ರಸ್ತೆ ಮೇಲಿನ ಅರಮನೆ: ಮರ್ಸಿಡಿಸ್-ಮೇಬ್ಯಾಕ್ EQS 680 ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆ

ಪ್ರಸಿದ್ಧ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಮೇಬ್ಯಾಕ್ EQS 680 ಎಲೆಕ್ಟ್ರಿಕ್ ಎಸ್‍ಯುವಿಯನ್ನು (Electric SUV) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮರ್ಸಿಡಿಸ್-ಮೇಬ್ಯಾಕ್ EQS 680 (Mercedes-Maybach EQS 680) ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯು ಎಕ್ಸ್ ಶೊರೂಂ ಪ್ರಕಾರ ರೂ.2.25 ಕೋಟಿಯಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿದ ಈ ಐಷಾರಾಮಿ ವಾಹನವು 600 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ICE ಒಡಹುಟ್ಟಿದವರಂತೆಯೇ, ಮರ್ಸಿಡಿಸ್ ತನ್ನ ಮೇಬ್ಯಾಕ್ ಕುಟುಂಬಕ್ಕೆ ಹೊಂದಿರುವ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿದೆ.

ಹೊಸ ಮರ್ಸಿಡಿಸ್ ಬೆಂಝ್ ತನ್ನ ಮೇಬ್ಯಾಕ್ EQS 680 ಎಲೆಕ್ಟ್ರಿಕ್ ಎಸ್‍ಯುವಿಯು ಪ್ರಮುಖ ಗ್ರಿಲ್, ಸಂಪರ್ಕಿತ LED ಹೆಡ್‌ಲೈಟ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳು ಮತ್ತು ವಿಶೇಷವಾದ ಮೇಬ್ಯಾಕ್ ವಿನ್ಯಾಸ ಅಂಶಗಳನ್ನು ಪ್ರದರ್ಶಿಸುತ್ತದೆ. ಈ ದುಬಾರಿ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲಿ 15-ಸ್ಪೀಕರ್ ಬರ್ಮೆಸ್ಟರ್ 4D ಸರೌಂಡ್ ಸೌಂಡ್ ಸಿಸ್ಟಮ್, ಆಕ್ಟಿವ್ ಆಂಬಿಯೆಂಟ್ ಲೈಟಿಂಗ್, ನಪ್ಪಾ ಲೆದರ್ ಸೀಟ್‌ಗಳು ಮತ್ತು ರಿಯರ್ ಇನ್ಫೋಟೈನ್‌ಮೆಂಟ್ ಕಂಟ್ರೋಲ್‌ಗಳನ್ನು ಒಳಗೊಂಡಂತೆ ಹಲವಾರು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ.

Mercedes-Maybach EQS 680

ಇದರೊಂದಿಗೆ ಗ್ರಾಹಕರು ಹಿಂಭಾಗದ ಮನರಂಜನಾ ಡಿಸ್ ಪ್ಲೇಯನ್ನು ಹೊಂದಿದೆ. ಎರಡು ಹಿಂಬದಿಯ ಸೀಟುಗಳ ನಡುವೆ ಆರ್ಮ್‌ರೆಸ್ಟ್‌ನ ಹಿಂದೆ ರೆಫ್ರಿಜರೇಟರ್ ವಿಭಾಗವನ್ನು ಇರಿಸಲಾಗಿದೆ, ಇದು 10-ಲೀಟರ್ ಸಾಮರ್ಥ್ಯ ಮತ್ತು ತಾಪಮಾನ ನಿಯಂತ್ರಣ ಆಯ್ಕೆಯನ್ನು ಹೊಂದಿದೆ. ಮೇಬ್ಯಾಕ್ ಮಾದರಿಯೊಂದಿಗೆ ಸರೌಂಡ್ ಲೈಟಿಂಗ್‌ನಿಂದ ಹಿಡಿದು ಟ್ರೇ ಟೇಬಲ್‌ಗಳವರೆಗೆ ಮತ್ತು ಹಿಂಬದಿಯ ಫುಟ್‌ವೆಲ್‌ನಲ್ಲಿ ಲೋಗೋ ಹೊಂದಿದೆ.

ಇವೆಲ್ಲವೂ ಪನರೊಮಿಕ್ ಸನ್‌ರೂಫ್, ಏರ್ ಫ್ಯೂರಿಪೈರ್ ಜೊತೆಗೆ ಪರಿಮಳ ಡಿಫ್ಯೂಸರ್ ಸಿಸ್ಟಮ್, ಹಿಂಭಾಗದ ಎರಡು ಬದಿಯ ಡೋರುಗಳಲ್ಲಿ ಎಲೆಕ್ಟ್ರಿಕ್ ಸನ್‌ಬ್ಲೈಂಡ್‌ಗಳು ಮತ್ತು ಹಿಂಭಾಗದಲ್ಲಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಇತರ ವೈಶಿಷ್ಟ್ಯಗಳನ್ನು ಹೊಂದಿದೆ. ಮರ್ಸಿಡಿಸ್ ಮೇಬ್ಯಾಕ್ EQS 680 ಎಲೆಕ್ಟ್ರಿಕ್ ಎಸ್‍ಯುವಿಯು 1,721 mm ಎತ್ತರ ಮತ್ತು 5,125 mm ಉದ್ದವನ್ನು ಹೊಂದಿದೆ. ಇನ್ನು 3,210 mm ವ್ಹೀಲ್‌ಬೇಸ್ ಅನ್ನು ಹೊಂದಿದೆ.

ಹೊಸ ಮರ್ಸಿಡಿಸ್-ಮೇಬ್ಯಾಕ್ EQS ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 360-ಡಿಗ್ರಿ ಕ್ಯಾಮೆರಾ, ಬಹು ಏರ್‌ಬ್ಯಾಗ್‌ಗಳು, ADAS, ABS, EBD ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಿವೆ. ವಿವಿಧ ಡ್ರೈವಿಂಗ್ ಆದ್ಯತೆಗಳನ್ನು ಪೂರೈಸಲು ಎಸ್‌ಯುವಿ ವಿವಿಧ ಡ್ರೈವ್ ಮೋಡ್‌ಗಳಾದ ಇಕೋ, ಸ್ಪೋರ್ಟ್, ಆಫ್‌ರೋಡ್, ಇಂಡಿವಿಜುವಲ್ ಮತ್ತು ಮೇಬ್ಯಾಕ್ ಎಂಬ ಮೋಡ್‌ಗಳನ್ನು ಸಹ ನೀಡುತ್ತದೆ.

ಮರ್ಸಿಡಿಸ್-ಮೇಬ್ಯಾಕ್ EQS ಎಲೆಕ್ಟ್ರಿಕ್ ಎಸ್‍ಯುವಿಯ ಆಲ್-ವೀಲ್-ಡ್ರೈವ್ ಸೆಟಪ್‌ಗಾಗಿ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಜೋಡಿಯಾಗಿರುವ 107.8 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಂಡಿದೆ. ಈ ಸಂಯೋಜನೆಯು 649 bhp ಮತ್ತು 950 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿ 4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ವಾಹನದ ಪವರ್‌ಟ್ರೇನ್ ಅನ್ನು ಮೊದಲು ಶಾಂಘೈ ಆಟೋ ಶೋದಲ್ಲಿ ಪ್ರದರ್ಶಿಸಲಾಯಿತು. ಇದು ಸಿಂಗಲ್ ಚಾರ್ಜ್‌ನಲ್ಲಿ 600km WLTP ರೇಂಜ್ ಅನ್ನು ನೀಡುತ್ತದೆ. ಮೇಬ್ಯಾಕ್ EQS ಐಷಾರಾಮಿ ಮತ್ತು ಕಾರ್ಯಕ್ಷಮತೆಯ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಈ ಐಷಾರಾಮಿ ಎಸ್‍ಯುವಿಯಲ್ಲಿ ವಿಸ್ತಾರವಾದ ಸೌಕರ್ಯಗಳ ಪಟ್ಟಿ, ಸುಧಾರಿತ ಸುರಕ್ಷತಾ ಸಿಸ್ಟಂಗಳು ಮತ್ತು ಲಕ್ಷುರಿ ಎಸ್‍ಯುವಿ ಅನುಭವವನ್ನು ಬಯಸುವವರಿಗೆ ಇದು ಉತ್ತಮವಾದ ಆಯ್ಕೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, September 5, 2024, 15:52 [IST]
English summary
Mercedes maybach eqs 680 electric suv launched in india spec price details
Read more on mercedes benz india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+