ಹೊಸ ಕಿಯಾ ಕಾರ್ನಿವಲ್ ರಿವ್ಯೂ ವಿಡಿಯೋ: ಅರಮನೆಯಂತಿದೆ ಬೃಹತ್ ಎಂಪಿವಿ!
ಆಟೋ ಎಕ್ಸ್‌ಪೋ 2023 ರಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಕಿಯಾ ಕಾರ್ನಿವಲ್, 63.90 ಲಕ್ಷ ಬೆಲೆಯೊಂದಿಗೆ (ಎಕ್ಸ್ ಶೋರೂಂ) ಈಗ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಐಷಾರಾಮಿ ಕೊರಿಯನ್ MPV ಈ ಮಟ್ಟದ ಬೆಲೆಗೆ ತಕ್ಕಂತೆ ಎಲ್ಲಾ ಫೀಚರ್ ಹಾಗೂ ಪರ್ಫಾಮೆನ್ಸ್ ಹೊಂದಿದೆಯೇ ಎಂಬುದನ್ನು ತಿಳಿಯಲು, ನಾವು ಇತ್ತೀಚೆಗೆ ಹೊಸ 2024 ಕಿಯಾ ಕಾರ್ನಿವಲ್ ಅನ್ನು ಭಾರತೀಯ ಟಾರ್ಮ್ಯಾಕ್‌ನಲ್ಲಿ ಓಡಿಸಿದ್ದೇವೆ. ಹೊಸ 18-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಇದರ ದೊಡ್ಡ ಮುಖ್ಯಾಂಶಗಳಾಗಿವೆ. ಹೊಸ ಕಾರ್ನಿವಲ್‌ನ ಹಲವು ವಿಶೇಷತೆಗಳನ್ನು ಈ ರಿವ್ಯೂ ವಿಡಿಯೋದಲ್ಲಿ ನೋಡಿ.
ಹೊಸ 2024 ಕಿಯಾ ಕಾರ್ನಿವಲ್ ಒಂದು ಐಷಾರಾಮಿ MPV ಆಗಿದ್ದು, ಅದರೊಳಗಿನ ತಂತ್ರಜ್ಞಾನದಿಂದ ಹೊಂದಿಕೆಯಾಗುವಂತೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಉನ್ನತ ಮಟ್ಟದ ಭಾರತೀಯ ಕಾರು ಖರೀದಿದಾರರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ, ಲಾಂಗ್ ಡ್ರೈವ್ ಬಯಸುವ ಇಡೀ ಕುಟುಂಬಕ್ಕೆ ವಾಹನವು ಒಂದೊಳ್ಳೆ ಅನುಭವ ನೀಡುತ್ತದೆ.

ಮೂರನೇ ಜೆನ್ ಕಾರ್ನಿವಲ್ ವಿನ್ಯಾಸಕ್ಕಿಂತ ಹೋಲಿಸಿದರೆ ಹೊಸ ಕಾರ್ನಿವಲ್ ದೊಡ್ಡದಾಗಿದೆ. ಇದರ ವಿನ್ಯಾಸವು ದಪ್ಪವಾಗಿದ್ದು, Kia ನ ಆಕ್ರಮಣಕಾರಿ ಹೊಸ ವಿನ್ಯಾಸವು ಅತ್ಯುತ್ತಮವಾಗಿ ಇದಕ್ಕೆ ಹೊಂದಿಕೊಂಡಿದೆ. ಇದನ್ನು ಬಾಕ್ಸರ್ MPV ಡಿಸೈನ್ ಎಂದು ಹೇಳಿದರೂ ತಪ್ಪಾಗುವುದಿಲ್ಲ. ಮುಂಭಾಗದಲ್ಲಿ, ಹೊಸ ಕಾರ್ನಿವಲ್ ಟೈಗರ್ ನೋಸ್ ಗ್ರಿಲ್ ಅತ್ಯಾಕರ್ಷಕವಾಗಿದೆ.
ಖಚಿತವಾಗಿ, ಹಿಂದಿನ ಪೀಳಿಗೆಗೆ ಹೋಲಿಸಿದರೆ ಬೆಲೆ ದ್ವಿಗುಣಗೊಂಡಿದೆ. ಆದರೇ, 2024 ರ ಕಿಯಾ ಕಾರ್ನಿವಲ್ ಬೆಲೆಗೆ ತಕ್ಕಂತೆ ಬೃಹತ್ ಹೆಜ್ಜೆಯನ್ನು ಮುಂದಿಟ್ಟಿದೆ. ಸಂಪೂರ್ಣ ಆಮದು ಆಗಿ ಭಾರತಕ್ಕೆ ಬಂದಿದೆ ಎಂಬ ಅಂಶವು ಬೆಲೆಯನ್ನು ಸ್ವಲ್ಪಮಟ್ಟಿಗೆ ಸಮರ್ಥಿಸುತ್ತದೆ. ಹೊಸ ಕಾರ್ನಿವಲ್‌ನ ಬೆಲೆಯಲ್ಲಿ ಫ್ಯಾಮಿಲಿ MPV ಗಾಗಿ ಹುಡುಕುತ್ತಿರುವವರಿಗೆ ಇದು ಬೆಸ್ಟ್ ಎಂದು ನಾವು ಹೇಳುತ್ತೇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








