ಭಾರತದಲ್ಲಿ ಈ ಕಾರುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ: ಈ ಫೀಚರ್ ಇದ್ದರೇ ಫುಲ್ ಡಿಮ್ಯಾಂಡ್!

ಭಾರತೀಯ ಆಟೋ ವಲಯವು ಕಳೆದ ಹತ್ತು ವರ್ಷಗಳಲ್ಲಿ ಭಾರೀ ಅಭಿವೃದ್ಧಿ ಕಂಡಿದೆ. ವಿಶ್ವದ ಅತಿ ದೊಡ್ಡ ವಾಹನ ಮಾರುಕಟ್ಟೆಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿ ಮುನ್ನುಗ್ಗುತ್ತಿದೆ. ಐಷಾರಾಮಿ ಬ್ರಾಂಡ್‌ಗಳು ಭಾರತದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಆಸಕ್ತಿ ತೋರುತ್ತಿವೆ. ಅತ್ಯಂತ ಅಗ್ಗದ ಬೆಲೆಯ ಕಾರುಗಳ ನಿರ್ಮಾಣದಿಂದ ಹಿಡಿದು ವಿಶ್ವದ ಅತ್ಯಂತ ದುಬಾರಿ ಕಾರುಗಳ ಆಮದಿನವರೆಗೆ ಎಲ್ಲಾ ರೀತಿಯ ಕಾರುಗಳಿಗೆ ಭಾರತ ಜನಪ್ರಿಯತೆ ಪಡೆದಿದೆ. ಅಲ್ಲದೇ ವಿಶ್ವದ ಹಲವು ದೇಶಗಳಿಗೆ ಭಾರತ ನಿರ್ಮಿತ ಕಾರುಗಳನ್ನು ರಫ್ತು ಮಾಡಲಾಗುತ್ತಿದೆ. ಇಂತಹ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳು ಯಾವುವು ಗೊತ್ತಾ?

ವಿಶ್ವದ ಎಲ್ಲಾ ಮಾರುಕಟ್ಟೆಗಳಲ್ಲಿ ಸಿಗುವ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿರುವ ಕಾರುಗಳು ಬಹುತೇಕ ಭಾರತದಲ್ಲೂ ಸಿಗುತ್ತವೆ. ಆದ್ರೆ ಇಲ್ಲಿ ಮುಖ್ಯವಾಗಿ ಎರಡು ರೀತಿಯ ಟ್ರಾನ್ಸ್‌ಮಿಷನ್‌ ಹೊಂದಿರುವ ಕಾರುಗಳು ಹೆಚ್ಚಾಗಿ ಮಾರಾಟ ಕಾಣುತ್ತವೆ. ಇದರಲ್ಲಿ ಪ್ರಮುಖವಾಗಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೆಚ್ಚು ಚಾಲ್ತಿಯಲ್ಲಿವೆ.

most-indians-buying-automatic-cars-in-major-cities-of-india

ಮೊದಲಿನಿಂದಲೂ ಹೆಚ್ಚು ಬಳಕೆಯಲ್ಲಿದ್ದ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳನ್ನು ಹಿಂದಿಕ್ಕುವಂತೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರುಗಳು ಪೈಪೋಟಿ ನೀಡುತ್ತಿವೆ. ಹೌದು ಮ್ಯಾನುವಲ್ ಆವೃತ್ತಿಗಳಿಗೆ ಹೋಲಿಸಿದರೆ ಆಟೋಮ್ಯಾಟಿಕ್ ಗೇರ್‌ ಹೊಂದಿರುವ ಕಾರುಗಳ ಬೆಲೆ 60,000 ರೂ.ಗಳಿಂದ 2 ಲಕ್ಷ ರೂ.ಗಳವರೆಗೆ ಏರಿಕೆಯಿಗಿದ್ದರೂ ಭಾರತೀಯರು ಆಟೋಮ್ಯಾಟಿಕ್ ಕಾರುಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ನಗರಗಳಲ್ಲಿ ಹೆಚ್ಚು ಬೇಡಿಕೆ: ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಕಾರುಗಳು 2020 ರಲ್ಲಿ ಒಟ್ಟಾರೆ ಮಾರಾಟದಲ್ಲಿ ಶೇ16% ರಷ್ಟು ಇದ್ದವು. ಆದರೆ ಈಗ ಭಾರತದಲ್ಲಿ ಸಾಮೂಹಿಕ ಮಾರುಕಟ್ಟೆ ವಾಹನ ಮಾರಾಟದ ಶೇ26% ರಷ್ಟಿದೆ ಎಂದು ಜಾಟೊ ಡೈನಾಮಿಕ್ಸ್ನ ಡೇಟಾ ತಿಳಿಸಿದೆ. ಅಗ್ರ 20 ನಗರಗಳಲ್ಲಿ, ಮಾರಾಟವಾದ ಮೂರು ಕಾರುಗಳಲ್ಲಿ ಒಂದು ಆಟೋಮ್ಯಾಟಿಕ್ ಕಾರಾಗಿದೆ ಎಂದು ವರದಿ ಹೇಳಿದೆ.

most-indians-buying-automatic-cars-in-major-cities-of-india

ಭಾರತದಲ್ಲಿ ಪ್ರಸ್ತುತ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಮಹೀಂದ್ರಾ, ಟೊಯೊಟಾ, ಹ್ಯುಂಡೈ ಮತ್ತು ಕಿಯಾದಂತಹ ವಾಹನ ತಯಾರಕರು ಆಟೋಮ್ಯಾಟಿಕ್ ಸೇರಿದಂತೆ ವಿವಿಧ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುತ್ತಿದ್ದಾರೆ. ಈ ಕಂಪನಿಗಳಿಂದ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ 83 ಕಾರು ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಯಾವುದೇ ಕಂಪನಿಯಾಗಲಿ ಲಾಭವಿಲ್ಲದೇ ಹೊಸ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಕಾರನ್ನು ನಿರ್ಮಾಣ ಮಾಡುವುದಿಲ್ಲ. ಈಗ ಬರೋಬ್ಬರಿ 83 ಕಾರು ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ ಎಂದರೆ ಅವುಗಳಿಗೆ ಯಾವ ಮಟ್ಟಕ್ಕೆ ಬೇಡಿಕೆ ಇದೆ ಎಂದು ನಾವು ಊಹಿಸಬಹುದು.

most-indians-buying-automatic-cars-in-major-cities-of-india

ವರದಿಯ ಪ್ರಕಾರ, ಬಹಳಷ್ಟು ಕಾರು ಕಂಪನಿಗಳು ತಮ್ಮ ಹೆಚ್ಚಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೇಡಿಕೆಯನ್ನು ಆಧರಿಸಿ ಸ್ಥಳೀಯವಾಗಿ ನಿರ್ಮಿಸಿದರು ಆಶ್ಚರ್ಯವಿಲ್ಲ. ಪ್ರಸ್ತುತ ಮಾರುತಿ ಸುಜುಕಿ ಮತ್ತು ಮಹೀಂದ್ರಾದಂತಹ ಕೆಲ ಪ್ರಮುಖ ವಾಹನ ತಯಾರಕರು ಸ್ಥಳೀಯವಾಗಿ ಈ ಕಾರುಗಳನ್ನು ಉತ್ಪಾದನೆ ಮಾಡುತ್ತಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 15, 2024, 12:39 [IST]
English summary
Most indians buying automatic cars in major cities of india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+