ಇತ್ತೀಚೆಗೆ ಬಿಡುಗಡೆಯಾದ ಹೊಸ ಮರ್ಸಿಡಿಸ್ ಕಾರಿನ ವಿಶೆಷತೆಗಳು: ಬೆಲೆಗೆ ಕೇಳಿದ್ರೆ ತಲೆ ತಿರುಗುತ್ತೆ!

ಕೇವಲ 3.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪಬಲ್ಲ ಸಾಮರ್ಥ್ಯ, ಗಂಟೆಗೆ 250 ಕಿ.ಮೀ ರಿಂದ 279 ಕಿ.ಮೀ ಟಾಪ್ ಸ್ಪೀಡ್ ತಲುಪುವ ತಾಕತ್ತು, ಕಾರಿನ ತುಂಬ ಐಷಾರಾಮಿ ಅನುಭವ ನೀಡುವ ಲಕ್ಷುರಿ ಫೀಚರ್ಸ್, ಹೊಸ ಮರ್ಸಿಡಿಸ್ ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ (Mercedes-AMG C 63 S E-PERFORMANCE) ಸೆಡಾನ್ ಕಾರಿನ ಬಗ್ಗೆ ಹೇಳುತ್ತಿದ್ದೇವೆ. ಹೌದು ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ತನ್ನ ಬಹುನಿರೀಕ್ಷಿತ ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ ಸೆಡಾನ್ ಕಾರನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದೆ.

ಹೊಸ ಮರ್ಸಿಡಿಸ್-ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ ಕಾರು ಭಾರತದಲ್ಲಿ 1.95 ಕೋಟಿ ರೂ.ಗೆ (ಎಕ್ಸ್ ಶೋರೂಂ) ಬಿಡುಗಡೆಯಾಗಿದೆ. ಕಾರಿನ ಒಳಾಂಗಣದಲ್ಲಿ ಎಎಂಜಿ ಸ್ಪೋರ್ಟ್ಸ್ ಸ್ಟೀರಿಂಗ್ ವೀಲ್, ಕಾರ್ಬನ್ ಫೈಬರ್ ಅಂಶಗಳನ್ನು ನೀಡಲಾಗಿದೆ. ಇನ್ಸ್ಟ್ರುಮೆಂಟೇಶನ್‌ಗಾಗಿ ಡ್ಯುಯಲ್ ಡಿಸ್ಪ್ಲೇ ಸೆಟಪ್ ಮತ್ತು ಬರ್ಮೀಸ್ಟರ್ ಪ್ರೀಮಿಯಂ ಸೌಂಡ್ ಸಿಸ್ಟಮ್‌ಗೆ ಸಂಪರ್ಕಿಸಲಾದ ಎಂಬಿಯುಎಕ್ಸ್ ಚಾಲಿತ ಇನ್ಫೋಟೈನ್ ಮೆಂಟ್ ಸ್ಕ್ರೀನ್ ನೀಡಲಾಗಿದೆ.

mercedes-amg-c-63-s-e-performance-top-things

ಹೊಸ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, 20-ಇಂಚಿನ ಅಲಾಯ್ ವೀಲ್‌ಗಳು ಮತ್ತು ಕ್ವಾಡ್ ಎಕ್ಸಾಸ್ಟ್ ಟಿಪ್ಸ್‌ಗಳೊಂದಿಗೆ ಸಿ-ಕ್ಲಾಸ್‌ನ ಅತ್ಯಂತ ಸ್ಪೋರ್ಟಿ ಆವೃತ್ತಿಯಂತೆ ಕಾಣುತ್ತದೆ. ವಿಶಾಲವಾದ ಬಾಡಿ ಕಿಟ್, ಆಕ್ರಮಣಕಾರಿ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಮರ್ಸಿಡಿಸ್-ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ ಕಾರು ದೊಡ್ಡ ಪ್ಯಾನಮೆರಿಕಾನಾ ಗ್ರಿಲ್ ನೀಡಲಾಗಿದೆ.

ಇದರ ಮತ್ತೊಂದು ವಿಶೇಷತೆಯೆಂದರೆ 4-ಸಿಲಿಂಡರ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ನೀಡಲಾಗಿದೆ. ಹಿಂದಿನ ತಲೆಮಾರಿನ ಕಾರಿನಲ್ಲಿ ಟ್ವಿನ್-ಟರ್ಬೊ 4.0-ಲೀಟರ್ ವಿ 8 ಎಂಜಿನ್ ನೀಡಲಾಗಿತ್ತು. ಇದೀಗ ಹೊಸದಾಗಿ ಪರಿಚಯಿಸಲಾದ ಎಂಜಿನ್ ಅತ್ಯಂತ ಶಕ್ತಿಯುತ ನಾಲ್ಕು ಸಿಲಿಂಡರ್ ಎಂಜಿನ್ ಆಗಿದೆ.

ಇದು ಕಂಪನಿಯ ಎಫ್1 ತಂಡದ ತಂತ್ರಜ್ಞಾನವಾಗಿದ್ದು, ಈ ಮೂಲಕ ಎಂಜಿನ್‌ 469 ಬಿಹೆಚ್ ಪವರ್‌ ಉತ್ಪಾದಿಸಬಲ್ಲದು. 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನ ಈ ಪರಿಷ್ಕೃತ ಆವೃತ್ತಿಯು ಎಲೆಕ್ಟ್ರಿಕ್ ಮೋಟರ್ ಚಾಲಿತ ಎಕ್ಸಾಸ್ಟ್ ಗ್ಯಾಸ್ ಟರ್ಬೊವನ್ನು ಕೂಡ ಹೊಂದಿದೆ. ಈ ಎಂಜಿನ್ ಹೆಚ್ಚುವರಿಯಾಗಿ 201 ಬಿಹೆಚ್ ಪವರ್ ಕೂಡ ಉತ್ಪಾದಿಸುವ ಸಾಮರ್ಥ್ಯವಿದ್ದು, ಈ ಮೂಲಕ ಒಟ್ಟಾರೆ 671 ಬಿಹೆಚ್ ಪವರ್ ಉತ್ಪಾದಿಸಬಲ್ಲದು.

ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹಾಗೂ ಎಲೆಕ್ಟ್ರಿಕ್ ಮೋಟರ್‌ಗಾಗಿ 2-ಸ್ಪೀಡ್ ಟ್ರಾನ್ಸ್ ಮಿಷನ್ ನೀಡಲಾಗಿದೆ. ಮರ್ಸಿಡಿಸ್-ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ ಕಾರು ವಿವಿಧ ಎಲೆಕ್ಟ್ರಿಕ್ ಡ್ರೈವಿಂಗ್ ಮೋಡ್‌ಗಳನ್ನು ಸಹ ಹೊಂದಿದೆ. ಬೂಟ್‌ನಲ್ಲಿ 89 ಕೆ.ಜಿ ತೂಕದ ಕಾಂಪ್ಯಾಕ್ಟ್ 6.1 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ.

ಇವಿಷ್ಟೇ ಅಲ್ಲೇ ಸ್ಪೋರ್ಟ್ ಮತ್ತು ಸ್ಪೋರ್ಟ್ + ಮೋಡ್‌ಗಳು ಕೂಡ ಇವೆ, ಇದು ಪರ್ಫಾಮೆನ್ಸ್ ಮಟ್ಟವನ್ನು ಗರಿಷ್ಠ ಸಾಮರ್ಥ್ಯದ ಶೇ60 ಮತ್ತು 80 ಕ್ಕೆ ಹೆಚ್ಚಿಸುತ್ತದೆ. ಸ್ಟೀರಿಂಗ್ ಚಕ್ರದ ಬಟನ್ ಬಳಸಿ ಬೂಸ್ಟ್ ಮೋಡ್ ಆನ್ ಮಾಡಬಹುದು, ಅಂತಿಮವಾಗಿ "ಪರ್ಸನಲ್" ಮೋಡ್ ಸಹ ಇದ್ದು, ಚಾಲಕನ ಇಷ್ಟಕ್ಕೆ ಅನುಗುಣವಾಗಿ ಎಲ್ಲಾ ಸೆಟ್ಟಿಂಗ್ ಮಾಡಿಕೊಳ್ಳಬಹುದು.

ಒಟ್ಟಾರೆ ಹೊಸ ಮರ್ಸಿಡಿಸ್-ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ ಕಾರು 2,111 ಕೆ.ಜಿ ತೂಕವನ್ನು ಹೊಂದಿದೆ. ಎಲೆಕ್ಟ್ರಿಕ್ ಮೋಡ್ ಕಾರಿನ ಟಾಪ್ ಸ್ಪೀಡ್ ಗಂಟೆಗೆ ಕೇವಲ 124 ಕಿ.ಮೀ ಆಗಿದೆ. ಬ್ಯಾಟರಿ ಖಾಲಿಯಾದ ನಂತರ, ಕಾರು ತಾನಾಗಿಯೇ ಕಂಫರ್ಟ್ ಮೋಡ್‌ಗೆ ಬದಲಾಗುತ್ತದೆ, ಹಾಗಯೇ ಅಗತ್ಯವಿದ್ದಾಗ ಹೈಬ್ರಿಡ್ ಮೋಡ್‌ಗೆ ಬದಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, November 15, 2024, 11:09 [IST]
English summary
Mercedes amg c 63 s e performance top things
Read more on mercedes benz india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+