ಟಾಟಾ ಕರ್ವ್ ಪ್ರತಿಸ್ಪರ್ಧಿ ಸಿಟ್ರನ್ ಬಸಾಲ್ಟ್ ಅನಾವರಣ: ರಣರಂಗದಲ್ಲಿ ಹೋರಾಟಕ್ಕೆ ಎದುರಾಳಿಗಳು ಸಜ್ಜು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸಿಟ್ರನ್ ತನ್ನ ಸಿಟ್ರನ್ ಬಸಾಲ್ಟ್ ಎಂಬ ಮೊದಲ ಕೂಪೆ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ವಿಶೇಷವೆಂದರೆ ಟಾಟಾ ಮೋಟಾರ್ಸ್ ಕಂಪನಿಯು ಕರ್ವ್ ಎಸ್‍ಯುವಿ ಕೂಪ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೇ ವೇಳೆ ಸಿಟ್ರನ್ ಎದುರಾಳಿಯಾಗಿ ತನ್ನ ಹೊಸ ಕೂಪೆ ಎಸ್‌ಯುವಿಯನ್ನು ತರುತ್ತಿದೆ. ಈ ಎರಡೂ ಮಾದರಿಗಳು ಭಾರತೀಯ ಮಾರುಕಟ್ಟೆಗಳಲ್ಲಿ ಪರಸ್ಪರ ಸ್ಪರ್ಧಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಕೂಪ್‌ಗಳಿವೆ ಆದರೆ ಅವು ಐಷಾರಾಮಿ ತಯಾರಕರಿಂದ ಬಂದಿರುವುದರಿಂದ ಸಾಕಷ್ಟು ದುಬಾರಿಯಾಗಿದೆ. ಬಸಾಲ್ಟ್ ಮತ್ತು ಕರ್ವ್ ಮಾದರಿಗಳು ಭಾರತದಲ್ಲಿ ಅತ್ಯಂತ ಕೈಗೆಟುಕುವ ಎಸ್‍ಯುವಿ ಕೂಪ್‌ಗಳಾಗಿವೆ.

ಸಿಟ್ರನ್ ಬಸಾಲ್ಟ್ (Citroen Basalt) ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿ ಹರಿಯುವ ಲೈನ್ ನೊಂದಿಗೆ ಸ್ಟ್ರೈಕಿಂಗ್ ಕೂಪೆ ಸಿಲೂಯೆಟ್ ಅನ್ನು ಹೊಂದಿದೆ. ಈ ಸಿಟ್ರನ್ ಬಸಾಲ್ಟ್ ಎಸ್‍ಯುವಿಯು ಬಲವಾದ ಫೆಂಡರ್‌ಗಳು ಕಾರಿನ ನಿಲುವನ್ನು ಸುಧಾರಿಸುತ್ತದೆ ಮತ್ತು ಚಕ್ರಗಳ ಸುತ್ತ ಬಲವನ್ನು ಒದಗಿಸುತ್ತದೆ. ಹೊಸ ರೀತಿಯ ಸಿಲೂಯೆಟ್ ಹೊಂದಿರುವ ಬಸಾಲ್ಟ್ ಮಾದರಿಯು ಭಾರತದಲ್ಲಿ C3 ಮತ್ತು C3 ಏರ್‌ಕ್ರಾಸ್‌ಗಳಿಗೆ ಪೂರಕವಾಗಿದೆ.

Citroen Basalt

ಕ್ಲಾಮ್‌ಶೆಲ್ ಬಾನೆಟ್ ಮುಂಭಾಗಕ್ಕೆ ಮಸ್ಕಲರ್ ಸ್ಪರ್ಶವನ್ನು ಸೇರಿಸುತ್ತದೆ. ಕ್ರೋಮ್ ಗಳೊಂದಿಗೆ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಈ ಹೊಸ ಮಾದರಿಯ ಏರ್ ಇನ್‌ಟೇಕ್ ಗ್ರಿಲ್‌ಗಳನ್ನು 3D-ಎಫೆಕ್ಟ್ ಮಾಡ್ಯೂಲ್‌ಗಳನ್ನು ಹೊಂದಿದೆ. ಈ ಎಸ್‍ಯುವಿ ಟೈಲ್‌ಗೇಟ್ ವಿನ್ಯಾಸವು ಗ್ರಹಿಸಿದ ಅಗಲವನ್ನು ಹೆಚ್ಚಿಸುತ್ತದೆ. ಟೈಲ್ ಲ್ಯಾಂಪ್‌ಗೆ ಸಂಯೋಜಿಸಲಾದ ಫ್ಲೋಟಿಂಗ್ ಬ್ಲೇಡ್‌ಗಳು ಆಕರ್ಷಕವಾಗಿದೆ.

ಇನ್ನು ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳ ಕೆಳಭಾಗದಲ್ಲಿರುವ ಸಿಲ್ವರ್ ಸ್ಕಿಡ್ ಪ್ಲೇಟ್‌ಗಳು ತಾಂತ್ರಿಕ ಸಿಗ್ನೇಚರ್ ಅನ್ನು ಒಳಗೊಂಡಿರುತ್ತವೆ. ಸಿಟ್ರನ್ ಬಸಾಲ್ಟ್ ಎಸ್‍ಯುವಿ ಕೂಪೆ ಮಾದರಿಯು X-ಆಕಾರದ ಸ್ಪ್ಲಿಟ್ DRL ಗಳನ್ನು ಹೊಂದಿರುವ ಮುಂಭಾಗದ ಹೆಡ್‌ಲೈಟ್‌ಗಳು ಬ್ರ್ಯಾಂಡ್ ಸಿಗ್ನೆಚರ್ ಸ್ಟೈಲ್ ನಲ್ಲಿದೆ. ಈ ನವೀನ ಹೆಡ್‌ಲೈಟ್‌ಗಳು ಎಲ್‌ಇಡಿ-ವಿಷನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿವೆ, ಪ್ರತ್ಯೇಕವಾಗಿ ಇದನ್ನು ಕೆಳ ಭಾಗಗಳಲ್ಲಿ ಸಂಯೋಜಿಸಲಾಗಿದೆ.

Citroen Basalt

ಸಿಟ್ರನ್ ಬಸಾಲ್ಟ್ ಮಾದರಿಯ ಹಿಂದಿನ ಹೆಡ್‌ಲೈಟ್‌ಗಳು ಸಿಗ್ನೇಚರ್ ಸ್ಟೈಲ್ ಗಿಂತ ಭಿನ್ನವಾಗಿ ಹೊಸದಾಗಿ ಕಾಣುತ್ತದೆ. ಇನ್ನು ಗ್ರೇಡಿಯಂಟ್ ಲೈನ್ ಗಳೊಂದಿಗೆ ಈ ಎಸ್‍ಯುವಿ ಕೂಪೆ ಮಾದರಿಯು ಆಕರ್ಷಕವಾಗಿ ಕಾಣಿಸುತ್ತಿದೆ. ಇನ್ನು ಬಸಾಲ್ಟ್ ಮಾದರಿಯ ಫೀಚರ್ಸ್ ಗಳ ಬಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಈ ಮಾದರಿಯಲ್ಲಿ ರೋಮಾಂಚಕ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿರಬಹುದು.

ಇದರೊಂದಿಗೆ ಒಳಭಾಗದಲ್ಲಿ ಕಪ್ ಹೋಲ್ಡರ್‌ಗಳೊಂದಿಗೆ ಸಂಪೂರ್ಣ ಮುಂಭಾಗ ಮತ್ತು ಹಿಂಭಾಗದ ಆರ್ಮ್‌ರೆಸ್ಟ್‌ಗಳು ಮತ್ತು ಹಿಂಭಾಗದ ಆರ್ಮ್‌ರೆಸ್ಟ್‌ನಲ್ಲಿರುವ ಫೋನ್ ಹೋಲ್ಡರ್ ಅನ್ನು ಒಳಗೊಂಡಿರುತ್ತದೆ. ಹೆಡ್‌ರೆಸ್ಟ್‌ಗಳು ಲ್ಯಾಟರಲ್ ಬೆಂಬಲವನ್ನು ನೀಡುತ್ತವೆ ಮತ್ತು ವಾಹನವು ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯಗಳು, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಮತ್ತು ಕ್ಲೈಮೆಂ ಕಂಟ್ರೋಲ್ ಅನ್ನು ಹೊಂದಿರುತ್ತದೆ.

Citroen Basalt

ಸಿಟ್ರನ್ ಬಸಾಲ್ಟ್ ಎಸ್‍ಯುವಿ ಕೂಪೆ ಮಾದರಿಯು 1.2-ಲೀಟರ್ ಮೂರು-ಸಿಲಿಂಡರ್, ಟರ್ಬೊ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರಬಹುದು. ಈ ಎಂಜಿನ್ 109 bhp ಮತ್ತು 205 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮತ್ತು ಟಾರ್ಕ್ ಕರ್ನವಾಟರ್ ನೊಂದಿಗೆ ಜೋಡಿಸಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, July 25, 2024, 16:00 [IST]
English summary
New citroen basalt unveiled in india design details
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+