ಪೆಟ್ರೋಲ್‌ ಹಾಕಿ ಹಾಕಿ ಸಾಕಾಯಿತೆ?: ಇಲ್ಲಿದೆ ಕಡಿಮೆ ಬೆಲೆಗೆ 100+ ಕಿಮೀ ರೇಂಜ್‌ ಕೊಡುವ ಸ್ಕೂಟರ್‌ಗಳು

ಈಗಿನ ಎಲೆಕ್ಟ್ರಿಕ್‌ ಯುಗದಲ್ಲಿ ನಮ್ಮಲ್ಲಿಯೂ ಒಂದು ಇವಿ ಇರಲಿ ಎಂದು ಹಲವರು ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಖರೀದಿ ಮಾಡುತ್ತಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್‌ ಸ್ಕೂಟರ್‌ ನಿರ್ಮಾಣ ಕಂಪನಿಗಳು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದರೂ ಅದರಲ್ಲಿ ಕೆಲವು ಕಂಪನಿಗಳಷ್ಟೇ ಗ್ರಾಹಕರ ವಿಶ್ವಾಸವನ್ನು ಗಳಿಸಲು ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು. ಇಂದಿನ ಈ ಲೇಖನದಲ್ಲಿ ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ 100 ಕಿಮೀ ಅಧಿಕ ರೇಂಜ್‌ ಕೊಡುವ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಯಾವುದು ಇದೆ ಎಂದು ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಓಲಾ ಎಸ್‌1 ಎಕ್ಸ್‌: ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooters), 2 ಕೆಡಬ್ಲ್ಯೂಹೆಚ್, 3 ಕೆಡಬ್ಲ್ಯೂಹೆಚ್ ಮತ್ತು 4 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಲಭ್ಯವಿದ್ದು, ಕ್ರಮವಾಗಿ ರೂ.69,999, ರೂ.84,999 ಹಾಗೂ 99,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Most Affordable Electric Scooters With 100 Range In Single Charge

ಈ ಎಸ್1 ಎಕ್ಸ್ ಇ-ಸ್ಕೂಟರ್‌ನ ಬ್ಯಾಟರಿ ಪ್ಯಾಕ್ 7.4 ಗಂಟೆಗಳಲ್ಲಿ ಭರ್ತಿ ಚಾರ್ಜ್ ಆಗಲಿದ್ದು, ಇಕೋ, ನಾರ್ಮಲ್ & ಸ್ಪೋರ್ಟ್ಸ್ ಎಂಬ ರೈಡಿಂಗ್ ಮೋಡ್ ಆಯ್ಕೆಗಳನ್ನು ಪಡೆದಿದೆ. 3 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿ, ಭರ್ತಿ ಚಾರ್ಜ್ ನಲ್ಲಿ 151 ಕಿ.ಮೀ ಓಡಲಿದ್ದು, 90 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. 4 ಕೆಡಬ್ಲ್ಯೂಹೆಚ್ ಪಡೆದಿರುವ ಸ್ಕೂಟರ್, ಪೂರ್ತಿ ಚಾರ್ಜ್ ನಲ್ಲಿ 190 ಕಿ.ಮೀ ಕ್ರಮಿಸುತ್ತದೆ.

ಬಜಾಜ್ ಚೇತಕ್ 2901: ನೂತನ ಬಜಾಜ್ ಚೇತಕ್ 2901 (Bajaj Chetak 2901) ಎಲೆಕ್ಟ್ರಿಕ್ ಸ್ಕೂಟರ್, ರೂ.95,998 ಎಕ್ಸ್ ಶೋರೂಂ ದರವನ್ನು (ಬೆಂಗಳೂರು) ಹೊಂದಿದೆ. ಇದು ಚೇತಕ್‌ನ 'ಅರ್ಬೇನ್' ಮತ್ತು 'ಪ್ರೀಮಿಯಂ' ರೂಪಾಂತರ (ವೇರಿಯೆಂಟ್)ಗಳಿಗಿಂತ ತುಂಬಾ ಕಡಿಮೆ ಬೆಲೆಯಾಗಿದೆ. ಹೊಸ ಆವೃತ್ತಿಯು 2.88 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 123 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Most Affordable Electric Scooters With 100 Range In Single Charge

ಈ ಬಜಾಜ್ ಚೇತಕ್ 2901 ಎಲೆಕ್ಟ್ರಿಕ್ ಸ್ಕೂಟರ್, 63 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದ್ದು, ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಕಲರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಪಡೆಯಿದೆ. ವಿಶೇಷವಾಗಿ ಟೆಕ್‌ಪ್ಯಾಕ್‌ನೊಂದಿಗೆ ಲಭ್ಯವಿದ್ದು, ಇದು ಹಿಲ್ ಹೋಲ್ಡ್, ಕಾಲ್, ಮ್ಯೂಸಿಕ್ ಕಂಟ್ರೋಲ್ & ಫಾಲೋ ಮಿ ಹೋಮ್ ಲೈಟ್‌ಗಳನ್ನು ಸಕ್ರಿಯಗೊಳಿಸಲು ನೆರವಾಗುತ್ತದೆ.

ಆಂಪಿಯರ್ ನೆಕ್ಸಸ್: ಉನ್ನತ ಕಾರ್ಯಕ್ಷಮತೆಯೊಂದಿಗೆ ಕುಟುಂಬಕ್ಕೆ ಬೇಕಾಗುವ ವೈಶಿಷ್ಟ್ಯಗಳ ಅನುಭವವನ್ನು ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಡೈಮಂಡ್ ಕಟ್ ಹೆಡ್‌ಲ್ಯಾಂಪ್, ಹಗುರವಾದ ಅಲ್ಯೂಮಿನಿಯಂ ಗ್ರಾಬ್ ಹ್ಯಾಂಡಲ್‌, ಆರ್ಕ್ಟಿಕ್ ಟರ್ನ್-ಪ್ರೇರಿತ ಟೈಲ್ ಲ್ಯಾಂಪ್‌ಗಳು, ದೊಡ್ಡ ಸೀಟ್ಗಳನ್ನು ನೀಡುತ್ತದೆ.

Most Affordable Electric Scooters With 100 Range In Single Charge

ಐದು ರೈಡಿಂಗ್ ಮೋಡ್‌ಗಳೊಂದಿಗೆ ಗಂಟೆಗೆ 93 ಕಿ.ಮೀ ಟಾಪ್ ಸ್ಪೀಡ್ ಮತ್ತು ಸಿಂಗಲ್ ಚಾರ್ಜ್‌ಗೆ ಸ್ಟ್ರಾಂಡರ್ಡ್ 136 ಕಿ.ಮೀ ರೇಂಜ್, ಫ್ರಂಟ್ ಡಿಸ್ಕ್ ಬ್ರೇಕ್‌ಗಳು ಮತ್ತು IP67 ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಈ ಹೊಸ ಆಂಪಿಯರ್ ನೆಕ್ಸಸ್ (Ampere Nexus) ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.10 ಲಕ್ಷವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 10, 2024, 16:49 [IST]
English summary
Most affordable electric scooters with 100 range in single charge
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+