ಮೊದಲ ಸ್ವಿಫ್ಟ್‌ಗಿಂತ 100 ಕೆಜಿ ಕಮ್ಮಿಯಂತೆ ಹೊಸ ಸ್ವಿಫ್ಟ್‌: ಗುಣಮಟ್ಟದಲ್ಲಿ ರಾಜಿಯಾಯಿತಾ ಮಾರುತಿ ಸುಜುಕಿ!

ಭಾರತೀಯರು ಬಹು ನಿರೀಕ್ಷೆಯಿಂದ ಕಾದು ಕುಳಿತು ಕೊನೆಗೂ ಕೆಲ ವಾರಗಳ ಹಿಂದೆ ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿತ್ತು. ಹಲವು ಫಿಚರ್‌ಗಳು ಮತ್ತು ಹೊಸ ಎಂಜಿನ್‌ ಜೊತೆ ಮಾರುಕಟ್ಟೆಗೆ ಕಾಲಿಟ್ಟ ಮಾರುತಿ ಸ್ವಿಫ್ಟ್‌ ಈ ಹಿಂದಿಗಿಂತಲೂ ಸಾಕಷ್ಟು ರಿಫೈನ್‌ ಆಗಿದ್ದು, ಉತ್ತಮ ಮೈಲೇಜ್‌ ಅನ್ನು ನೀಡುತ್ತಿದೆ.

ಇದೀಗ ಮಾರುತಿ ಸ್ವಿಫ್ಟ್ ಕಾರಿನ ಕುರಿತು ಮತ್ತೊಂದು ಮಹತ್ವಪೂರ್ಣ ಮಾಹಿತಿ ಹೊರಬಿದ್ದಿದೆ. ಹೌದು, 2005 ರಲ್ಲಿ ಮಾರುತಿ ಸುಜುಕಿ ಸ್ವಿಫ್ಟ್‌ ಲಾಂಚ್ ಆದಾಗಿನಿಂದ ಪ್ರತಿ ತಲೆಮಾರಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡೇ ಬಂದಿದೆ. ನಾಲ್ಕು ತಲೆಮಾರುಗಳ ಸ್ವಿಫ್ಟ್‌ನಲ್ಲಿ ಇತ್ತೀಚೆಗೆ ಲಾಂಚ್ ಆಗಿರುವ ಸ್ವಿಫ್ಟ್‌ ಅತ್ಯಂತ ಹಗುರಾವಗಿದೆ ಎಂದು ತಿಳಿದು ಬಂದಿದೆ.

New 2024 Maruti Suzuki Swift is 100kg lighter than the first-generation model

ಹೌದು, ಮಾರುತಿ ಸುಜುಕಿ ಕಂಪನಿಯಲ್ಲಿ ಈ ಹಿಂದೆ ಪ್ರಮುಖ ಚೀಫ್‌ ಟೆಕ್ನಿಕಲ್‌ ಆಫೀಸರ್‌ ಆಗಿದ್ದ ಸಿವಿ ರಾಮನ್‌ ಅವರು ಈ ಮಹತ್ವದ ಮಾಹಿತಿಯನ್ನು ಹೊರಹಾಕಿದ್ದು, ಈ ತಲೆಮಾರಿನ ಸ್ವಿಫ್ಟ್‌ ಕಾರು (2024 Maruti Suzuki Swift) ಮೊದಲ ತಲೆಮಾರಿಗಿಂತಲೂ ಸುಮಾರು 100 ಕಿಲೋ ಗ್ರಾಂಗಳಷ್ಟು ಹಗುರವಾಗಿದೆ ಎಂಬ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಇದು ಮಾತ್ರವಲ್ಲದೇ ಹೊಸ ಮಾರುತಿ ಸುಜುಕಿಯಲ್ಲಿ ಹೊಸ 3 ಸಿಲಿಂಡರ್‌ ಎಂಜಿನ್‌ ಅನ್ನು ಬಳಸಲಾಗಿದ್ದು ಇದು ಕಳೆದ ತಲೆಮಾರಿಗಿಂತ 50 ಶತಮಾನದಷ್ಟು ಹೆಚ್ಚು ದಕ್ಷತೆಯನ್ನು ಪಡೆದಿದೆ ಎನ್ನಲಾಗುತ್ತಿದೆ. ಏನೇ ಆದರೂ ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ಪವರ್‌ ಕೊಂಚ ಕಡಿಮೆಯಾಗಿದ್ದರೂ, ಮೈಲೇಜ್‌ ಮೂಲಕ ಹೆಚ್ಚಿನ ಜನರನ್ನು ತನ್ನತ್ತ ಸೆಳೆದುಕೊಳ್ಳಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ವರ್ಷ ಮಾರುತಿ ಸುಜುಕಿಯ ಹೈಬ್ರಿಡ್‌ ಸ್ವಿಫ್ಟ್‌ ಸಹ ಲಾಂಚ್‌ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

New 2024 Maruti Suzuki Swift is 100kg lighter than the first-generation model

ನೂತನ ಸ್ವಿಫ್ಟ್‌' ಹ್ಯಾಚ್‌ಬ್ಯಾಕ್‌ 1.2-ಲೀಟರ್ 3-ಸಿಲಿಂಡರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 80 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 112 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್‌ ಬಾಕ್ಸ್‌ನೊಂದಿಗೆ ಲಭ್ಯವಿದ್ದು, 24.8 - 25.72 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಯುಎಸ್‌ಬಿ ಟೈಪ್-ಎ & ಟೈಪ್-ಸಿ ಪೋರ್ಟ್‌, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಆಟೋ ಕ್ಲೇಮೇಟ್ ಕಂಟ್ರೋಲ್, ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

New 2024 Maruti Suzuki Swift is 100kg lighter than the first-generation model

ಹೊಸ ಮಾರುತಿ ಸ್ವಿಫ್ಟ್‌ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಎಲ್ಲ ಮಾದರಿಗಳು 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಸೀಟ್ ಬೆಲ್ಟ್ ರಿಮೈಂಡರ್‌ ಒಳಗೊಂಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ. ಮೇ.1ರಿಂದಲೇ ಈ ಕಾರಿನ ಬುಕ್ಕಿಂಗ್ ಶುರುವಾಗಿದ್ದು, ಮುಂದಿನ ತಿಂಗಳಿನಿಂದ ವಿತರಣೆಗಳು ಆರಂಭವಾಗಲಿದೆ ಎಂದು ವರದಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, May 28, 2024, 10:59 [IST]
English summary
New 2024 maruti suzuki swift is 100kg lighter than the first generation model
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+