ಶೀಘ್ರದಲ್ಲೇ ಎಂಟ್ರಿ: ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ ಸಂಪೂರ್ಣ ಮಾಹಿತಿ... ಪಕ್ಕಾ ಗೇಮ್ ಚೇಂಜರ್!
ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್(Maruti Swift) ಸ್ಪೋರ್ಟಿ, ಹೆಚ್ಚು ಕ್ರಿಯಾತ್ಮಕ ನೋಟವನ್ನು ಹೊಂದಿರಲಿದೆ. ಉದ್ದಳತೆಗಳು, ಬಾಹ್ಯಾ ವಿನ್ಯಾಸ ಸ್ವಲ್ಪಮಟ್ಟಿಗೆ ಬದಲಾಗುತ್ತದೆಯಾದರೂ, ಒಟ್ಟಾರೆ ಡಿಸೈನ್ ಪ್ರಸ್ತುತವಿರುವ ಸ್ವಿಫ್ಟ್‌ನಂತೆಯೇ ಇರುತ್ತದೆ. ಪ್ರಮುಖ ಹೈಲೆಟ್ ಎಂದರೆ ಈ ಬಾರಿ ಹೊಸ ಎಂಜಿನ್‌ನೊಂದಿಗೆ ಸ್ವಿಫ್ಟ್ ಎಂಟ್ರಿ ಕೊಡಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ತಿಳಿಯೋಣ.
ಡಿಸೈನ್: ಮುಂಬರುವ ಹೊಸ ಜೆನ್ ಮಾರುತಿ ಸ್ವಿಫ್ಟ್ ಹೊಸದಾಗಿ ವಿನ್ಯಾಸಗೊಳಿಸಿದ ಮುಂಭಾಗ ಮತ್ತು ಹಿಂಭಾಗದ ತುದಿಗಳು, ಹೊಸ ಪ್ರೊಜೆಕ್ಟರ್ ವ್ಯವಸ್ಥೆ ಮತ್ತು ಹೊಸ ಬಂಪರ್ ವಿನ್ಯಾಸದಿಂದಾಗಿ ಹೆಚ್ಚು ಸ್ಪೋರ್ಟಿಯರ್ ಆಗಿ ಕಾಣಲಿದೆ. ಈಗಿರುವ ಸ್ವಿಫ್ಟ್‌ನಂತಲ್ಲದೆ ಹೊಸ ಅಲಾಯ್ ವಿನ್ಯಾಸ ಮತ್ತು ಹಿಂಭಾಗದಲ್ಲಿ ಅದೇ ಡೋರ್ ಹ್ಯಾಂಡಲ್‌ಗಳನ್ನು ಹೊಂದಿರುತ್ತದೆ.

ನವೀಕರಿಸಿದ ಬಂಪರ್‌ಗಳು ಮತ್ತು ಹಿಂಭಾಗದಲ್ಲಿ ಹೊಸ ಟೈಲ್‌ಲ್ಯಾಂಪ್ ಇರುತ್ತದೆ. ಹೊಸ ಫ್ಲೋಟಿಂಗ್ ಟಚ್‌ಸ್ಕ್ರೀನ್ ಮತ್ತು ಸೊಗಸಾದ ಲೆಥೆರೆಟ್ ಇಂಟೀರಿಯರ್ ನಿರೀಕ್ಷಿತ ಆಂತರಿಕ ಬದಲಾವಣೆಗಳಲ್ಲಿ ಸೇರಿವೆ. ವರ್ಧಿತ ಸುರಕ್ಷತೆಗಾಗಿ ಸ್ವಿಫ್ಟ್ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಮ್ ಮತ್ತು ಸಂಪರ್ಕಿತ ಕಾರ್ ತಂತ್ರಜ್ಞಾನಗಳ ಒಂದು ಶ್ರೇಣಿಯನ್ನು ಸಹ ಹೊಂದಿರಲಿದೆ.
ಹೊಸ ಎಂಜಿನ್ ವಿಶೇಷತೆಗಳು: ಮುಂಬರುವ ಸ್ವಿಫ್ಟ್‌ಗಾಗಿ, ಮಾರುತಿ ಸುಜುಕಿ ಹೊಸ 1.2 - ಲೀಟರ್ Z - ಸಿರೀಸ್ ಪೆಟ್ರೋಲ್ ಎಂಜಿನ್ ಅನ್ನು ಪರಿಚಯಿಸುತ್ತಿದೆ. ಇದು 88.5 ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಪರ್ಫಾಮೆನ್ಸ್ ಮತ್ತು ಮೈಲೇಜ್‌ಗಾಗಿ, ಮಾರುತಿ ತನ್ನ ಮುಂಬರುವ ಸ್ವಿಫ್ಟ್‌ನಲ್ಲಿ ಹೊಸ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಪ್ರಾರಂಭಿಸಲಿದೆ.

ಈ ಹೊಸ ಹೈಬ್ರಿಡ್ ಎಂಜಿನ್ ಮುಂಬರುವ ಸ್ವಿಫ್ಟ್‌ಗೆ ಅತ್ಯುತ್ತಮ 24 ಕಿ.ಮೀ ಮೈಲೇಜ್ ನೀಡುವುದರಿಂದ ಮಾರುತಿ ಸುಜುಕಿಗೆ ಗೇಮ್ ಚೇಂಜರ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ಮುಂಬರುವ ಮಾರುತಿ ಸ್ವಿಫ್ಟ್ ಕಾರು ಆಟೋಮ್ಯಾಟಿಕ್ ಮತ್ತು 5 - ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಎರಡರಲ್ಲೂ ಲಭ್ಯವಿರುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು: ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್‌ಗೆ ಟಾಟಾ ಟಿಯಾಗೊ, ಮಾರುತಿ ಬಲೆನೊ, ಟಾಟಾ ಆಲ್ಟ್ರೊಜ್, ಹ್ಯುಂಡೈ ಐ20 ಮತ್ತು ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್‌ಗಳಿಗೆ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ. ಹೊಸ ಮಾರುತಿ ಸ್ವಿಫ್ಟ್ (New Maruti Swift) ವೇರಿಯೆಂಟ್‌ಗಳ ಬಗ್ಗೆ ಇನ್ನೂ ಬಹಿರಂಗಗೊಂಡಿಲ್ಲವಾದರೂ, ಇದು ರೂ. 6.5 ಲಕ್ಷದಿಂದ ರೂ. 10 ಲಕ್ಷಗಳವರೆಗೆ (ಎಕ್ಸ್ - ಶೋರೂಮ್) ಬೆಲೆ ಇರಲಿದೆ.

ಬಿಡುಗಡೆ ಯಾವಾಗ?: ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಮಾರುತಿ ಸುಜುಕಿ ಸ್ವಿಫ್ಟ್ ಮಾತ್ರವಲ್ಲದೇ ಹೊಸ ತಲೆಮಾರಿನ ಸ್ವಿಫ್ಟ್ ಡಿಜೈರ್ (Swift Dzire) ಅನ್ನು ಕೂಡ ಬಿಡುಗಡೆ ಮಾಡಲಿದೆ. ಆದ್ರೆ ಇವೆರಡರಲ್ಲಿ ಮೊದಲು ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ ಬಿಡುಗಡೆಯಾಗಲಿದೆ. ನಮಗಿರುವ ಮಾಹಿತಿ ಪ್ರಕಾರ ಮಾರ್ಚ್ 2024 ರಲ್ಲಿ ಹೊಸ ಸ್ವಿಫ್ಟ್ ಮಾರಾಟವಾಗುವ ನಿರೀಕ್ಷೆಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications