'ಟಾಟಾ ಕರ್ವ್' ಅನಾವರಣ ಬೆನ್ನಲ್ಲೇ ಪ್ರತಿಸ್ಪರ್ಧಿ 'ಸಿಟ್ರನ್ ಬಸಾಲ್ಟ್' ಅಬ್ಬರ: ರೂ.10 ಲಕ್ಷ ನಿರೀಕ್ಷಿತ ಬೆಲೆ!
ಸಿಟ್ರನ್ ಬಸಾಲ್ಟ್ ಅನ್ನು ಆಗಸ್ಟ್ ತಿಂಗಳಿಲ್ಲಿ ಅನಾವರಣಗೊಳಿಸಲು ಸಜ್ಜುಗೊಳಿಸಲಾಗುತ್ತಿದೆ. ಅದಕ್ಕೂ ಮುನ್ನ ಟಾಟಾ ಕರ್ವ್ ಅನಾವರಣಗೊಂಡಿದ್ದು, ಎಲ್ಲೆಡೆ ಭಾರೀ ಪ್ರತಿಕ್ರಿಯೆ ಪಡೆದಿದೆ. ಇದಕ್ಕೆ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಸಿಟ್ರನ್ ಬಸಾಲ್ಟ್ ಕೂಡ ಸಾಮರ್ಥ್ಯವನ್ನು ತೋರಿಸಲು ಟೀಸರ್‌ನೊಂದಿಗೆ ಬಂದಿದೆ. ಇತ್ತೀಚಿನ ಟೀಸರ್ ಅದರ ಒಳಾಂಗಣದ ಬಗ್ಗೆ ಒಂದು ನೋಟವನ್ನು ನೀಡುತ್ತದೆ. ಪ್ರೀಮಿಯಂ ಇಂಟೀರಿಯರ್ ಬಗ್ಗೆ ಗ್ರಾಹಕರ ಆಸಕ್ತಿಯನ್ನು ಹೆಚ್ಚಿಸರುವ ಸಿಟ್ರನ್ ಬಸಾಲ್ಟ್, ಟಾಟಾ ಕರ್ವ್‌ಗೆ ಸರಿಯಾದ ಪ್ರತಿಸ್ಪರ್ಧಿ ಎನಿಸಿಕೊಂಡಿದೆ. ಸಿಟ್ರನ್‌ನಿಂದ ಈ ಮುಂಬರುವ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.
ಟೀಸರ್‌ನಲ್ಲಿ, ಕ್ಯಾಬಿನ್ ಸೀಟುಗಳು ಮತ್ತು ಹೊಸ ಡ್ಯಾಶ್‌ಬೋರ್ಡ್‌ನ ಒಂದು ನೋಟವನ್ನು ನೀಡಲಾಗಿದೆ. ಇದು ಬೀಜ್ ಬಣ್ಣದ ಕ್ಯಾಬಿನ್ ಥೀಮ್ ಮತ್ತು ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್ ಅನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಸೀಟುಗಳು ಹೊಂದಾಣಿಕೆ ಮಾಡಬಹುದಾದ ಹೆಡ್ ರೆಸ್ಟ್‌ಗಳನ್ನು ಪಡೆದಿವೆ. ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಯುನಿಟ್, ಹಿಂಭಾಗದ ಮಧ್ಯಭಾಗವು ಕಪ್ ಹೋಲ್ಡರ್‌ಗಳನ್ನು ಒಳಗೊಂಡಿರುವುದನ್ನು ಟೀಸರ್ ಬಹಿರಂಗಪಡಿಸಿದೆ.

ನಿರೀಕ್ಷಿತ ವೈಶಿಷ್ಟ್ಯಗಳು: ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರನ್, ಹೊಸ ಎಸ್‌ಯುವಿ ಕೂಪೆಯ ಒಳಾಂಗಣದ ಬಗ್ಗೆ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದಿದ್ದರೂ, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯಂತಹ ತನ್ನ ಇತರ ಎಸ್‌ಯುವಿಗಳಾದ ಸಿ 3 ಏರ್‌ಕ್ರಾಸ್ ನಿಂದ ಕೆಲವು ವೈಶಿಷ್ಟ್ಯಗಳನ್ನು ಎರವಲು ಪಡೆಯುವ ನಿರೀಕ್ಷೆಯಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು: ಬಸಾಲ್ಟ್ ಆಗಸ್ಟ್‌ನಲ್ಲಿ ಅನಾವರಣಗೊಂಡ ನಂತರ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬೆಲೆಗಳು 10 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ)ಪ್ರಾರಂಭವಾಗುವ ಸಾಧ್ಯತೆಯಿದೆ. ಫೋಕ್ಸ್ ವ್ಯಾಗನ್ ಟೈಗನ್, ಟೊಯೊಟಾ ಹೈರೈಡರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಹೋಂಡಾ ಎಲಿವೇಟ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪರ್ಯಾಯ ಆಯ್ಕೆಯಾಗಲಿದ್ದು, ಟಾಟಾ ಕರ್ವ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

ಸುರಕ್ಷತೆ: ಸುರಕ್ಷತೆಗೆ ಸಂಬಂಧಿಸಿದಂತೆ, ಇದು 6 ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ), ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಅನ್ನು ಪಡೆಯುವ ನಿರೀಕ್ಷೆಯಿದೆ. ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ, ವೈರ್ ಲೆಸ್ ಫೋನ್ ಚಾರ್ಜರ್, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಸಹ ಇದು ಒಳಗೊಂಡಿರುವ ಸಾಧ್ಯತೆಯಿದೆ.
ನಿರೀಕ್ಷಿತ ಪವರ್ ಟ್ರೇನ್: ಸಿಟ್ರನ್ ಸಿ3 ಏರ್ ಕ್ರಾಸ್ ಮತ್ತು ಸಿ3 ಹ್ಯಾಚ್ ಬ್ಯಾಕ್‌ನಲ್ಲಿ ಕಂಡುಬರುವ ಅದೇ ಪೆಟ್ರೋಲ್ ಎಂಜಿನ್ ಬಸಾಲ್ಟ್‌ಗೆ ನೀಡುವ ಸಾಧ್ಯತೆಯಿದೆ, ಅಂದರೆ 1.2-ಲೀಟರ್ ಪೆಟ್ರೋಲ್ ಎಂಜಿನ್ 110 ಪಿಎಸ್ ಪವರ್ ಮತ್ತು 205 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಯುನಿಟ್‌ನೊಂದಿಗೆ ನೀಡಬಹುದು.
ಇತ್ತ ಪ್ರತಿಸ್ಪರ್ಧಿ ಟಾಟಾ ಕರ್ವ್ ಸಂಪೂರ್ಣ ಅನಾವರಣಗೊಂಡಿದ್ದು, ಇಂಟೀರಿಯರ್ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಬಿಟ್ಟಿಲ್ಲ. ಸದ್ಯ ಭಾರತದಲ್ಲಿ ಎಸ್‌ಯುವಿ ಕೂಪೆ ವಿಭಾಗಕ್ಕೆ ಮೊದಲ ಬಾರಿಗೆ ಎಂಟ್ರಿ ಕೊಡುತ್ತಿರುವ ಕಾರುಗಳಾಗಿ ಇವೆರಡು ಜನಪ್ರಿಯತೆ ಪಡೆಯಲಿವೆ. ಮುಂಬರುವ ದಿನಗಳಲ್ಲಿ ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








