ರೂ.7.99 ಲಕ್ಷಕ್ಕೆ ಎಸ್‍ಯುವಿ ಕೂಪೆ: ಭರ್ಜರಿ ಮೈಲೇಜ್, ಲಕ್ಷುರಿ ಫೀಚರ್ಸ್‌ನ ಸಿಟ್ರನ್ ಬಸಾಲ್ಟ್ ವೀಡಿಯೋ ರಿವ್ಯೂ

ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಫ್ರೆಂಚ್ ಮೂಲದ ಸಿಟ್ರನ್ (Citroen) ತನ್ನ ಸಿಟ್ರನ್ ಬಸಾಲ್ಟ್ (Citroen Basalt) ಎಸ್‌ಯುವಿ ಕೂಪೆ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಹೊಸ ಬಸಾಲ್ಟ್ ಭಾರತೀಯ ಮಾರುಕಟ್ಟೆಗೆ ಕಂಪನಿಯ ಪೋರ್ಟ್‌ಫೋಲಿಯೊದಿಂದ 5ನೇ ಕಾರ್ ಆಗಿದೆ. ಹೊಸ ಸಿಟ್ರನ್ ಬಸಾಲ್ಟ್ (Citroen Basalt) ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ವಿಶೇಷವೆಂದರೆ ಟಾಟಾ ಮೋಟಾರ್ಸ್ ತನ್ನ ಕರ್ವ್ (ಪೆಟ್ರೋಲ್-ಡೀಸೆಲ್) ಎಸ್‍ಯುವಿ ಕೂಪೆ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೇ ವೇಳೆ ಸಿಟ್ರನ್ ಎದುರಾಳಿಯಾಗಿ ತನ್ನ ಹೊಸ ಕೂಪೆ ಎಸ್‌ಯುವಿಯನ್ನು ತಂದಿದೆ.

ಭಾರತದಲ್ಲಿ ಎಸ್‌ಯುವಿ ಕೂಪೆಗಳು ಅವು ಐಷಾರಾಮಿ ತಯಾರಕರಿಂದ ಬಂದಿರುವುದರಿಂದ ಸಾಕಷ್ಟು ದುಬಾರಿಯಾಗಿದೆ. ಆದರೆ ಬಸಾಲ್ಟ್ ಕರ್ವ್ ಕೈಗೆಟುಕುವ ಎಸ್‍ಯುವಿ ಕೂಪೆಯಾಗಿದೆ. ಇತ್ತೀಚೆಗೆ ನಾವು ಗೋವಾದಲ್ಲಿ ಹೊಸ ಸಿಟ್ರನ್ ಬಸಾಲ್ಟ್ ಎಸ್‍ಯುವಿ ಕೂಪ್ ಮಾದರಿಯನ್ನು ಡ್ರೈವ್ ಮಾಡಿದ್ದೇವೆ. ಇದರ ಅನುಭವ ಮತ್ತು ಈ ಕಾರಿನ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ.

ಹೊಸ ಸಿಟ್ರನ್ ಬಸಾಲ್ಟ್ ಮಾದರಿಯಲ್ಲಿ 2 ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಒಂದು 1.2 ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಆಗಿದ್ದು, ಇದು 82 bhp ಮತ್ತು 115 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು , 1.2 ಟರ್ಬೊ ಪೆಟ್ರೋಲ್ 3-ಸಿಲಿಂಡರ್ ಎಂಜಿನ್ 109 bhp ಪವರ್ ಅನ್ನು ಉತ್ಪಾದಿಸುತ್ತದೆ. ಇದು ಮ್ಯಾನುವಲ್ 190Nm ಮತ್ತು ಆಟೋಮ್ಯಾಟಿಕ್ 205Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸುರಕ್ಷತೆಯ ದೃಷ್ಟಿಯಿಂದ, ಹೊಸ ಸಿಟ್ರನ್ ಬಸಾಲ್ಟ್ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, ABS, EBD, ISOFIX ಮತ್ತು ಇನ್ನೂ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಈ ಕಾರಿನ ಮೈಲೇಜ್ ಬಗ್ಗೆ ಹೇಳುವುದಾದರೆ, ಇದು 18 ರಿಂದ 19.5 ಕಿ.ಮೀ.ವರೆಗೆ ಮೈಲೇಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Citroen Basalt

ಬಸಾಲ್ಟ್ ಒಳಭಾಗದಲ್ಲಿ, ಟ್ರಿಪಲ್-ಟೋನ್ ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ. ವೈರ್‌ಲೆಸ್ Apple CarPlay ಮತ್ತು Android Auto ಕನೆಕ್ಟಿವಿಟಿ ಹೊಂದಿರುವ 10.25 ಟಚ್‌ಸ್ಕ್ರೀನ್ ಅನ್ನು ಹೊಂದಿದೆ ಮತ್ತು 15W ವೈರ್‌ಲೆಸ್ ಚಾರ್ಜರ್ ಅನ್ನು ಸಹ ಪಡೆಯುತ್ತದೆ. ಈ ಕಾರಿನ 7-ಇಂಚಿನ TFT ಡಿಸ್ ಪ್ಲೇಯನ್ನು ಪಡೆಯುತ್ತದೆ. ಈ ಡಿಸ್‌ಪ್ಲೇಯು 3 ವಿಭಿನ್ನ ಥೀಮ್‌ಗಳನ್ನು ಹೊಂದಿದೆ ಮತ್ತು ಚಾಲಕನ ಅಗತ್ಯಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದು.

ಎರಡೂ ಬದಿಗಳಲ್ಲಿ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ ಗಳೊಂದಿಗೆ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ. ಈ ಕಾರಿನ ಮುಂಭಾಗ ಮತ್ತು ಹಿಂಭಾಗದ ಎರಡೂ ಸೀಟುಗಳು ಅತ್ಯಂತ ಆರಾಮದಾಯಕವಾಗಿದೆ. ಹೊಸ ವಿಷಯವೆಂದರೆ ಹಿಂಬದಿಯ ಸೀಟಿನಲ್ಲಿ 3 ಹಂತದ ಹೊಂದಾಣಿಕೆಗಳನ್ನು ಹೊಂದಿರುವುದರಿಂದ ಉತ್ತಮ ಥೈ ಸಂಪೂರ್ಟ್ ಇದೆ. ಇದರಿಂದ ದೀರ್ಘಕಾಲ ಪ್ರಯಾಣಿಸಲು ಕಷ್ಟವಾಗುವುದಿಲ್ಲ. ಈ ಸಿಟ್ರನ್ ಬಸಾಲ್ಟ್ ಕಾರಿನ ಹಿಂಭಾಗದಲ್ಲಿ AC ವೆಂಟ್‌ಗಳು ಮತ್ತು 2 ಚಾರ್ಜಿಂಗ್ ಸಾಕೆಟ್‌ಗಳಿವೆ.

More from DriveSpark

Article Published On: Friday, August 9, 2024, 12:49 [IST]
English summary
New citroen basalt suv coupe video review
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+