ಬಿಎಂಡಬ್ಲ್ಯು M5 ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ: ಈ ಬೆಂಕಿ ಕಾರಿನ ಬೆಲೆ ಎಷ್ಟು ಗೊತ್ತಾ?

ಜರ್ಮನಿ ಮೂಲದ ಜನಪ್ರಿಯ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ M5 ಪಫಾಮೆನ್ಸ್ ಸೆಡಾನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಬಿಎಂಡಬ್ಲ್ಯು M5 (BMW M5) ಪಫಾಮೆನ್ಸ್ ಸೆಡಾನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.99 ಕೋಟಿಯಾಗಿದೆ. ಈ ಬಿಎಂಡಬ್ಲ್ಯು ಪರ್ಫಾಮೆನ್ಸ್ ಮಾದರಿಯು ಪವರ್ ಫುಲ್ 4.4-ಲೀಟರ್ V8 ಎಂಜಿನ್‌ ಹೈಬ್ರಿಡೈಸ್ಡ್ ಆವೃತ್ತಿಯಾಗಿದ್ದು, ಇದು ಎಲೆಕ್ಟ್ರಿಕ್ ಮೋಟರ್‌ನಿಂದ ಸಹಾಯ ಮಾಡುತ್ತದೆ, ಇದು ಹೆಚ್ಚಿನ ವೋಲ್ಟೇಜ್ 18.6 kW ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ.

ಹೊಸ ಬಿಎಂಡಬ್ಲ್ಯು ಸಿಂಗಲ್ ಚಾರ್ಜ್‌ನಲ್ಲಿ 69 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಹೊಸ ಬಿಎಂಡಬ್ಲ್ಯು ಪರ್ಫಾಮೆನ್ಸ್ ಕಾರಿನಲ್ಲಿ 4.4-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 577 bhp ಮತ್ತು 750 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

BMW M5

ಇದರೊಂದಿಗೆ ಎಲೆಕ್ಟ್ರಿಕ್ ಮೋಟಾರ್ 194 bhp ಮತ್ತು 280 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಇವುಗಳ ಸಂಯೋಜಿತವಾಗಿ 717 bhp ಮತ್ತು 1,000 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬಿಎಂಡಬ್ಲ್ಯು M5 ಕಾರು 3.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು 0-200 ಕಿ.ಮೀ ವೇಗವನ್ನು ಪಡೆದುಕೊಳ್ಳಲು 10.9 ಸೆಕೆಂಡುಗಳ ಸಮಯ ತೆಗೆದುಕೊಳ್ಳುತ್ತದೆ.

ಹೊಸ ಬಿಎಂಡಬ್ಲ್ಯು M5 ಪಫಾಮೆನ್ಸ್ ಕಾರಿನ ಟಾಪ್ ಸ್ಪೀಡ್ 250 ಕಿ.ಮೀಗೆ ಸೀಮಿತವಾಗಿದೆ. ಇನ್ನು ಈ ಬಿಎಂಡಬ್ಲ್ಯು ಗ್ರಾಹಕರು ಎಂ ಡ್ರೈವರ್‌ನ ಪ್ಯಾಕೇಜ್ ಅನ್ನು ಆರಿಸಿದರೆ ಇದನ್ನು 305 ಕಿ.ಮೀಗೆ ಟಾಪ್ ಸ್ಪೀಡ್ ಅನ್ನು ಹೆಚ್ಚಿಸಬಹುದು. ಹೊಸ ಬಿಎಂಡಬ್ಲ್ಯು M5 ಪಫಾಮೆನ್ಸ್ ಕಾರಿನ ಎಲೆಕ್ಟ್ರಿಕ್ ಕಂಟ್ಫೋಲ್ ಡ್ಯಾಂಪರ್‌ಗಳೊಂದಿಗೆ ಸಂಸ್ಥೆಯ ಅಡಾಪ್ಟಿವ್ M ಸಸ್ಪೆನ್ಷನ್ ಸೆಟಪ್‌ನೊಂದಿಗೆ ಬರುತ್ತದೆ.

BMW M5

ಹೊಸ ಬಿಎಂಡಬ್ಲ್ಯು 5 ಸೀರಿಸ್ ಅಲ್ಟ್ರಾ-ಅಗ್ರೇಸಿವ್ ಆವೃತ್ತಿಯಂತೆ ಕಾಣುತ್ತದೆ ಮತ್ತು ಅದರ ಅಡಾಪ್ಟಿವ್ LED ಹೆಡ್‌ಲೈಟ್‌ಗಳೊಂದಿಗೆ ದೊಡ್ಡ ಕಿಡ್ನಿ ಗ್ರಿಲ್ ಅನ್ನು ಬ್ಲ್ಯಾಕ್ ಹೈ ಗ್ಲಾಸ್ ಫಿನಿಶಿಂಗ್ ಅನ್ನು ಹೊಂದಿದ್ದು, ಈ ಕಾರು M5 ಬ್ಯಾಡ್ಜ್ ಅನ್ನು ಹೊಂದಿದೆ. ಈ ಹೊಸ M5 ದೊಡ್ಡ ಏರ್ ಡ್ಯಾಮ್ ನೊಂದಿಗೆ ಅಗ್ರೇಸಿವ್ ಮುಂಭಾಗದ ಬಂಪರ್ ಅನ್ನು ಹೊಂದಿದೆ.

ಜೊತೆಗೆ ಪಫ್ಡ್-ಅಪ್ ವೀಲ್ ಆರ್ಚ್‌ಗಳು, ಇಂಗಾಲದ ಹೊರಭಾಗದ ಪ್ಯಾಕೇಜ್‌ನ ಭಾಗವಾಗಿರುವ ಕಾರ್ಬನ್ ರೂಫ್ ಮತ್ತು ಸೂಪರ್ ಸೆಡಾನ್‌ಗೆ ಕಾರ್ಬನ್ ಬಾಹ್ಯ ಮಿರರ್ ಕ್ಯಾಪ್‌ಗಳು ಮತ್ತು ಹಿಂಭಾಗದ ಸ್ಪಾಯ್ಲರ್ ಅನ್ನು ಸೇರಿಸುತ್ತದೆ. ಎರಡು-ವಿಭಾಗದ ಡಿಫ್ಯೂಸರ್, ಟ್ವಿನ್ ಎಕ್ಸಾಸ್ಟ್ ಪೈಪ್‌ಗಳು ಮತ್ತು ಹಗುರವಾದ ಅಲಾಯ್ ವ್ಹಿಳ್ ಗಳನ್ನು ಹೊಂದಿದೆ.

BMW M5

ಇನ್ನು ಮುಂಭಾಗದಲ್ಲಿ 20 ಇಂಚುಗಳು (285/40 ZR20) ಮತ್ತು ಹಿಂಭಾಗದಲ್ಲಿ 21 ಇಂಚುಗಳು (295/35 ZR21). M5 ಸ್ಪೋರ್ಟ್ಸ್ ದೊಡ್ಡ ಸ್ಟೀಲ್ ಡಿಸ್ಕ್ ಬ್ರೇಕ್‌ಗಳನ್ನು ಆಯ್ಕೆಯ M ​​ಕಾರ್ಬನ್ ಸೆರಾಮಿಕ್ ಬ್ರೇಕ್‌ಗಳಿಗೆ ಅಪ್‌ಗ್ರೇಡ್ ಮಾಡಬಹುದು. ಈ ಹೊಸ ಬಿಎಂಡಬ್ಲ್ಯು ಹೈಬ್ರಿಡ್ ಸೂಪರ್ ಸೆಡಾನ್‌ನ ಒಳಭಾಗವನ್ನು ಫುಲ್ ಮೆರಿನೊ ಲೆದರ್‌ನಲ್ಲಿ ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, November 22, 2024, 13:34 [IST]
English summary
New bmw m5 launched in india price details
Read more on bmw india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+