಸಲಿದೆ ಎಂದು ತೋರುತ್ತಿದೆ.

CNG ಕಾರು ವಿಭಾಗದಲ್ಲಿ ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈನಂತಹ ಬ್ರಾಂಡ್‌ಗಳಿಂದ ಬಲವಾದ ಪೈಪೋಟಿ ಇರುವ ಕಾರಣ, ಮಾರುತಿ ಸುಜುಕಿ ತನ್ನ ಸಿಎನ್‌ಜಿ ಕಾರುಗಳಿಗೆ ಕೆಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಬಹುದು. ಪ್ರಸ್ತುತವಿರುವ ಎಸ್-ಸಿಎನ್‌ಜಿ ಪ್ಲಾಟ್ ಫಾರ್ಮ್ ಈಗಾಗಲೇ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ನೀಡುತ್ತಿದೆ. ಮೂರನೇ ವ್ಯಕ್ತಿ ಸ್ಥಾಪಿಸಿದ CNG ಕಿಟ್ ಅನ್ನು ಆಯ್ಕೆ ಮಾಡಿದರೆ ಇವು ಲಭ್ಯವಿರುವುದಿಲ್ಲ.

maruti-suzukis-new-cng-car-is-similar-to-tatas-twin-cng-tank-setup

ಮಾರುತಿಯ ಕಾರ್ಖಾನೆಯಲ್ಲಿ ಅಳವಡಿಸಲಾದ ಎಸ್-ಸಿಎನ್‌ಜಿ ಕಿಟ್ ಪರ್ಫಾಮೆನ್ಸ್, ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯಲ್ಲಿ ಸಾಟಿಯಿಲ್ಲ. ಉದಾಹರಣೆಗೆ, ವಿಶೇಷ ಇಂಜೆಕ್ಷನ್ ವ್ಯವಸ್ಥೆಯು ದಹನದ ಸಮಯದಲ್ಲಿ ಸೂಕ್ತವಾದ ಗಾಳಿ-ಇಂಧನ ಅನುಪಾತವನ್ನು ಖಚಿತಪಡಿಸುತ್ತದೆ. ಪ್ರಯೋಜನಗಳು ಸ್ಥಿರ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಮೈಲೇಜ್ ರೂಪದಲ್ಲಿ ಬರುತ್ತವೆ. ವಿವಿಧ ಭೂಪ್ರದೇಶಗಳಲ್ಲಿ ತನ್ನ ಸಿಎನ್‌ಜಿ ಕಾರುಗಳಿಗೆ ಸೂಕ್ತ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಮಾರುತಿ ಸಸ್ಪೆಂಷನ್ ಮತ್ತು ಬ್ರೇಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡುತ್ತದೆ.

ಶಾರ್ಟ್ ಸರ್ಕ್ಯೂಟ್‌ಗಳನ್ನು ತಡೆಗಟ್ಟಲು ಮೀಸಲಾದ ಕಾರ್ಯವಿಧಾನಗಳೊಂದಿಗೆ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ಸಂಪೂರ್ಣ CNG ಸೆಟಪ್ ಅನ್ನು ಸೋರಿಕೆ-ನಿರೋಧಕ ಮತ್ತು ತುಕ್ಕು ನಿರೋಧಕವನ್ನಾಗಿ ಮಾಡಲಾಗಿದೆ. ಇಂಧನ ತುಂಬುವ ಪ್ರಕ್ರಿಯೆಯಲ್ಲಿ ಸಿಎನ್‌ಜಿ ಕಾರು ಸ್ಟಾರ್ಟ್ ಆಗುವುದಿಲ್ಲ ಎಂದು ಮೈಕ್ರೋ ಸ್ವಿಚ್ ನೀಡಲಾಗಿದೆ. ಮಾರುತಿ ತನ್ನ ಸಿಎನ್‌ಜಿ ಕಾರುಗಳನ್ನು ಕ್ರ್ಯಾಶ್ ವರ್ಥಿಬಿಲಿಟಿ ಮತ್ತು ಬಾಳಿಕೆಗಾಗಿ ಪರೀಕ್ಷಿಸುತ್ತದೆ.

maruti-suzukis-new-cng-car-is-similar-to-tatas-twin-cng-tank-setup

ಆಟೋ ಸ್ವಿಚ್‌ನೊಂದಿಗೆ, ಮಾರುತಿ ಸಿಎನ್‌ಜಿ ಕಾರು ಬಳಕೆದಾರರು ಸುಲಭವಾಗಿ ಸಿಎನ್‌ಜಿಯಿಂದ ಪೆಟ್ರೋಲ್‌ಗೆ ಬದಲಾಯಿಸಬಹುದು. ಸಿಎನ್‌ಜಿ ಇಂಧನ ಮಟ್ಟ ಸೂಚಕ ಮತ್ತು ಎನ್‌ಜಿವಿ ರೆಸೆಪ್ಟಕಲ್ ಇದೆ, ಇದು ವೇಗವಾಗಿ ಮತ್ತು ಸುರಕ್ಷಿತ ಸಿಎನ್‌ಜಿ ಇಂಧನ ತುಂಬಿಸುವಿಕೆಯನ್ನು ಖಚಿತಪಡಿಸುತ್ತದೆ. ಮಾರುತಿ ಸಿಎನ್‌ಜಿ ಕಾರುಗಳನ್ನು ಸಮಗ್ರ ವಾರಂಟಿಯೊಂದಿಗೆ ನೀಡಲಾಗುತ್ತದೆ, ಇದನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 17, 2024, 12:47 [IST]
English summary
Maruti suzukis new cng car is similar to tatas twin cng tank setup
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+