ಖಾಸಗಿ ವಿಮಾನದಂತಿದೆ ಈ ಆಸ್ಟನ್ ಮಾರ್ಟಿನ್ ವಾಂಟೇಜ್ ಕಾರು.. ಪ್ರಮುಖಾಂಶಗಳಿವು
ಆಸ್ಟನ್ ಮಾರ್ಟಿನ್ (Aston Martin), ಬ್ರಿಟಿಷ್ ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯಾಗಿ ಜನಮನ್ನಣೆ ಗಳಿಸಿದೆ. ಭಾರತದ ವಾಹನ ಮಾರುಕಟ್ಟೆಯಲ್ಲಿಯೂ ದುಬಾರಿ ಬೆಲೆಯ ವಿವಿಧ ಐಷಾರಾಮಿ ಕಾರುಗಳನ್ನು ಮಾರಾಟಗೊಳಿಸುತ್ತಿದ್ದು, ಸೆಲೆಬ್ರಿಟಿಗಳು, ಉದ್ಯಮಿಗಳು ಹಾಗೂ ಕ್ರೀಡಾ ತಾರೆಯಾರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಶುಕ್ರವಾರ 2024ರ ಹೊಸ ವಾಂಟೇಜ್ (Vantage) ಸ್ಪೋರ್ಟ್ ಕಾರನ್ನು ಪರಿಚಯಿಸಿದೆ. ಈ ಕಾರು ಆಕರ್ಷಕ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದೆ. ಇಲ್ಲಿ.. ಬೆಲೆ ಸೇರಿದಂತೆ ಈ ಕಾರಿನ 5 ಪ್ರಮುಖಾಂಶಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ಬೆಲೆ (Price): ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರುವ ನೂತನ ಆಸ್ಟನ್ ಮಾರ್ಟಿನ್ ವಾಂಟೇಜ್ (Aston Martin Vantage) ಸ್ಪೋರ್ಟ್ ಕಾರು, ದುಬಾರಿ ಬೆಲೆಯನ್ನು ಹೊಂದಿದೆ. ಇದು ರೂ.3.99 ಕೋಟಿ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ ಈ ಕಾರಿನ ವಿತರಣೆ 2024ರ ನಾಲ್ಕನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಶುರುವಾಗಲಿದೆ.

ವಿನ್ಯಾಸ (Design): ಈ ಕಾರು ಹೊರಭಾಗದಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) ದೊಡ್ಡದಾದ ಗ್ರಿಲ್‌ನ್ನು ಹೊಂದಿದೆ. ಹೊಸದಾದ ಹೆಡ್‌ಲೈಟ್‌ಗಳು, ನವೀನ ಶೈಲಿಯ 3-ಪೀಸ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ಹಿಂಭಾಗವು (ರೇರ್) ವಿನ್ಯಾಸವು ಉತ್ತಮವಾಗಿದ್ದು, ಆಕರ್ಷಕ ಬಂಪರ್ ಮತ್ತು ಡಿಫ್ಯೂಸರ್‌ನ್ನು ಪಡೆದಿದೆ.
ಕಾರ್ಯಕ್ಷಮತೆ (Performance): ಹೊಚ್ಚ ಹೊಸ ಆಸ್ಟನ್ ಮಾರ್ಟಿನ್ ವಾಂಟೇಜ್ ಕಾರು ಶಕ್ತಿಯುತ ಪವರ್‌ಟ್ರೇನ್ ಹೊಂದಿದೆ. 4.0 ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 665 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಮತ್ತು 800 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

ಆಸ್ಟನ್ ಮಾರ್ಟಿನ್ ವಾಂಟೇಜ್ ಸ್ಪೋರ್ಟ್ ಕಾರು, ಹಿಂದಿನ ಮಾದರಿಗೆ (ಮಾಡೆಲ್) ಹೋಲಿಸಿದರೆ, ಹೆಚ್ಚುವರಿಯಾಗಿ 155 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 115 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 3.4 ಸೆಕೆಂಡುಗಳಲ್ಲಿ 0 - 100 ಕೆಎಂಪಿಹೆಚ್ ವೇಗವನ್ನು (ಸ್ಪೀಡ್) ಪಡೆಯಲಿದ್ದು, 325 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಈ ಕಾರಿನಲ್ಲಿ ಇಬ್ಬರು ಮಾತ್ರ ಸಂಚರಿಸಬಹುದು.
ವೈಶಿಷ್ಟ್ಯಗಳು (Features): ಈ ಕಾರು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪೇ, 10.25-ಇಂಚಿನ ಡಿಜಿಟಲ್ ಡ್ರೈವರ್‌ಗಳ ಡಿಸ್ಪ್ಲೇ, 1170ಡಬ್ಲ್ಯೂ 15-ಸ್ಪೀಕರ್ ಬೋವರ್ & ವಿಲ್ಕಿನ್ಸ್ ಸೌಂಡ್ ಸಿಸ್ಟಮ್, ಕನೆಕ್ಟೆಡ್ ಕಾರ್ ಟೆಕ್, 3ಡಿ ಲೈವ್ ಮ್ಯಾಪಿಂಗ್, ಡುಯಲ್ ಝೋನ್ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features): ಆಸ್ಟನ್ ಮಾರ್ಟಿನ್ ವಾಂಟೇಜ್ ಸ್ಪೋರ್ಟ್ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಆಟೋಮೆಟಿಕ್ ಪಾರ್ಕಿಂಗ್ ಅಂಶಗಳನ್ನು ಪಡೆದಿರುವ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯವನ್ನು ಪಡೆದಿದೆ. ಈ ಕಾರಿಗೆ ಪೋರ್ಷೆ 911 ಟರ್ಬೊ ಎಸ್ ಹಾಗೂ ಫೆರಾರಿ ರೋಮಾಗಳು ಪ್ರಬಲವಾದ ಪ್ರತಿಸ್ಪರ್ಧಿಗಳಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








