ಅತ್ಯುತ್ತಮ ಕಾರುಗಳಾದರು ಮಾರಾಟ ಕಾಣದ ನಿರ್ಲಕ್ಷಿತ ವಾಹನಗಳು... ಇವುಗಳ ಬಗ್ಗೆ ಯಾರಿಗೂ ತಿಳಿದಿಲ್ಲ!
ಭಾರತೀಯ ಕಾರುಗಳ ವಿಷಯಕ್ಕೆ ಬಂದಾಗ, ಗ್ರಾಹಕರು ಪಡೆಯುವುದಕ್ಕಿಂತ ಹೆಚ್ಚಿನ ಪ್ರೀತಿಗೆ ಅರ್ಹವಾದ ಕೆಲವು ಕಾರುಗಳಿವೆ. ದುರದೃಷ್ಟವಶಾತ್ ಈ ಅರ್ಹತೆಗಳ ಹೊರತಾಗಿಯೂ, ಇಲ್ಲಿ ನೀಡಲಾಗಿರುವ ಕಾರುಗಳು ಉತ್ತಮ ಮಾರಾಟ ಸಂಖ್ಯೆಗಳನ್ನು ಹೊಂದಿಲ್ಲ. ನಾವು ಇಲ್ಲಿ ಪಟ್ಟಿ ಮಾಡಿರುವ ಕಾರುಗಳು ವಿಶಿಷ್ಟ ಅಂಶಗಳನ್ನು ಹೊಂದಿವೆ. ಬಜೆಟ್ ಸೇರಿದಂತೆ ತುಸು ಹೆಚ್ಚಿನ ಬೆಲೆಯ ರೇಂಜ್‌ನಲ್ಲೂ ಅತ್ಯುತ್ತ ಫೀಚರ್ಸ್ ಮೈಲೇಜ್ ನೀಡುವ ಬೆಸ್ಟ್ ಕಾರುಗಳಾಗಿವೆ. ಪಟ್ಟಿಯಲ್ಲಿ ಮಾರುತಿ ಸುಜುಕಿ, ಸಿಟ್ರನ್, ಜೀಪ್, ಹೋಂಡಾ, ನಿಸ್ಸಾನ್ ಬ್ರಾಂಡ್‌ಗಳ ಕಾರುಗಳಿದ್ದು, ವಿವರವಾದ ಮಾಹಿತಿಯನ್ನು ಇಲ್ಲಿ ನೋಡೋಣ.
ಮಾರುತಿ ಸುಜುಕಿ ಜಿಮ್ನಿ: ಈ ಪಟ್ಟಿಯಲ್ಲಿ ಮೊದಲ ವಾಹನ ಮಾರುತಿ ಸುಜುಕಿ ಜಿಮ್ನಿ. ಇದರ ಆನ್-ರೋಡ್ ಡ್ರೈವಿಂಗ್ ಕೂಡ ಶ್ಲಾಘಿಸಲ್ಪಟ್ಟಿದೆ. ಆಫ್-ರೋಡರ್ ಆಗಿದ್ದರೂ, ಮಾರುತಿ ಸುಜುಕಿ ಜಿಮ್ನಿ ಉತ್ತಮ ಆನ್-ರೋಡ್ ಅನುಭವವನ್ನು ನೀಡುತ್ತದೆ. ದುರದೃಷ್ಟವಶಾತ್, ಅದರ ಅರ್ಹತೆಗಳ ಹೊರತಾಗಿಯೂ ಉತ್ತಮ ಮಾರಾಟ ಕಾಣುತ್ತಿಲ್ಲ.

ಮಾರಾಟದ ಕೊರತೆಗೆ ಮುಖ್ಯ ಕಾರಣವೆಂದರೆ ಮಹೀಂದ್ರಾ ಥಾರ್ ನೊಂದಿಗಿನ ಸ್ಪರ್ಧೆ. ಇದಲ್ಲದೆ ಜಿಮ್ನಿ ಬಿಡುಗಡೆಯಾದಾಗ ತುಂಬಾ ದುಬಾರಿ ಎಂದು ಅನೇಕರು ಭಾವಿಸಿದ್ದರು. ಇದನ್ನು ಅರಿತ ಕಂಪನಿಯು 4 ಲಕ್ಷ ರೂ.ಗಳವರೆಗೆ ರಿಯಾಯಿತಿಯನ್ನು ಈಗ ನೀಡುತ್ತಿದೆ. ಸದ್ಯ ಅದರ ಬೆಲೆ ಶ್ರೇಣಿಯಲ್ಲಿ ಹಣಕ್ಕೆ ಬಹಳ ಮೌಲ್ಯಯುತ ಕಾರನ್ನಾಗಿ ಮಾಡಿದೆ.
ನಿಸ್ಸಾನ್ ಮ್ಯಾಗ್ನೈಟ್ ಟರ್ಬೊ: ನಿಸ್ಸಾನ್ ಮ್ಯಾಗ್ನೈಟ್ ಟರ್ಬೊ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಕೈಗೆಟುಕುವ ಕಾರಾಗಿದ್ದರೂ, ಪ್ರತಿಸ್ಪರ್ಧಿಗಳಿಂದಾಗಿ ಮರೆಯಾಗಿಬಿಟ್ಟಿದೆ. ನಿಜಕ್ಕೆ ಇದರ ಟರ್ಬೋಚಾರ್ಜ್ಡ್ ಎಂಜಿನ್ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ. 1.0-ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ.

ಸಿಟ್ರೋನ್ ಸಿ 3 ಟರ್ಬೊ: ಸಿಟ್ರನ್ ಸಿ 3 ಟರ್ಬೊ ಹ್ಯಾಚ್ ಬ್ಯಾಕ್ ಹಲವಾರು ಸವಲತ್ತುಗಳನ್ನು ಹೊಂದಿದೆ. ಈ ಬ್ರ್ಯಾಂಡ್ ಭಾರತಕ್ಕೆ ಹೊಸದಾಗಿರುವುದರಿಂದ ಇದನ್ನು ಹೆಚ್ಚಾಗಿ ಕಡೆಗಣಿಸಲಾಗಿದೆ. ಇದು 1.2-ಲೀಟರ್ ಟರ್ಬೋಚಾರ್ಜ್ಡ್ 3 ಸಿಲಿಂಡರ್ ಎಂಜಿನ್ ಹೊಂದಿದೆ. ಪ್ರಸ್ತುತ ಇದರ ಬೆಲೆ 9.3 ಲಕ್ಷ ರೂ.ಗಳಾಗಿದ್ದು, ಈ ಹ್ಯಾಚ್ ಬ್ಯಾಕ್ ಮೇಲೆ ನೀವು ಉತ್ತಮ ರಿಯಾಯಿತಿಯನ್ನು ಪಡೆಯಬಹುದು.
ಹೋಂಡಾ ಎಲಿವೇಟ್: ಹೋಂಡಾ ಎಲಿವೇಟ್ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಬಹಳ ಅದ್ಭುತವಾದ ಕಾರು. ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನ ಟಾಪ್-ಸ್ಪೆಕ್ ರೂಪಾಂತರಗಳಿಗೆ ಹೋಲಿಸಿದರೆ ಇದು ಸ್ವಲ್ಪ ಕಡಿಮೆ ಎನ್ನಿಸಬಹುದು. ಆದರೆ ಈ ಎಸ್‌ಯುವಿಗಳ ಕಡಿಮೆ ರೂಪಾಂತರಗಳಿಗೆ ಹೋಲಿಸಿದರೆ ಇದು ಉತ್ತಮ ಪರ್ಫಾಮೆನ್ಸ್ ನೀಡುತ್ತದೆ.

ಇದನ್ನು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ ಸಿಂಗಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಇದರ ಎಂಜಿನ್ 119 ಬಿಹೆಚ್‌ಪಿ ಪವರ್ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೋಂಡಾ ಕಾರುಗಳ ನಿರ್ಮಾಣ ಗುಣಮಟ್ಟವು ಈಗಾಗಲೇ ಉನ್ನತ ದರ್ಜೆಯಲ್ಲಿದೆ. ಆದ್ದರಿಂದ ನೀವು ಯೋಗ್ಯವಾದ ಮಧ್ಯಮ ಗಾತ್ರದ ಎಸ್‌ಯುವಿ ನೋಡುತ್ತಿದ್ದರೆ, ಇದನ್ನು ಪರಿಶೀಲಿಸಬಹುದು.
ಜೀಪ್ ಕಂಪಾಸ್ ಡೀಸೆಲ್: ಜೀಪ್ ಕಂಪಾಸ್ ಅತ್ಯಂತ ದುಬಾರಿ ಮಧ್ಯಮ ಗಾತ್ರದ ಎಸ್‌ಯುವಿ ಎಂಬುದು ನಿಜ. ಆದರೆ ತನ್ನ ಅನೇಕ ಪ್ರತಿಸ್ಪರ್ಧಿಗಳಿಗೆ ಇಲ್ಲದ ಐಷಾರಾಮಿ ಮತ್ತು ಪ್ರೀಮಿಯಂ ಮಟ್ಟವನ್ನು ನೀಡುತ್ತದೆ. ಸರಿಯಾದ 4X4 ಸೆಟಪ್ ನೊಂದಿಗೆ ಬರುವ ಅಪರೂಪದ ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಒಂದಾಗಿದೆ. 2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 172 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.


Click it and Unblock the Notifications