Maruti: ಹೊಸ 2024 ಮಾರುತಿ ಸ್ವಿಫ್ಟ್ ಹಣಕ್ಕೆ ತಕ್ಕ ಮೌಲ್ಯವಿದೆಯೇ? ಮೋಸ ಹೋಗಬೇಡಿ!
ಭಾರತದಲ್ಲಿ ಇತ್ತೀಚೆಗಷ್ಟೆ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿರುವ ಹೊಸ 2024 ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಖರೀದಿಸಬಹುದೇ? ಈ ಕಾರು ಇತರ ಹ್ಯಾಚ್‌ಬ್ಕಾಕ್‌ಗಳಿಗೆ ಹೋಲಿಸಿಕೊಂಡರೆ ಹಣಕ್ಕೆ ತಕ್ಕ ಮೌಲ್ಯವನ್ನು ನೀಡುತ್ತದೆಯೇ ಎಂಬೆಲ್ಲಾ ಕಮೆಂಟ್‌ಗಳನ್ನು ನಿತ್ಯ ಡ್ರೈವ್‌ಸ್ಪಾರ್ಕ್ ಫಾಲೋವರ್ಸ್ ಕೇಳುತ್ತಿದ್ದಾರೆ. ಈ ಕಾರಿನ ಬಗ್ಗೆ ಸಂದೇಹವಿದ್ದವರಿಗೆ ಇಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇವೆ.
ಹೊಸ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಕಾರನ್ನು ರೂ.6.49 ಲಕ್ಷದಿಂದ ರೂ.9.65 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಇತರ ಅಂತರಾಷ್ಟ್ರೀಯ ಸ್ವಿಫ್ಟ್ ಮಾದರಿಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ತೀರಾ ಅಗ್ಗದ ಬೆಲೆಗೆ ಬಿಡುಗಡೆಯಾಗಿದೆ. ಉದಾಹರಣೆಗೆ ಜಪಾನ್‌ನಲ್ಲಿ ಹೊಸ-ಜೆನ್ ಸುಜುಕಿ ಸ್ವಿಫ್ಟ್‌ನ ಬೆಲೆಗಳು 1,922,800 ಯೆನ್‌ಗಳಿಂದ ಆರಂಭವಾಗಿ 2,087,800 ಯೆನ್‌ಗಳವರೆಗೆ (ಅಂದಾಜು ರೂ. 11 ಲಕ್ಷದಿಂದ ಆರಂಭವಾಗಿ ರೂ. 20 ಲಕ್ಷದವರೆಗೆ) ಇದೆ. ಈ ಬೆಲೆಗಳ ಅಂತರವು ಭಾರತದಲ್ಲಿ ಮಾರಾಟವಾಗುವ ಸ್ವಿಫ್ಟ್‌ನ ಸುರಕ್ಷತಾ ಗುಣಮಟ್ಟದ ಮೇಲೆ ಪ್ರಭಾವ ಭೀರುತ್ತದೆ ಎಂಬುದನ್ನು ಗಮನಿಸಬೇಕು.

ಹೊಸ ಡಿಸೈನ್: ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಆಕರ್ಷಕವಾದ ವಿನ್ಯಾಸ (ಡಿಸೈನ್)ವನ್ನು ಹೊಂದಿದೆ. ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ನವೀನವಾಗಿರುವ ಬಂಪರ್‌ಗಳು, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಬ್ಲ್ಯಾಕ್ (ಕಪ್ಪು) ಬಣ್ಣದಲ್ಲಿರುವ ಗ್ರಿಲ್, ಎಲ್ಇಡಿ ಫಾಗ್ ಲೈಟ್‌ಗಳು, 15-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಸ್ ಮತ್ತು ಎಲ್ಇಡಿ ಟೈಲ್‌ಲೈಟ್‌ಗಳನ್ನು ಒಳಗೊಂಡಿದೆ.
ಸುಧಾರಿತ ಮೈಲೇಜ್: ಈ ಮಾರುತಿ ಸುಜುಕಿ ಸ್ವಿಫ್ಟ್ 1.2-ಲೀಟರ್ 3-ಸಿಲಿಂಡರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 80 ಪಿಎಸ್ ಗರಿಷ್ಠ ಪವರ್ ಹಾಗೂ 112 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 24.8 ರಿಂದ 25.72 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸುರಕ್ಷತೆ: ಜಪಾನ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ಜೆನರೇಷನ್ ಸ್ವಿಫ್ಟ್ ಕಾರು 5 ಸ್ಟಾರ್‌ಗಳಿಗೆ 4 ಸ್ಟಾರ್ ರೇಟಿಂಗ್ ಗಳಿಸಿದೆ. ಭಾರತದ ಈ ಹಿಂದಿನ ಜೆನ್ ಮಾರುತಿ ಸ್ವಿಫ್ಟ್ ಕಾರು 5 ಸ್ಟಾರ್‌ಗಳಿಗೆ ಕೇವಲ 1 ಸ್ಟಾರ್ ರೇಟಿಂಗ್ ಅನ್ನು ಮಾತ್ರ ಪಡೆದಿದೆ. ಆದ್ರೆ ಈಗ ಬಿಡುಗಡೆಯಾಗಿರುವ ಹೊಸ ಜೆನ್ ಮಾರುತಿ ಸುಜುಕಿ ಸ್ವಿಫ್ಟ್ನಲ್ಲಿ ಮೊದಲಿಗಿಂತ ಸುರಕ್ಷತೆ ಹೆಚ್ಚಿಸಲಾಗಿದ್ದು, ಎಲ್ಲ ಮಾದರಿಗಳು 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಸೀಟ್ ಬೆಲ್ಟ್ ರಿಮೈಂಡರ್ ಒಳಗೊಂಡಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ.
ಶೀಘ್ರದಲ್ಲಿಯೇ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೂ ಒಳಪಡುವ ಸಾಧ್ಯತೆಯಿದೆ. ಈ 2024ರ ಮಾರುತಿ ಸುಜುಕಿ ಸ್ವಿಫ್ಟ್ ಜಪಾನ್ ಮಾದರಿಯಂತೆ 4 ಸ್ಟಾರ್ ರೇಟಿಂಗ್ ಗಳಿಸುವ ಬಗ್ಗೆ ಅನುಮಾನಗಳಿವೆ. ಏಕೆಂದರೆ ಮೇಲೆ ಹೇಳಿದಂತೆ ಇಲ್ಲಿ ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಕಾರಣ ಜಪಾನಿನ ಮಾದರಿಗಿಂತ ಸ್ವಲ್ಪ ಭಿನ್ನವಾಗಿ ಸುರಕ್ಷತಾ ರೇಟಿಂಗ್ ಬದಲಾಗಬಹುದು.

ಹಣಕ್ಕೆ ತಕ್ಕ ಮೌಲ್ಯವಿದೆಯೇ?: ನಮಗೆ ತಿಳಿದುರುವಂತೆ ಈ ಬೆಲೆಗೆ ಇಷ್ಟು ಫೀಚರ್‌ಗಳನ್ನು ಒಳಗೊಂಡಿರುವ ಬೆಸ್ಟ್ ಹ್ಯಾಚ್‌ಬ್ಯಾಕ್ ಎಂದೇ ಹೇಳಬಹುದು. ಕಾರೆಂದರೆ ಕೇವಲ ಡಿಸೈನ್, ಫೀಚರ್ಸ್, ಮೈಲೇಜ್ ಮಾತ್ರವಲ್ಲ ಗುಣಮಟ್ಟ ಕೂಡ ಮುಖ್ಯವಾಗಿರುವ ಕಾರಣ ಸುರಕ್ಷತಾ ರೇಟಿಂಗ್ ಬರುವವರೆಗು ಕಾಯಬೇಕಿದೆ. ಒಟ್ಟಾರೆ ಸಿಟಿ ಡ್ರೈವ್‌ಗೆ ಇದು ಉತ್ತಮ ಕಾರೆಂದು ಹೇಳಬಹುದು. ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications