Eeco: ಮಧ್ಯಮ ವರ್ಗದವರ ಕನಸು ನನಸು.. ಮಾರುತಿ ಇಕೋ ವ್ಯಾನ್ ರೂ.5 ಲಕ್ಷಕ್ಕೆ ಸಿಗುತ್ತದೆ, 26 ಕಿ.ಮೀ ಮೈಲೇಜ್

'ಕಾರು' ಎಲ್ಲರ ಮೆಚ್ಚಿನ ವಾಹನ. ತಮ್ಮ ಹಣಕಾಸಿನ ಸ್ಥಿತಿಗೆ ಅನುಗುಣವಾಗಿ ಕೊಂಡುಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ತಮ್ಮ ಬಜೆಟ್‌ಗೆ ಯಾವ ಕಾರು ಖರೀದಿಗೆ ಸಿಗುತ್ತದೆ, ಉತ್ತಮ ಮೈಲೇಜ್ ನೀಡುತ್ತದೆಯೇ? ಎಂಬ ಹಲವು ಗೊಂದಲವಿರುತ್ತದೆ.

ಇಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್ ಬಗ್ಗೆ ತಿಳಿಸಲಾಗಿದೆ. ಇದು, ಜನಪ್ರಿಯ ಓಮ್ನಿ (Omni) ಬದಲಾಗಿ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಸದ್ಯ, ಇಕೋ ವ್ಯಾನ್ ರೂ.5.27 ಲಕ್ಷದಿಂದ ರೂ.6.53 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಹಿಂದೆ ವಿವಿಧ ಮಾಧ್ಯಮಗಳು ವರದಿ ಪ್ರಕಾರ, 'ಇಕೋ' ಗರಿಷ್ಠ 8 ವಾರಗಳ ಕಾಯುವಿಕೆ ಅವಧಿಯನ್ನು ಹೊಂದಿದೆ.

Middle Class People Car Dream Come True: Maruti Suzuki Eeco Van Buy Rs 5 Lakh Price

ಮಾರುತಿ ಸುಜುಕಿ ಇಕೋ ವ್ಯಾನ್, 5-ಸೀಟರ್ ಸ್ಟ್ಯಾಂಡರ್ಡ್ (ಒ), 5-ಸೀಟರ್ ಎಸಿ (ಒ), 5-ಸೀಟರ್ ಎಸಿ ಸಿಎನ್‌ಜಿ (ಒ) ಹಾಗೂ 7-ಸೀಟರ್ ಸ್ಟ್ಯಾಂಡರ್ಡ್ (ಒ) ರೂಪಾಂತರ (Variants) ಆಯ್ಕೆಯಲ್ಲಿ ದೊರೆಯುತ್ತದೆ. ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಮಿಡ್ನೈಟ್ ಬ್ಲ್ಯಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ, ಮೆಟಾಲಿಕ್ ಸಿಲ್ಕಿ ಸಿಲ್ವರ್ ಸೇರಿದಂತೆ 5 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಮಾರುತಿ ಸುಜುಕಿ ಇಕೋ ವ್ಯಾನ್ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ನೊಂದಿಗೆ ಸಿಗುತ್ತದೆ. 1.2 - ಲೀಟರ್ ಪೆಟ್ರೋಲ್ ಎಂಜಿನ್ 81 PS ಗರಿಷ್ಠ ಪವರ್, 104.4 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 5 - ಸ್ವೀಡ್ ಮ್ಯೂನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

Middle Class People Car Dream Come True: Maruti Suzuki Eeco Van Buy Rs 5 Lakh Price

ಸಿಎನ್‌ಜಿ ಪವರ್‌ಟ್ರೇನ್ ಪಡೆದಿರುವ ಕಾರು ಸಹ ಇದೇ ಎಂಜಿನ್ ಆಯ್ಕೆಯನ್ನು ಪಡೆದಿದೆ. ಆದರೆ, 72 PS ಪವರ್, 95 Nm ಪೀಕ್ ಟಾರ್ಕ್ ಹೊರಹಾಕಲು ಮಾತ್ರ ಶಕ್ತವಾಗಿದೆ. 5 - ಸ್ವೀಡ್ ಮ್ಯೂನುವಲ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ. ಮೈಲೇಜ್ ವಿಚಾರವಾಗಿ ಹೇಳುವುದಾದರೆ, ಪೆಟ್ರೋಲ್ ರೂಪಾಂತರಗಳು 19.71 kmpl, ಸಿಎನ್‌ಜಿ ರೂಪಾಂತರ 26.78 km/kg ಇಂಧನ ದಕ್ಷತೆಯನ್ನು ಪಡೆದಿದೆ.

ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್ ನೋಡುಗರನ್ನು ಸೆಳೆಯುವಂತಹ ವಿನ್ಯಾಸ (ಡಿಸೈನ್) ಪಡೆದುಕೊಂಡಿದ್ದು, ಬೆಲೆಗೆ ತಕ್ಕಂತೆ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಸೆಮಿ ಡಿಜಿಟಲ್ ಸ್ಪೀಡೋಮೀಟರ್ (Semi Digital Speedometer), ಎಸಿಗಾಗಿ ರೋಟರಿ ಡಯಲ್ಸ್, ಮ್ಯಾನುಯಲ್ ಎಸಿ, 12ವಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತೆಯ ದೃಷ್ಟಿಯಿಂದ ಸಹ ಮಾರುತಿ ಸುಜುಕಿ ಇಕೋ ವ್ಯಾನ್ ಅತ್ಯುತ್ತಮವಾಗಿದ್ದು, ಡುಯಲ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಫ್ರಂಟ್ ಸೀಟ್‌ಬೆಲ್ಟ್ ರಿಮೆಂಡರ್, ಸ್ವೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಈ ಕಾರಿಗೆ ಯಾವುದೇ ನೇರ ಪ್ರತಿಸ್ಪರ್ಧಿ ಇಲ್ಲ.

ಇನ್ನು, ನೀವು ಬಜೆಟ್ ಬೆಲೆಗೆ ಹೊಸ ಕಾರನ್ನು ಹುಡುಕುತ್ತಿದ್ದರೆ ಮಾರುತಿ ಸುಜುಕಿ ಇಕೋ ವ್ಯಾನ್ ಉತ್ತಮ ಆಯ್ಕೆಯಾಗಬಹುದು. ಇದರಲ್ಲಿ 5 - 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, ಸಿಎನ್‌ಜಿ ರೂಪಾಂತರ ಯಾವ ಬೈಕ್‌ಗೂ ಕಮ್ಮಿ ಇಲ್ಲದಂತೆ ಮೈಲೇಜ್ ನೀಡುತ್ತದೆ. ಈ ಕಾರನ್ನು ಕಂಪನಿಯ ಅರೆನಾ ಡೀಲರ್ ಶಿಪ್ ಮೂಲಕ ಖರೀದಿ ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 24, 2024, 15:10 [IST]
English summary
Middle class people car dream come true maruti suzuki eeco van buy rs 5 lakh price 26 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+