ಭಾರತದಲ್ಲಿ 2 ಹೊಸ ಐಷಾರಾಮಿ ಕಾರುಗಳನ್ನು ಬಿಡುಗಡೆ ಮಾಡಿದ ಮರ್ಸಿಡಿಸ್ ಬೆಂಝ್: ವಿಶೇಷತೆಗಳೇನು?
ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಸಿಎಲ್‌ಇ ಕ್ಯಾಬ್ರಿಯೋಲೆಟ್ (CLE Cabriolet) ಮತ್ತು ಎಎಂಜಿ ಜಿಎಲ್‌ಸಿ 43 4ಮ್ಯಾಟಿಕ್ ಕೂಪೆ (AMG GLC 43 4Matic Coupe) ಕಾರುಗಳನ್ನು ಬಿಡುಗಡೆ ಮಾಡಿದೆ. ಇವು ಸಿಬಿಯು (ಸಂಪೂರ್ಣ ನಿರ್ಮಿತ ಘಟಕ) ಆಗಿ ಭಾರತದಲ್ಲಿ ಖರೀದಿಗೆ ಸಿಗಲಿವೆ. ಹೊಸ ಸಿಎಲ್ಇ 300 ಎಎಂಜಿ ಲೈನ್ ಬೆಲೆ ರೂ.1.10 ಕೋಟಿ (ಎಕ್ಸ್ ಶೋರೂಂ) ಇದ್ದರೇ, ಎಎಂಜಿ ಜಿಎಲ್‌ಸಿ 43 ಕೂಪೆ 4ಮ್ಯಾಟಿಕ್ ಬೆಲೆಯು (ಎಕ್ಸ್ ಶೋರೂಂ) ರೂ.1.11 ಕೋಟಿಗಳಾಗಿದೆ. ಈ ಎರಡೂ ಕಾರುಗಳ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ 4ಮ್ಯಾಟಿಕ್ ವಿಶೇಷತೆಗಳು: ನಪ್ಪಾ ಲೆದರ್ ಹೊಂದಿರುವ ಬ್ಲಾಕ್ ಇಂಟೀರಿಯರ್, ಎಎಂಜಿ-ಸ್ಪೆಕ್ ಸ್ಟೀರಿಂಗ್ ವೀಲ್ ಮತ್ತು ರೆಡ್ ಸೀಟ್ ಬೆಲ್ಟ್, ಸ್ಪೋರ್ಟಿ ಬಕೆಟ್ ಸೀಟುಗಳನ್ನು ಹೊಂದಿದೆ. ಇನ್ಫೋಟೈನ್ ಮೆಂಟ್ ಸಿಸ್ಟಂ ಹೊಸ ಎಂಬಿಯುಎಕ್ಸ್ ಯುಐ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಎಚ್‌ಯುಡಿ ಡಿಸ್ ಪ್ಲೇಯನ್ನು ಹೊಂದಿದೆ.

ಕೂಪೆ ಎಎಂಜಿ ಟ್ರ್ಯಾಕ್ ಪೇಸ್ ಸಾಫ್ಟ್‌ವೇರ್ ಅನ್ನು ಸಹ ಪಡೆದಿದೆ, ಇದು ಲ್ಯಾಪ್ ಸಮಯ ಮತ್ತು ಇತರ ವಿವರಗಳನ್ನು ಲೆಕ್ಕಹಾಕುತ್ತದೆ. ಎಚ್‌ಯುಡಿ ಡಿಸ್ಪ್ಲೇ, ಎಲ್ಇಡಿ ಡಿಜಿಟಲ್ ಲ್ಯಾಂಪ್‌ಗಳು, 360 ಡಿಗ್ರಿ ಕ್ಯಾಮೆರಾ, ಬರ್ಮರ್ 3ಡಿ ಸೌಂಡ್, ಕೀಲೆಸ್ ಗೋ ಪ್ಯಾಕೇಜ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.
ಎಎಂಜಿ ಜಿಎಲ್‌ಸಿ 43 ಕೂಪೆ ಮೈಲ್ಡ್-ಹೈಬ್ರಿಡ್ 2.0-ಲೀಟರ್, 4 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 416 ಬಿಹೆಚ್‌ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 100 ಕಿ.ಮೀ ವೇಗವನ್ನು ಕೇವಲ 4.8 ಸೆಕೆಂಡುಗಳಲ್ಲಿ ಕ್ರಮಿಸಬಲ್ಲದು. 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ ಎಂದು ಮರ್ಸಿಡಿಸ್ ಹೇಳಿಕೊಂಡಿದೆ.

ಈ ಎಂಜಿನ್ ನೊಂದಿಗೆ 9-ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಈ ಕಾರಿನಲ್ಲಿ ಮರ್ಸಿಡಿಸ್ 4-ಮ್ಯಾಟಿಕ್ ಎಡಬ್ಲ್ಯುಡಿ ಸಿಸ್ಟಂ, ರಿಯರ್ ವೀಲ್ ಸ್ಟೀರಿಂಗ್, ರೈಡ್ ಕಂಟ್ರೋಲ್ ಸಸ್ಪೆಂಷನ್, ತ್ರೀ-ಸ್ಟೇಜ್ ಎಎಂಜಿ ಸ್ಟೀರಿಂಗ್ ಮತ್ತು ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಮತ್ತು ರೇಸ್ ಎಂಬ ಮೂರು ಮೋಡ್‌ಗಳನ್ನು ನೀಡಲಾಗಿದೆ.
ಸಿಎಲ್ಇ ಕ್ಯಾಬ್ರಿಯೋಲೆಟ್ ವಿಶೇಷತೆಗಳು: ಇದನ್ನು ಒಂದೇ ವೇರಿಯೆಂಟ್‌ನಲ್ಲಿ ನೀಡಲಾಗುತ್ತದೆ. ಇದು ಭಾರತದಲ್ಲಿ ಮೂರನೇ ಕನ್ವರ್ಟಿಬಲ್ ಮಾಡಲ್ ಆಗಿದೆ. ಸಿಎಲ್ಇಯ ಇಂಟೀರಿಯರ್ ಸಿ-ಕ್ಲಾಸ್ ಅನ್ನು ಹೋಲುತ್ತದೆ. ಗ್ರೇ / ಬ್ಲಾಕ್, ಪವರ್ ರೆಡ್ / ಬ್ಲಾಕ್ ಎಂಬ ಮೂರು ಲೆದರ್ ಅಪ್ಹೋಲ್ಸ್ಟರಿಯೊಂದಿಗೆ ನೀಡಲಾಗುತ್ತದೆ. ಸಾಫ್ಟ್ ಟಾಪ್ ಅನ್ನು ಬ್ಲಾಕ್ ಮತ್ತು ರೆಡ್ ಎಂಬ ಎರಡು ಫ್ಯಾಬ್ರಿಕ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ಕ್ಯಾಬ್ರಿಯೋಲೆಟ್ 2 + 2 ಆಸನ ವಿನ್ಯಾಸವನ್ನು ಹೊಂದಿದೆ, ಕ್ಯಾಬಿನ್‌ನ ಮುಖ್ಯ ಹೈಲೈಟ್ 11.9-ಇಂಚಿನ ಪೋರ್ಟ್ರೇಟ್ ಶೈಲಿಯ ಇನ್ಫೋಟೈನ್ ಮೆಂಟ್ ಡಿಸ್ಪ್ಲೇ ಮತ್ತು ಸಂಪೂರ್ಣ ಡಿಜಿಟಲ್ 12.3-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಆಗಿದೆ. ಜೊತೆಗೆ ಟಿಲ್ಟಬಲ್ ಇನ್ಫೋಟೈನ್ಮೆಂಟ್ ಸ್ಕ್ರೀನ್, ಎಎಂಜಿ ಸ್ಪೋರ್ಟ್ಸ್ ಸೀಟ್‌ಗಳು, ಪ್ಯಾಡಲ್‌ಗಳೊಂದಿಗೆ ಎಎಂಜಿ ನಪ್ಪಾ ಲೆದರ್ ಸ್ಟೀರಿಂಗ್ ವೀಲ್ ನೀಡಲಾಗಿದೆ.
17 ಸ್ಪೀಕರ್‌ಗಳೊಂದಿಗೆ ಬರ್ಮಸ್ಟರ್ 3ಡಿ ಸೌಂಡ್ ಸಿಸ್ಟಮ್, ಎಆರ್ ನ್ಯಾವಿಗೇಷನ್, ಎಚ್‌ಯುಡಿ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ, ಪಾರ್ಕ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಅಸಿಸ್ಟ್ ಜೊತೆಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸೆಗ್ಮೆಂಟ್ ಫಸ್ಟ್ ಸೆಂಟರ್ ಏರ್ ಬ್ಯಾಗ್ ಅನ್ನು ಸಹ ಪಡೆದುಕೊಂಡಿದೆ.
ಸಿಎಲ್ಇ ಕ್ಯಾಬ್ರಿಯೋಲೆಟ್ 2.0-ಲೀಟರ್, 4-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 255 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದ್ದು, ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. 4ಮ್ಯಾಟಿಕ್ ಎಡಬ್ಲ್ಯುಡಿ ಸಿಸ್ಟಂ, ಎಎಂಜಿ ಸ್ಪೋರ್ಟ್ಸ್ ಸಸ್ಪೆಂಷನ್ ಮತ್ತು ಸ್ಪೋರ್ಟ್ಸ್ ಡೈರೆಕ್ಟ್ ಸ್ಟೀರಿಂಗ್ ಸಿಸ್ಟಂ ಇತರ ವೈಶಿಷ್ಟ್ಯಗಳನ್ನೂ ಒಳಗೊಂಡಿದೆ.


Click it and Unblock the Notifications








