ಕೇವಲ 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಪ್ರಿಮಿಯಂ ಕಾರುಗಳ ಮಾರಾಟ: ಎಲ್ಲಿ ಗೊತ್ತಾ?
ದುಬೈನಲ್ಲಿ ಜನರು ಚಿನ್ನದ ಬಗ್ಗೆ ಎಷ್ಟು ಮೋಜನ್ನು ಹೊಂದಿದ್ದಾರೆಂದರೆ ತಮ್ಮ ಕಾರುಗಳನ್ನು ಸಹ ಚಿನ್ನದ ಬಣ್ಣದಲ್ಲಿ ಮಾಡಿಫೈಗೊಳಿಸುತ್ತಾರೆ. ಭಾರತದಲ್ಲೂ ಈ ಪ್ರವೃತ್ತಿ ಹೆಚ್ಚಾಗುತ್ತಿದೆ, ಆಕರ್ಷಕವಾಗಿರಿಸಲು ತಮ್ಮ ಕಾರುಗಳನ್ನು ಚಿನ್ನದ ಬಣ್ಣಕ್ಕೆ ಮಾರ್ಪಡಿಸುತ್ತಿದ್ದಾರೆ. ಆದ್ರೆ ಇಲ್ಲಿ ವಿಷಯ ಅದಲ್ಲ, ಈ ಕಾರಗಳನ್ನು ತುಂಬಾ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ನೀವು ಬಳಸಿದ ಪ್ರೀಮಿಯಂ ಸೆಡಾನ್ ಖರೀದಿಸಲು ನೋಡುತ್ತಿದ್ದರೇ, ಜೊತೆಗೆ ಚಿನ್ನದ ಬಣ್ಣದಲ್ಲಿರುವ ಕಾರುಗಳು ಬೇಕಿದ್ದರೇ ಇಲ್ಲೆರಡು ಕಾರುಗಳಿವೆ ನೋಡಿ. ಈ ಕಾರುಗಳ ಕುರಿತ ವಿಡಿಯೋವನ್ನು ಮೈ ಕಂಟ್ರಿ ಮೈ ರೈಡ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ದೆಹಲಿ ಎನ್‌ಸಿಆರ್ ಪ್ರದೇಶದ ಸೆಕೆಂಡ್‌ಹ್ಯಾಂಡ್ ಡೀಲರ್ ಒಬ್ಬರು ಕಾರಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಕಾಣುವ ಮೊದಲ ಕಾರು 2012ರ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಐಷಾರಾಮಿ ಸೆಡಾನ್ ಆಗಿದೆ. ಕಾರನ್ನು ಉತ್ತಮವಾಗಿ ನಿರ್ವಹಿಸಿಸಲಾಗಿದೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ನಾವು ನೋಂದಣಿ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ಮೂಲ ಬಣ್ಣ ಸಿಟ್ರೈನ್ ಬ್ರೌನ್ ಎಂದು ತಿಳಿದುಬಂದಿದೆ.

ಈ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಅಡ್ಜಸ್ಟ್ ಮಾಡಬಹುದಾದ ಸೀಟುಗಳು, ಎಲೆಕ್ಟ್ರಿಕ್ ಸನ್‌ರೂಫ್, ಲೆದರ್ ಅಪ್‌ಹೋಲ್ಸ್ಟರಿ, ಕಂಪನಿ ಅಳವಡಿಸಿದ ಇನ್ಫೋಟೈನ್ ಮೆಂಟ್ ಸಿಸ್ಟಂ, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಒರಿಜಿನಲ್ ಅಲಾಯ್ ವ್ಹೀಲ್‌ಗಳು, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.
ಕಾರಿನ ಬೆಲೆ ಸೇರಿದಂತೆ ಹೆಚ್ಚಿನ ವಿವರಗಳ ಬಗ್ಗೆ ಹೇಳುವುದಾದರೆ, ಇದು 2012 ರ ಮಾದರಿ ಪೆಟ್ರೋಲ್ ಇ ಕ್ಲಾಸ್ ಸೆಡಾನ್ ಆಗಿದೆ. ಮಾರಾಟಗಾರರ ಪ್ರಕಾರ, ಈ ಕಾರಿನ ಓಡೋಮೀಟರ್‌ನಲ್ಲಿ ಸುಮಾರು 75,000 ಕಿ.ಮೀ ಓಡಿದೆ. ಈ ಸೆಡಾನ್ ಕಾರಿನ ಬೆಲೆಯು ರೂ. 9.75 ಲಕ್ಷಗಳಾಗಿದೆ.

ಇದರ ನಂತರ ಹೋಂಡಾ ಅಕಾರ್ಡ್ ಕೂಡ ಇದೇ ಚಿನ್ನದ ಬಣ್ಣದಲ್ಲಿ ಮಾಡಿಫೈಗೊಂಡು ಸೆಕೆಂಡ್‌ಹ್ಯಾಂಡ್ ಖರೀದಿಗೆ ಕಾಯುತ್ತಿದೆ. ಈ ಹೋಂಡಾ ಅಕಾರ್ಡ್ ಕಾರು ಉತ್ಸಾಹಿಗಳಲ್ಲಿ ಬಹಳ ಜನಪ್ರಿಯ ಸೆಡಾನ್ ಆಗಿದೆ. ಇದನ್ನು ವಿಪರೀತವಾಗಿ ಮಾಡಿಫೈಗೊಳಿಸುವುದನ್ನು ನಾವು ನೋಡಬಹುದು. ಇಲ್ಲಿ ಹೋಂಡಾ ಅಕಾರ್ಡ್ ಅನ್ನು ಚಿನ್ನದ ಬಣ್ಣದಲ್ಲಿ ಮಾರ್ಪಡಿಸಲಾಗಿದೆ. ಇದು ಕೂಡ 2012 ರ ಮಾದರಿಯ ಹೋಂಡಾ ಅಕಾರ್ಡ್ ಸೆಡಾನ್ ಆಗಿದ್ದು, ಪ್ರಸ್ತುತ ಇದು ಮೊದಲ ಮಾಲೀಕರನ್ನು ಹೊಂದಿದೆ. ಕಾರಿನ ಮೂಲ ಬಣ್ಣ ಸಿಲ್ವರ್ ಎಂದು ತಿಳಿದುಬಂದಿದೆ. ಈ ಕಾರಿನ ಬೆಲೆಯು 6 ಲಕ್ಷ ರೂ. ಆಗಿದೆ.
ನಮ್ಮ ಸಲಹೆಗಳು: ಈ ಕಾರುಗಳನ್ನು ಖರೀದಿಸಲು ಬಯಸುವವರು ಎಲ್ಲಾದರೂ ಹಾನಿಯಾಗಿದೆಯೇ ಎಂದು ಪರಿಶೀಲಿಸುವುದು ಒಳ್ಳೆಯದು. ಬಾಡಿ ಪ್ಯಾನಲ್‌ಗಳ ಮೇಲೆ ಯಾವುದೇ ಹಾನಿ ಅಥವಾ ಗೀರುಗಳನ್ನು ಮರೆಮಾಚಲು ಜನರು ತಮ್ಮ ಕಾರುಗಳನ್ನು ಬೇರೊಂದು ಬಣ್ಣಕ್ಕೆ ಬದಲಿಸುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ಖರೀದಿಸುವ ಮುನ್ನ ಅಧಿಕೃತ ಸೇವಾ ಕೇಂದ್ರ ಅಥವಾ ಮೆಕ್ಯಾನಿಕ್‌ನಿಂದ ಒಮ್ಮೆ ಪರಿಶೀಲನೆಗೆ ಒಳಪಡುವುದು ಉತ್ತಮ.

ಈ ಕಾರುಗಳು ಬೆಲೆಯ ವಿಷಯದಲ್ಲಿ ಅತ್ಯಂತ ಆಕರ್ಷಕವಾಗಿ ಕಾಣುತ್ತವೆ. ಅನೇಕ ಜನರು ಇಂತಹ ಕೊಡುಗೆಗಳಿಗೆ ಆಕರ್ಷಿತರಾಗಲು ಇದು ಒಂದು ಕಾರಣವಾಗಿದೆ. ಇವು ಪ್ರೀಮಿಯಂ ವರ್ಗಕ್ಕೆ ಸೇರಿದ ಕಾರುಗಳಾಗಿವೆ, ಆದರೆ ಇವು ಯಾಂತ್ರಿಕವಾಗಿ ಸಮಸ್ಯೆಯನ್ನು ಎದುರಿಸಿದರೆ, ಅವುಗಳ ದುರಸ್ತಿ ಮಾಡಲು ಅತ್ಯಂತ ದುಬಾರಿಯಾಗಬಹುದು ಎಂಬುದನ್ನು ಗಮನದಲ್ಲಿಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications