ಪ್ರವಾಹಕ್ಕೆ ಒಳಗಾಗಿದ್ದ ಸ್ಕೋಡಾ ರಿಪೇರಿಗೆ 16 ಲಕ್ಷ ಬೇಕೆಂದ ಮೆಕ್ಯಾನಿಕ್‌: ಸಿಟ್ಟಲ್ಲಿ ಮಾಲೀಕ ಮಾಡಿದ್ದೇನು?

ಭಾರತದಲ್ಲಿ ಪ್ರತೀ ವರ್ಷ ಪ್ರವಾಹಕ್ಕೆ ಸಾವಿರಾರು ಕಾರುಗಳು ಸಿಲುಕಿ ಹಾಕಿಕೊಂಡು ಹಲವಾರು ತೊಂದರೆಗಳಿಗೆ ಒಳಗಾಗುತ್ತಿರುತ್ತವೆ. ಅದರಲ್ಲೂ ಪ್ರತೀ ೨ - ೩ ವರ್ಷಗಳ ಕಾಲಾವಧಿಯಲ್ಲಿ ಚೆನ್ನೈ ಮತ್ತು ಬೆಂಗಳೂರು ಸೇರಿದಂತೆ ಇತರ ನಗರಗಳು ಪ್ರವಾಹಕ್ಕೆ ಒಳಗಾಗಿ ಜನರ ಪಾಡನ್ನು ಅಯ್ಯೋ ಅನಿಸುತ್ತವೆ.

ಈ ಬಾರಿಯ ಮಳೆಯಲ್ಲಿ ನಿಜಕ್ಕೂ ಪ್ರವಾಹಕ್ಕೆ ಒಳಗಾಗಿ ಬೀದಿ ಪಾಲಿಗೆ ಬಂದಿದ್ದು ಚೆನ್ನೈ ನಗರ ಎಂದರೆ ತಪ್ಪಾಗಲಾರದು. ಇಲ್ಲಿ ಸಂಭವಿಸಿದ ಅತಿವೃಷ್ಟಿ ಅನಾಹುತದಿಂದ ಹಲವಾರು ಮನೆಗಳು ಸೇರಿದಂತೆ ಸಾಕಷ್ಟು ವಾಹನಗಳು ಸಹ ಹಾನಿಗೊಳಗಾಗಿದ್ದನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಕಂಡಿದ್ದೇವೆ. ಇದೀಗ ಅದೇ ಸಂಧರ್ಭದಲ್ಲಿ ಹಾನಿಯಾದ ಕಾರನ್ನು ಮಾಲೀಕನೊಬ್ಬ ಸರಿ ಪಡಿಸಲೆಂದು ಗ್ಯಾರೇಜಿಗೆ ತೆಗೆದುಕೊಂಡು ಹೋದಾಗ ಅಲ್ಲಿದ್ದ ಮೆಕ್ಯಾನಿಕ್ ಹೇಳಿದ ಮಾತನ್ನು ಕೇಳಿ ಶಾಕ್‌ ಆಗಿದ್ದಾನೆ.

Mechanic Demands 16 Lakhs To Repair Skoda Kushaq Affected By Chennai Flood

ಹೌದು, ವ್ಯಕ್ತಿ ಅತಿವೃಷ್ಟಿಯಲ್ಲಿ ಹಾನಿಯಾಗಿದ್ದ ತನ್ನ ಸ್ಕೋಡಾ ಕುಷಾಕ್‌ (Skoda Kushaq) ಕಾರನ್ನು ಸರಿಪಡಿಸಲೆಂದು ಡೀಲರ್‌ ಶಾಪ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಕಾರನ್ನು ಪರಿಶೀಲಿಸಿದ ಅಲ್ಲಿನ ಮೆಕ್ಯಾನಿಕ್‌ ಈ ಕಾರನ್ನು ಮತ್ತೆ ಮೊದಲಿನಂತೆ ಸರಿಪಡಿಸಲು ಸುಮಾರು ೧೬.೫ ಲಕ್ಷ ರೂ ಆಗುತ್ತದೆ ಎಂದು ಹೇಳಿದ್ದಾರೆ. ನಂಬಲು ಕಷ್ಟವಾದರೂ ಇದನ್ನು ನಾವೆಲ್ಲಾ ನಂಬಲೇಬೇಕು. ಇನ್ನು ಈ ಕುರಿತಾಗಿ ಆ ಕಾರಿನ ಮಾಲೀಕ ಏನು ಹೇಳಿದ್ದಾರೆ ಎಂದು ಈ ಲೇಖನದಲ್ಲಿ ಮುಂದೆ ನೋಡುತ್ತಾ ಹೋಗೋಣ.

ಸ್ಕೋಡಾ ಕುಷಾಕ್‌ ಕಾರಿನ ವ್ಹೀಲ್‌ ಹಬ್‌ ತನಕ ನೀರು ನಿಂತುಕೊಂಡಿದ್ದ ಫೋಟೋವನ್ನು ಸಹ ಶೇರ್‌ ಮಾಡಿದ ಮಾಲೀಕ, ಮುಂಜಾನೆ ಈ ಕಾರನ್ನು ಸ್ಟಾರ್ಟ್‌ ಮಾಡಲು ಆರಂಭಿಸಿದಾಗ ಅದು ಸ್ಟಾರ್ಟ್‌ ಆಗಿರಲಿಲ್ಲ. ಇದರಿಂದ ಟ್ರಕ್‌ ಕರೆಸಿ ಕಾರನ್ನು ಟೋ ಮಾಡಿಕೊಂಡು ಡೀಲರ್‌ ಬಳಿ ಬಂದಿದ್ದಾರೆ. ಇನ್ನು ಅದನ್ನು ಸರಿ ಮಾಡಲು ಅಲ್ಲಿನ ಮೆಕ್ಯಾನಿಕ್‌ ಹೇಳಿದ ಖರ್ಚನ್ನು ಕೇಳಿ ಆತನ ಜಂಗಾಬಲವೇ ಉಡುಗಿ ಹೋದಂತೆ ಆಗಿದೆ.

ಕಾರನ್ನು ರಿಪೇರಿ ಮಾಡಲು ಆಗುವ ಖರ್ಚನ್ನು ಕೇಳಿದ ಮಾಲೀಕ ಸುಮಾರು ೧೬.೫ ಲಕ್ಷ ಕೊಟ್ಟು ಈ ಕಾರನ್ನು ರಿಪೇರಿ ಮಾಡು ವ ಬದಲು ಆ ದುಡ್ಡಿಗೆ ಒಂದು ಹೊಸ ಕಾರನ್ನೇ ಕೊಳ್ಳಬಹುದು ಎಂದು ಹೇಳಿದ್ದಾನೆ. ಮಾಹಿತಿಗಳ ಪ್ರಕಾರ ಈ ಕಾರು ಪಾರ್ಕಿಂಗ್‌ನಲ್ಲಿತ್ತು. ನೀರು ತುಂಬಿದ ಮೇಲೆ ಮರುದಿನ ಇದನ್ನು ಸ್ಟಾರ್ಟ್‌ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿರಲಿಲ್ಲ.

ಭಾರತದ ಮಾರುಕಟ್ಟೆಯಲ್ಲಿ ಸ್ಕೋಡಾ ಕುಶಾಕ್ (Skoda Kushaq) ಎಸ್‌ಯುವಿಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿವೆ. ಇದೀಗ, ತನ್ನ ಮಾರಾಟ ಪ್ರಮಾಣವನ್ನು ದ್ವಿಗುಣಗೊಳಿಸಲು 'ಸ್ಕೋಡಾ ಆಟೋ ಇಂಡಿಯಾ' ಮಿಡ್ ರೇಂಜ್ ಕುಶಾಕ್ ಆಂಬಿಷನ್ ರೂಪಾಂತರದಲ್ಲಿ ಪವರ್ ಫುಲ್ '1.5 TSI' ಪವರ್‌ಟ್ರೇನ್ ಆಯ್ಕೆಯನ್ನು ಸಹ ಇದು ಪರಿಚಯಿಸಿದೆ.

ಸ್ಕೋಡಾ ಕುಶಾಕ್ ಎಸ್‌ಯುವಿ ಬಗ್ಗೆ ಹೇಳುವುದಾದರೆ, ಇದನ್ನು 'ಸ್ಲಾವಿಯಾ' ಸೆಡಾನ್ ಪಡೆದಿರುವ MQB A0-IN ಪ್ಲಾಟ್‌ಫಾರ್ಮ್‌ನಡಿ ನಿರ್ಮಿಸಲಾಗಿದ್ದು, ಬಹುತೇಕ ಎರಡು ಕಾರುಗಳು ಒಂದೇ ರೀತಿಯ ಪವರ್‌ಟ್ರೇನ್‌ ಆಯ್ಕೆ, ವೈಶಿಷ್ಟ್ಯ ಹಾಗೂ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಅಲ್ಲದೆ, ಸ್ಕೋಡಾ ತನ್ನೆಲ್ಲ ಮಾದರಿಗಳ ಎಂಜಿನ್ ಅನ್ನು ದೇಶಾದ್ಯಂತ ೨೦೨೩ ಏಪ್ರಿಲ್ 1ರಿಂದ ಜಾರಿಯಲ್ಲಿರುವ BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದೆ.

ಸ್ಕೋಡಾ ಕುಶಾಕ್ ಆಂಬಿಷನ್ ಆವೃತ್ತಿಯ ಪವರ್‌ಟ್ರೇನ್ ಆಯ್ಕೆ ಬಗ್ಗೆ ಮಾತನಾಡುವುದಾದರೆ, ಇದು 1.5 ಲೀಟರ್ 4 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (1.5 TSI) ಹೊಂದಿದ್ದು, 148 bhp ಗರಿಷ್ಠ ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 6 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್, 7 ಸ್ವೀಡ್ DSG ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, January 17, 2024, 11:54 [IST]
English summary
Mechanic demands 16 lakhs to repair skoda kushaq affected by chennai flood
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+