BMW iX xDrive50 ಎಲೆಕ್ಟ್ರಿಕ್ ಕಾರು ಬಿಡುಗಡೆ: ಐಷಾರಾಮಿ ಇಂಟೀರಿಯರ್, ಭರ್ಜರಿ ಫಿಚರ್ಸ್

'ಬಿಎಂಡಬ್ಲ್ಯು ಇಂಡಿಯಾ' ಇಂದು ಭಾರತದಲ್ಲಿ ಹೊಸ BMW iX xDrive50 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಹೊಸ BMW iX xDrive50 ಭಾರತದಾದ್ಯಂತ ಎಲ್ಲಾ BMW ಡೀಲರ್‌ಶಿಪ್‌ಗಳಲ್ಲಿ ಇಂದಿನಿಂದ ಸಂಪೂರ್ಣವಾಗಿ ಬಿಲ್ಟ್- ಅಪ್ ಯುನಿಟ್ (CBU) ಮಾದರಿಯಲ್ಲಿ ಲಭ್ಯವಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ BMW iX xDrive50 ರೂ. 1,39,50,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಮಿನರಲ್ ವೈಟ್, ಫೈಟೋನಿಕ್ ಬ್ಲೂ, ಬ್ಲ್ಯಾಕ್ ಸಫೈರ್, ಅವೆಂಚುರಿನ್ ರೆಡ್ ಮತ್ತು ಆಕ್ಸೈಡ್ ಗ್ರೇ ಎಂಬ ಅತ್ಯಾಕರ್ಷಕ ಮೆಟಾಲಿಕ್ ಪೇಂಟ್‌ವರ್ಕ್‌ಗಳಲ್ಲಿ ಲಭ್ಯವಿದೆ. ಜೊತೆಗೆ BMW ಇಂಡಿವಿಜುವಲ್ ಸ್ಟಾರ್ಮ್ ಬೇ ಮೆಟಾಲಿಕ್ ಪೇಂಟ್ ಫಿನಿಶ್‌ನಲ್ಲಿ ಐಚ್ಛಿಕವಾಗಿ ಲಭ್ಯವಿದೆ.

new-all-electric-bmw-ix-xdrive50-launched-in-india

ಹೊಸ BMW iX xDrive50 ಅನಿಯಮಿತ ಕಿ.ಮೀ.ಗಳಿಗೆ ಸ್ಟ್ಯಾಂಡರ್ಡ್ ಎರಡು ವರ್ಷಗಳ ವಾರಂಟಿ ಮತ್ತು ಐದು ವರ್ಷಗಳ ರೋಡ್ ಸೈಡ್ ಅಸಿಸ್ಟೆನ್ಸ್‌ನೊಂದಿಗೆ ಬರುತ್ತದೆ. ಬ್ಯಾಟರಿಗಳ ಮೇಲೆ ಎಂಟು ವರ್ಷ ಅಥವಾ 1,60,000 ಕಿ.ಮೀ.ಗಳವರೆಗೆ ವಾರಂಟಿಯಿದೆ. ದುರಸ್ತಿ ಸೇರಿದಂತೆ ಯಾವುದೇ ಮೈಲೇಜ್ ಮಿತಿಯಿಲ್ಲದೆ ಮೂರನೇ ವರ್ಷದ ಕಾರ್ಯಾಚರಣೆಯಿಂದ ಗರಿಷ್ಠ ಐದನೇ ವರ್ಷಕ್ಕೆ ಖಾತರಿ ಪ್ರಯೋಜನಗಳನ್ನು ವಿಸ್ತರಿಸಬಹುದು.

BMW iX xDrive50 ಡಿಸೈನ್ : ದೊಡ್ಡ BMW ಕಿಡ್ನಿ ಗ್ರಿಲ್, ಕಿರಿದಾದ BMW ಹೆಡ್‌ಲೈಟ್‌ಗಳು, ಫ್ರೇಮ್‌ಲೆಸ್ ಕಿಟಕಿಗಳು, 3-D ಬಾನೆಟ್, ಆಯತಾಕಾರದ ವೀಲ್ ಆರ್ಚ್‌ಗಳು, ಸ್ಲಿಮ್ ಒನ್-ಪೀಸ್ ಹಿಂಭಾಗದ ಲ್ಯಾಂಪ್‌ಗಳು ಸೇರಿದಂತೆ ಇತ್ತೀಚಿನ ಪೀಳಿಗೆಯ BMW ಲೇಸರ್‌ಲೈಟ್ ಒಂದು ಆಯ್ಕೆಯಾಗಿ ಲಭ್ಯವಿದೆ. ಮ್ಯಾಟ್ರಿಕ್ಸ್ ಕಾರ್ಯದೊಂದಿಗೆ ಅಡಾಪ್ಟಿವ್ LED ಹೆಡ್‌ಲೈಟ್‌ಗಳು ಮತ್ತು ಹೊಸ ಲೇಸರ್‌ಲೈಟ್ ಮಾಡ್ಯೂಲ್ ಅನ್ನು ನೀಡಲಾಗಿದೆ.

new-all-electric-bmw-ix-xdrive50-launched-in-india

ಇಂಟೀರಿಯರ್: ಕ್ಯಾಬಿನ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಸಾಕಷ್ಟು ಲೆಗ್ ರೂಮ್‌ನೊಂದಿಗೆ, BMW iX ಒಳಭಾಗವು ವಿಶ್ರಾಂತಿ ಗೃಹದಂತಹ ಸೌಕರ್ಯವನ್ನು ನೀಡುತ್ತದೆ. ಸಿಂಗಲ್-ಪೀಸ್ ವೈಡ್‌ಸ್ಕ್ರೀನ್ BMW ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ, ಷಡ್ಭುಜೀಯ (Hexagonal) ಸ್ಟೀರಿಂಗ್ ವೀಲ್, ಎಲೆಕ್ಟ್ರೋಕ್ರೊಮಿಕ್ BMW ಸ್ಕೈ ಲೌಂಜ್ ಪನೋರಮಾ ಗ್ಲಾಸ್ ರೂಫ್, ಮಸಾಜ್ ಕಾರ್ಯದೊಂದಿಗೆ ಆಸನಗಳನ್ನು ನೀಡಲಾಗಿದೆ.

ಬೆಸ್ಪೋಕ್ ಲೆದರ್ ಅಪ್ಹೋಲ್ಸ್ಟರಿ, 1,750 ಲೀಟರ್ ವರೆಗಿನ ಲಗೇಜ್ ಸಾಮರ್ಥ್ಯ, ಆಂಬಿಯೆಂಟ್ ಲೈಟಿಂಗ್, ಮಲ್ಟಿ-ವೇ ಎಲೆಕ್ಟ್ರಿಕ್ ಹೊಂದಾಣಿಕೆಯ ಆಸನಗಳು, ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಸೀಟ್ ಹೆಡಿಂಗ್ ಸೇರಿದಂತೆ ಸಕ್ರಿಯ ಸೀಟ್ ವೆಂಟಿಲೇಶನ್ ಲಭ್ಯವಿದೆ. ಸೆನ್ಸಾರ್‌ಗಳೊಂದಿಗೆ BMW ಕಿಡ್ನಿ ಗ್ರಿಲ್, ಕ್ಯಾಮೆರಾ ಮತ್ತು ರಾಡಾರ್ ತಂತ್ರಜ್ಞಾನ, ಮುಂಭಾಗ-ಹಿಂಭಾಗದಲ್ಲಿ ಲೋಗೋ ವಾಷರ್ ಜೊತೆಗೆ ಕ್ಯಾಮೆರಾ ನೀಡಲಾಗಿದೆ.

new-all-electric-bmw-ix-xdrive50-launched-in-india

ವೈವಿಷ್ಟ್ಯಗಳು: BMW ಲೈವ್ ಕಾಕ್‌ಪಿಟ್ ಪ್ರೊಫೆಷನಲ್ ನ್ಯಾವಿಗೇಷನ್‌ನೊಂದಿಗೆ ಫ್ರೀಸ್ಟ್ಯಾಂಡಿಂಗ್ BMW ಕರ್ವ್ಡ್ ಡಿಸ್ಪ್ಲೇ, ಸ್ಟೀರಿಂಗ್ ಚಕ್ರದ ಹಿಂದೆ 12.3-ಇಂಚಿನ ಡಿಜಿಟಲ್ ಇನ್ಫೋ ಡಿಸ್ಪ್ಲೇ, 14.9-ಇಂಚಿನ ಕಂಟ್ರೋಲ್ ಡಿಸ್ಪ್ಲೇ ಮತ್ತು BMW ಹೆಡ್-ಅಪ್ ಡಿಸ್ಪ್ಲೇ ಅನ್ನು ಒಳಗೊಂಡಿದೆ. BMW ಮ್ಯಾಪ್ ನ್ಯಾವಿಗೇಷನ್ ಸಿಸ್ಟಮ್‌ನ ಮ್ಯಾಪ್ ವೀಕ್ಷಣೆಗೆ ಹೊಸ ವರ್ಧಿತ ರಿಯಾಲಿಟಿ ವೀಡಿಯೊ ಫಂಕ್ಷನ್ ದಾರಿಯನ್ನು ಹೆಚ್ಚಿನ ನಿಖರತೆಯೊಂದಿಗೆ ಹುಡುಕಲು ಅನುವು ಮಾಡಿಕೊಡುತ್ತದೆ.

ಸೆಂಟರ್ ಕನ್ಸೋಲ್‌ಗೆ ಸಂಯೋಜಿತವಾಗಿರುವ ಸ್ಮಾರ್ಟ್‌ಫೋನ್ ಹೋಲ್ಡರ್ ಮೊಬೈಲ್ ಫೋನ್‌ಗಳಿಗೆ ವೈರ್‌ಲೆಸ್ ಚಾರ್ಜಿಂಗ್ ಅನ್ನು ಅನುಮತಿಸುತ್ತದೆ. ವೈರ್‌ಲೆಸ್ Apple CarPlay® / Android Auto ಹಲವಾರು ಕಾರ್ಯಗಳನ್ನು ಪ್ರವೇಶಿಸಲು ಕಾರಿನೊಂದಿಗೆ ಸ್ಮಾರ್ಟ್‌ಫೋನ್ ಸಂಪರ್ಕವನ್ನು ಪಡೆಯಬಹುದು.

ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ 18 ಸ್ಪೀಕರ್‌ಗಳು, ಎರಡನೇ ಸಾಲಿನ ಆಸನಗಳ ಹೆಡ್ ರೆಸ್ಟ್ರೆಂಟ್‌ಗಳಲ್ಲಿ 4 ಸ್ಪೀಕರ್‌ಗಳು ಸೇರಿದಂತೆ ವೈರ್‌ಲೆಸ್ ಸ್ಮಾರ್ಟ್‌ಫೋನ್ ಏಕೀಕರಣವು ಹಲವಾರು ಕಾರ್ಯಗಳು / ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒದಗಿಸುತ್ತವೆ. ನಿಯಮಿತ ರಿಮೋಟ್ ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳು ಕಾರು ಯಾವಾಗಲೂ ನವೀಕೃತವಾಗಿರುವುದನ್ನು ಖಚಿತಪಡಿಸುತ್ತದೆ.

ಟ್ರಾನ್ಸ್‌ಮಿಷನ್: ಐದನೇ ತಲೆಮಾರಿನ BMW eDrive ತಂತ್ರಜ್ಞಾನವು ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ (ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳಿಗೆ), ಸಿಂಗಲ್-ಸ್ಪೀಡ್ ಟ್ರಾನ್ಸ್‌ಮಿಷನ್ ಮತ್ತು ಪವರ್ಡ್ ಎಲೆಕ್ಟ್ರಾನಿಕ್ಸ್‌ನಿಂದ ಚಾಲಿತವಾಗಿರುವ ಹೆಚ್ಚು ಸಂಯೋಜಿತ ಡ್ರೈವ್ ಘಟಕವನ್ನು ಹೊಂದಿದೆ. ಈ ಮೂಲಕ, ಕಾರು 4.6 ಸೆಕೆಂಡುಗಳಲ್ಲಿ 100 km ವೇಗವನ್ನು ತ್ವರಿತವಾಗಿ ಪಡೆಯುತ್ತದೆ.

ಇದು 523 ಎಚ್‌ಪಿ ಪವರ್ ಮತ್ತು ಗರಿಷ್ಠ 765 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಪವರ್‌ನಿಂದಾಗಿ ಆಲ್-ವೀಲ್ ಡ್ರೈವ್ ತ್ವರಿತವಾಗಿ ಪ್ರತಿಕ್ರಿಯಿಸುತ್ತದೆ. 'ಮೈ ಮೋಡ್ಸ್' ಸ್ವಿಚ್ ಮೂಲಕ ಪರ್ಸನಲ್, ಸ್ಪೋರ್ಟ್ ಅಥವಾ ಎಫಿಷಿಯೆನ್ಸಿಗೆ ಬದಲಾಯಿಸಬಹುದು. BMW IconicSounds Electric ಆಕರ್ಷಕವಾದ ಡ್ರೈವಿಂಗ್ ಶಬ್ದಗಳು ಮತ್ತು ಪಾದಚಾರಿ ಎಚ್ಚರಿಕೆಗಳನ್ನು ನೀಡುತ್ತದೆ.

ಎರಡು ಹೈ-ವೋಲ್ಟೇಜ್ ಬ್ಯಾಟರಿಗಳು 111.5 kWh ನ ಸಂಯೋಜಿತ ಸಾಮರ್ಥ್ಯವನ್ನು ಹೊಂದಿವೆ. WLTP ಪರೀಕ್ಷಾ ಹಂತದಲ್ಲಿ 635 ಕಿ.ಮೀ.ಗಳವರೆಗಿನ ಅತ್ಯುತ್ತಮ ಶ್ರೇಣಿಯನ್ನು ಒದಗಿಸಿವೆ ಎಂದು ಕಂಪನಿ ತಿಳಿಸಿದೆ. ಹೊಸ BMW iX xDrive50 ಕಾರು ಸ್ಮಾರ್ಟ್ BMW ವಾಲ್‌ಬಾಕ್ಸ್ ಚಾರ್ಜರ್‌ನೊಂದಿಗೆ ಬರುತ್ತದೆ. ಇದು 22 kW ವರೆಗೆ ಸುರಕ್ಷಿತವಾಗಿ ಮನೆಯಲ್ಲಿಯೇ ಅನುಕೂಲಕರವಾಗಿ ಚಾರ್ಜ್‌ ಮಾಡಲು ಸಂಯೋಜಿಸಬಹುದು.

More from DriveSpark

Article Published On: Thursday, March 21, 2024, 13:45 [IST]
English summary
New all electric bmw ix xdrive50 launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+