10 ಲಕ್ಷದೊಳಗಿನ 5 ಅತ್ಯಂತ ಪವರ್‌ಫುಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಕಾರುಗಳಿವು
ಭಾರತೀಯ ಕಾರು ಮಾರುಕಟ್ಟೆಯಲ್ಲಿ, ಕೈಗೆಟುಕುವ ಬೆಲೆಯ ಜೊತೆಗೆ ಪರ್ಫಾಮೆನ್ಸ್ ಕೂಡ ನೀಡುವ ಕಾರುಗಳನ್ನು ಹುಡುಕುವುದು ತುಸು ಕಷ್ಟದ ಸಂಗತಿ. ಆದರೆ ಚಿಂತಿಸಬೇಡಿ, ಏಕೆಂದರೆ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿರುವ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಹಲವಾರು ಅತ್ಯಾಕರ್ಷಕ ಆಯ್ಕೆಗಳಿವೆ, ಇವು ನಿಮಗೆ ಪವರ್‌ಫುಲ್ ಚಾಲನಾ ಅನುಭವವನ್ನು ನೀಡುತ್ತವೆ. ಹಾಗೇಯೇ ಇನ್ನೊಂದು ಮೂರು ಲಕ್ಷ ಹೆಚ್ಚು ಖರ್ಚು ಮಾಡಿದ್ರೆ ಇನ್ನೂ ಹೆಚ್ಚಿನ ಪರ್ಫಾಮೆನ್ಸ್ ನೀಡುವ ಕಾರುಗಳು ಸಿಗುತ್ತವೆ. ಒಟ್ಟಾರೆ 13 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವ ಟಾಪ್ 5 ಟರ್ಬೋಚಾರ್ಜ್ಡ್ ಪೆಟ್ರೋಲ್ ಕಾರುಗಳು ಇಲ್ಲಿವೆ.
ಟಾಟಾ ಆಲ್ಟ್ರೋಜ್ ರೇಸರ್(Tata Altroz Racer): ಟಾಟಾ ಇತ್ತೀಚೆಗೆ ಆಲ್ಟ್ರೊಜ್‌ನ ಅತ್ಯಂತ ಪ್ರಬಲ ಆವೃತ್ತಿಯಾದ ಆಲ್ಟ್ರೋಜ್ ರೇಸರ್ ಅನ್ನು ಹೆಚ್ಚು ಪವರ್‌ಫುಲ್ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ. ಇದರ ಪವರ್‌ಫುಲ್ ಎಂಜಿನ್ 118 bhp ಪವರ್ ಮತ್ತು 172 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

ಆಲ್ಟ್ರೋಜ್ ರೇಸರ್‌ನ ಬೆಲೆಗಳು ರೂ. 9.49 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). Altroz ನ ಈ ಸ್ಪೋರ್ಟಿ ಕಾರು ಪ್ರಸ್ತುತ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಬಿಡುಗಡೆಯಾದಾಗಿನಿಂದ ಕಾರು ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಮಾರಾಟದಲ್ಲಿ ಹೊಸ ಅಲೆ ಎಬ್ಬಿಸುತ್ತಿದೆ.
ಟಾಟಾ ನೆಕ್ಸಾನ್ (Tata Nexon): ಟಾಟಾ ಮೋಟಾರ್ಸ್ ನೆಕ್ಸಾನ್‌ಗೆ ಮೂಲ ಟ್ರಿಮ್‌ನಿಂದ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ನೀಡುತ್ತದೆ. 1.2 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 118 ಬಿಹೆಚ್‌ಪಿ ಪವರ್ ಹಾಗೂ 172 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8.00 ಲಕ್ಷಗಳಾಗಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಎಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಿದೆ.

ಹ್ಯುಂಡೈ ಐ20 ಎನ್ ಲೈನ್ (Hyundai i20 N Line): ಈ ಕಾರು 1.0 ಲೀಟರಿನ 3 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 118 ಬಿಹೆಚ್‌ಪಿ ಪವರ್ ಹಾಗೂ 172 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಬೆಲೆಗಳು 9.99 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 12.52 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ)ಇದೆ. 6-ಸ್ಪೀಡ್ ಮ್ಯಾನುವಲ್, ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಿದೆ.
ಹ್ಯುಂಡೈ ವೆನ್ಯೂ (Hyundai Venue): ಹ್ಯುಂಡೈ ವೆನ್ಯೂ 1.0-ಲೀಟರ್ 3 ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 118 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ದರ ರೂ.10.40 ಲಕ್ಷಗಳಾಗಿದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಮಹೀಂದ್ರಾ ಎಕ್ಸ್ ಯುವಿ 3ಎಕ್ಸ್ಒ (Mahindra XUV 3XO): ಈ ವಿಭಾಗದಲ್ಲಿ ಅತ್ಯಂತ ಪವರ್‌ಫುಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಕಾರ್ ಇದಾಗಿದೆ. ಎರಡು ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಎಎಕ್ಸ್ 5 ಟ್ರಿಮ್‌ಗಳಿಂದ ಲಭ್ಯವಿರುವ ಒಂದು ಹೆಚ್ಚು ಶಕ್ತಿಶಾಲಿ 1.2-ಲೀಟರ್ ಎಂಜಿನ್ ಪಡೆದಿದೆ. ಇದು 129 ಬಿಹೆಚ್‌ಪಿ ಪವರ್ ಮತ್ತು 230 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.
ಈ ಎಂಜಿನ್ ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರ ಬೆಲೆಗಳು 10.69 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಈಗಾಗಲೇ ಮಾರುಕಟ್ಟೆಯಲ್ಲಿ ಈ ಕಾರು ಭಾರೀ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ.


Click it and Unblock the Notifications