ರಸ್ತೆಯಲ್ಲಿ ರಾಕೆಟ್ ವೇಗದಲ್ಲಿ ಮಿಂಚಲು ಸಜ್ಜು: ಶಕ್ತಿಶಾಲಿ ಬಿಎಂಡಬ್ಲ್ಯು M5 ವಿಶೇಷತೆಗಳೇನು?
ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 2025ರ ಬಿಎಂಡಬ್ಕ್ಯು M5 ಸೆಡಾನ್ ಅನ್ನು ಅನಾವರಣಗೊಳಿಸಲಾಗಿದೆ. ಈ ಹೊಸ ಬಿಎಂಡಬ್ಕ್ಯು M5 ಎಲೆಕ್ಟ್ರಿಫೈಡ್ ಪವರ್‌ಟ್ರೇನ್ ಅನ್ನು ಒಳಗೊಂಡಿದೆ, ಆದರೆ ಕೆಲವು ಅಂಕಿಅಂಶಗಳು, ನಿರ್ದಿಷ್ಟವಾಗಿ ಅದರ ತೂಕ - ಅನೇಕರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಈಗ ಅದರ ಏಳನೇ ತಲೆಮಾರಿನ ಬಿಎಂಡಬ್ಲ್ಯು M5 (BMW M5) ಪೂರ್ಣ ಪ್ರಮಾಣದ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (PHEV), ಅದರ V8-ಮಾತ್ರ ಆಗಿದೆ. ಇದು ಪ್ರತಿಯೊಂದು ಆಯಾಮದಲ್ಲೂ ದೊಡ್ಡದಾಗಿದೆ, ಹೊರಹೋಗುವ ಬಿಎಂಡಬ್ಲ್ಯು M5 ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ
ವಿನ್ಯಾಸ: ಈ ಹೊಸ ಬಿಎಂಡಬ್ಲ್ಯು M5 ಕಾರು ವಿನ್ಯಾಸ ಮತ್ತು ಸ್ಟೈಲಿಂಗ್ ದೃಷ್ಟಿಕೋನದಿಂದ, ಹೊಸ M5 ಪ್ರಸ್ತುತ ಜನರೇಷನ್ 5 ಸೀರಿಸ್ ನಂತೆ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು M5 ಹೈಬ್ರಿಡ್ ಕಾರು ದೊಡ್ಡ ಕಿಡ್ನಿ ಗ್ರಿಲ್ ಅನ್ನು ಭಾಗಶಃ ಮುಚ್ಚಲಾಗಿದೆ ಮತ್ತು ಬ್ಲ್ಯಾಕ್ ಫಿನಿಶ್ ಅನ್ನು ಹೊಂದಿದೆ. ಇನ್ನು ಈ ಕಾರಿನ ಮುಂಭಾಗದ ಬಂಪರ್ ಅನ್ನು ವಿಸ್ತರಿಸಿದ ಏರ್ ಇನ್ ಟೆಕ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ.

ಬಿಎಂಡಬ್ಲ್ಯು M5 ಮುಂಭಾಗ ಮತ್ತು ಹಿಂಭಾಗದ ಟ್ರ್ಯಾಕ್ ಅನ್ನು ವಿಸ್ತರಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು M5 ಕಾರು ಪ್ರೊಫೈಲ್‌ನಲ್ಲಿ, ಚಾರ್ಜಿಂಗ್ ಪೋರ್ಟ್‌ನ ಫ್ಲಾಪ್ ಎಡಭಾಗದಲ್ಲಿ ಕಂಡುಬರುತ್ತದೆ ಮತ್ತು ಹೊಸ M5 ಕಾರು ಗಾತ್ರವು ಸ್ಪಷ್ಟವಾಗಿದೆ. ಇದು ಐದು ಮೀಟರ್‌ಗಿಂತಲೂ ಹೆಚ್ಚು ಉದ್ದವನ್ನು ಹೊಂದಿದೆ. ಈ ಕಾರು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಕೇವಲ 115 ಮಿಮೀ ಎಂದು ರೇಟ್ ಮಾಡಲಾಗಿದೆ.
ಈ ಹೊಸ ಬಿಎಂಡಬ್ಲ್ಯು M5 ಹೈಬ್ರಿಡ್ ಕಾರು 20-ಇಂಚಿನ ಮುಂಭಾಗ ಮತ್ತು 21-ಇಂಚಿನ ಹಿಂದಿನ ವ್ಹೀಲ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಸವಾರಿ ಮಾಡುತ್ತದೆ ಮತ್ತು ಹಿಂಭಾಗದಲ್ಲಿ, ಇದು ಬೂಟ್ ಲಿಡ್‌ನಲ್ಲಿ ಸೂಕ್ಷ್ಮವಾದ ಲಿಪ್ ಸ್ಪಾಯ್ಲರ್ ಅನ್ನು ಹೊಂದಿದೆ ಮತ್ತು ಸ್ಪೋರ್ಟ್ಸ್ ಎಕ್ಸಾಸ್ಟ್ ಸಿಸ್ಟಮ್‌ಗಾಗಿ ಡಿಫ್ಯೂಸರ್ ಮತ್ತು ಕ್ವಾಡ್ ಟೈಲ್‌ಪೈಪ್‌ಗಳನ್ನು ಹೊಂದಿರುವ ಮರುಹೊಂದಿಸಲಾದ ಹಿಂಭಾಗದ ಬಂಪರ್ ಅನ್ನು ಹೊಂದಿದೆ.

ಎಂಜಿನ್: ಬಿಎಂಡಬ್ಲ್ಯು M5 ಕಾರು ಮಾದರಿಯು BMW XM ಗಿಂತ ಹೆಚ್ಚು ಭಿನ್ನವಾಗಿರದ ಪವರ್‌ಟ್ರೇನ್ ಇದೆ. ಹುಡ್ ಅಡಿಯಲ್ಲಿ 4.4-ಲೀಟರ್, ಟ್ವಿನ್-ಟರ್ಬೊ ಪೆಟ್ರೋಲ್ V8 ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 7,200 rpm ನಲ್ಲಿ 577 bhp ಪವರ್ ಮತ್ತು 750 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ, ಇದು 194 bhp ಮತ್ತು 280 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಪರ್ಫಾಮೆನ್ಸ್: ಇನ್ನು ಒಟ್ಟಾಗಿ, 717 bhp ಮತ್ತು 1,000 Nm ಟಾರ್ಕ್ ಅನ್ನು ಉತ್ಪಾದಿಸುತ್ತಾರೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ M ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಪವರ್ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಹೋಗುತ್ತದೆ. ಈ ಹೊಸ ಬಿಎಂಡಬ್ಲ್ಯು M5 ಹೈಬ್ರಿಡ್ ಕಾರು 3.5 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ಬಿಎಂಡಬ್ಲ್ಯು M5 ಕಾರು ಈ ವರ್ಷದ ಅಂತ್ಯದ ವೇಳೆಗೆ ಜಾಗತಿಕ ಮಾರಾಟ ವಾಗಲಿದ್ದು, ಇದಕ್ಕೂ ಮೊದಲು ಜುಲೈನಲ್ಲಿ ಉತ್ಪಾದನೆಯನ್ನು ಪ್ರವೇಶಿಸುತ್ತದೆ. ಇನ್ನು ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ವರದಿಗಳ ಪ್ರಕಾರ, ಈ ಬಿಎಂಡಬ್ಲ್ಯು M5 ಕಾರು ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








