ಹೊಸ ಹೋಂಡಾ ಫ್ರೀಡ್ MPV ಅನಾವರಣ: ಹೈಬ್ರಿಡ್‌ನಲ್ಲೂ ಲಭ್ಯ!
ಹೊಸ ಹೋಂಡಾ ಫ್ರೀಡ್ MPV ಕಾರು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡಿಲ್ಲ. ಸದ್ಯ ಈ ಕಾರನ್ನು ಜಪಾನ್‌ನಲ್ಲಿ ಮಾತ್ರ ಅನಾವರಣಗೊಳಿಸಿ ಬೆಲೆಗಳನ್ನು ಘೋಷಿಸಲಾಗಿದೆ. ಏರ್ ಮತ್ತು ಕ್ರಾಸ್ಟಾರ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಈ ಕಾರು, ಅದರ ಹಿಂದಿನದಕ್ಕಿಂತ ಸ್ವಲ್ಪ ದೊಡ್ಡದಾಗಿದೆ, 4,310 ಎಂಎಂ ಉದ್ದ, 1,720 ಎಂಎಂ ಅಗಲ ಮತ್ತು 1,780 ಎಂಎಂ ಎತ್ತರವನ್ನು ಹೊಂದಿದೆ. ಈ ಕಾರು ಜಪಾನ್‌ನಲ್ಲಿ 1.5 ಲೀಟರ್ NA ಪೆಟ್ರೋಲ್ ಮತ್ತು 1.5 ಲೀಟರ್ ಪೆಟ್ರೋಲ್ / ಹೈಬ್ರಿಡ್ ವೇರಿಯೆಂಟ್‌ಗಳಲ್ಲಿ ಸಿಗಲಿದೆ.
ಹೊಸ ಹೋಂಡಾ ಫ್ರೀಡ್ ಎಂಪಿವಿ ಜಪಾನ್‌ನಲ್ಲಿ 2.508 ಮಿಲಿಯನ್‌ನಿಂದ 3.437 ಮಿಲಿಯನ್ ಯೆನ್ (ಅಂದಾಜು 13,03,156 ರೂ. ನಿಂದ 17,85,521ರೂ.) ವರೆಗೆ ಬೆಲೆಯಿದೆ. ಫ್ರೀಡ್ ಏರ್ ಅನ್ನು 6 ಮತ್ತು 7 ಸೀಟರ್ ಲೇಔಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದ್ದು, ಕ್ರಾಸ್ಟಾರ್ 5 ಮತ್ತು 6 ಸೀಟರ್ ಕಾನ್ಫಿಗರೇಶನ್‌ನಲ್ಲಿ ನೀಡಲಾಗಿದೆ.

ಅಂಗವೈಕಲ್ಯ ಹೊಂದಿರುವ ಪ್ರಯಾಣಿಕರಿಗಾಗಿ ವೀಲ್‌ಚೇರ್‌ಗಳಿಗೆ ವಿಸ್ತರಿಸಬಹುದಾದ ರ್ಯಾಂಪ್ ಮತ್ತು ಮುಂಭಾಗದ ಪ್ರಯಾಣಿಕರ ಆಸನವನ್ನು ಒಳಗೊಂಡ ವಿಶೇಷ ವೇರಿಯೆಂಟ್‌ಗಳು ಕೂಡ ಇವೆ. ಈ ಹೊಸ ಹೋಂಡಾ ಫ್ರೀಡ್ MPV ಡಿಸೈನ್ ಬಗ್ಗೆ ಹೇಳುವುದಾದ್ರೆ, ಕ್ರಾಸ್ ಟಾರ್ ರೂಪಾಂತರದ ಹೊರಭಾಗದ ಗ್ರಿಲ್, ಕ್ಲಾಡಿಂಗ್ ಮತ್ತು ಸ್ಕಿಡ್ ಪ್ಲೇಟ್‌ಗೆ ಹೆಚ್ಚು ಒರಟಾದ ಫಿನಿಶಿಂಗ್ ನೀಡಲಾಗಿದೆ. ಒಳಾಂಗಣವು ಹೊಚ್ಚ ಹೊಸ ಡ್ಯಾಶ್ ಬೋರ್ಡ್ ಅನ್ನು ನೀಡಲಾಗಿದ್ದು, ಇದು ಇತ್ತೀಚಿನ ಎನ್-ಬಾಕ್ಸ್‌ಗೆ ಹೋಲುತ್ತದೆ.
ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ಫ್ಯಾಬ್ರಿಕ್ ಟ್ರಿಮ್‌ನಿಂದ ಸುತ್ತುವರೆದಿರುವ ದೊಡ್ಡ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಹೊಸ ಎಸಿ ವೆಂಟ್‌ಗಳು ಲಭ್ಯವಿದೆ. ಎಂಜಿನ್ ವಿಷಯಕ್ಕೆ ಬಂದರೆ 2024ರ ಹೋಂಡಾ ಫ್ರೀಡ್ ಎಂಪಿವಿನಲ್ಲಿ 1.5 ಲೀಟರ್ NA ಪೆಟ್ರೋಲ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್‌ಗಳನ್ನು ನೀಡಲಾಗಿದೆ.

ಹೋಂಡಾ ಹೈಬ್ರಿಡ್ ಕಾರು, ಇ:ಎಚ್ ಇವಿ ಡ್ಯುಯಲ್ ಮೋಟರ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದ್ದು, 1.5 ಲೀಟರ್ NA 4-ಪಾಟ್ ಪೆಟ್ರೋಲ್ ಎಂಜಿನ್ ಅನ್ನು ಸಂಯೋಜಿಸುತ್ತದೆ. ಇದು 106 ಪಿಎಸ್ ಪವರ್ ಮತ್ತು 127 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಇದು 48-ಎಎಚ್ ಲಿ-ಐಯಾನ್ ಬ್ಯಾಟರಿ ಮತ್ತು 123 ಪಿಎಸ್ ಪವರ್ ಮತ್ತು 253 ಎನ್ಎಂ ಟಾರ್ಕ್ ಅಭಿವೃದ್ಧಿಪಡಿಸುವ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುತ್ತದೆ.
ಅಗತ್ಯವಿದ್ದಾಗ ಹಿಂಭಾಗದ ಆಕ್ಸಲ್‌ಗೆ ಪವರ್ ನೀಡಲು ಇಂಟೆಲಿಜೆಂಟ್ ಪವರ್ ಯುನಿಟ್ (ಐಪಿಯು) ಮತ್ತು ಸೆಕೆಂಡರಿ ಎಲೆಕ್ಟ್ರಿಕ್ ಮೋಟರ್ ಅನ್ನು ಸೇರಿಸುವುದರೊಂದಿಗೆ ಎಡಬ್ಲ್ಯುಡಿ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ. ಇನ್ನು 1.5 ಲೀಟರ್ NA ಪೆಟ್ರೋಲ್ ಎಂಜಿನ್ 6,600 ಆರ್‌ಪಿಎಂನಲ್ಲಿ 118 ಬಿಹೆಚ್‌ಪಿ ಪವರ್ ಮತ್ತು 4,300 ಆರ್‌ಪಿಎಂನಲ್ಲಿ 142 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೋಂಡಾ ಸೆನ್ಸಿಂಗ್ ಸೂಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿರುವ ಎಂಪಿವಿ ಎಇಬಿ (ಸ್ವಾಯತ್ತ ತುರ್ತು ಬ್ರೇಕಿಂಗ್), ಎಸಿಸಿ (ಅಡಾಪ್ಟಿವ್ ಕ್ರೂಸ್ ಕಂಟ್ರೋಲ್), ಎಲ್ಕೆಎ (ಲೇನ್ ಕೀಪ್ ಅಸಿಸ್ಟ್) ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆದಿದೆ. ಹೈಬ್ರಿಡ್ ಡಬ್ಲ್ಯುಎಲ್‌ಟಿಸಿ 25 ಕಿ.ಮೀ ಮೈಲೇಜ್ ಮತ್ತು ಸಾಮಾನ್ಯ NA ಪೆಟ್ರೋಲ್ ಎಂಜಿನ್ 16.2 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








