ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್
ಭಾರತದಲ್ಲಿ ಅದೇಷ್ಟೇ ಅತ್ಯಾಧುನಿಕ ಕಾರುಗಳು ಬಂದರೂ ಮಾರುತಿ ಸ್ವಿಫ್ಟ್ ಕಾರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಈ ಬಹುಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಯಾಗಿತ್ತು. ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಇಂದಿನ ಸ್ವಿಫ್ಟ್ 2018ರಲ್ಲಿ ಎಂಟ್ರಿಯಾದ ಮಾದರಿಯಾಗಿದೆ.
ಇದೀಗ ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಸ್ವಿಫ್ಟ್‌ನ ನ್ಯೂ ಜನರೇಷನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಅಧಿಕೃತ ಬಿಡುಗಡೆ ಮುಂದಿನ ತಿಂಗಳು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ಸುಜುಕಿ ಸ್ವಿಫ್ಟ್ (Suzuki Swift) ಕಾರನ್ನು ಜಪಾನ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಪರೀಕ್ಷಿಸಲಾಗಿದ್ದು, ಹೊಸ ಸ್ವಿಫ್ಟ್ 4-ಸ್ಟಾರ್ ರೇಟಿಂಗ್ ಗಳಿಸಿದೆ. ಕ್ರ್ಯಾಶ್ ಟೆಸ್ಟ್ ಕ್ರೂಸ್ ಕಂಟ್ರೋಲ್ ಯೂಟ್ಯೂಬ್ ಚಾನೆಲ್ ಹಂಚಿಕೊಂಡಿದೆ.

ಕ್ರ್ಯಾಶ್ ಟೆಸ್ಟ್ ಮೌಲ್ಯಮಾಪನದಲ್ಲಿ, ಸ್ವಿಫ್ಟ್ 55 ಕಿ.ಮೀ ವೇಗದಲ್ಲಿ ಮುಂಭಾಗದ ಪರೀಕ್ಷೆಗೆ ಒಳಗಾಯಿತು. ನಂತರ ಅದರ ಆಕ್ಟಿವ್ ಸುರಕ್ಷತಾ ತಂತ್ರಜ್ಞಾನಗಳ ಮೌಲ್ಯಮಾಪನಗಳನ್ನು ಮಾಡಲಾಯಿತು. ಇವುಗಳಲ್ಲಿ ಆಕ್ಟಿವ್ ಎರ್ಮಜನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್ ಫೀಚರ್ಸ್ ನಂತಹ ಸ್ವಿಫ್ಟ್‌ನ ಆಕ್ಟಿವ್ ಸುರಕ್ಷತಾ ಫೀಚರ್ಸ್ ಗಳನ್ನು ಪರೀಕ್ಷಿಸಲಾಯಿತು.
ಈ ಟೆಸ್ಟ್ ಗಳನ್ನು ಗಂಟೆಗೆ 50-60 ಕಿಮೀ ವೇಗದಲ್ಲಿ ನಡೆಸಲಾಯಿತು. ADAS ಫೀಚರ್ಸ್ ಗಳನ್ನು ಪರೀಕ್ಷಿಸಿದ ನಂತರ, ಕಾರನ್ನು ಕ್ರಮವಾಗಿ 55 ಮತ್ತು 64 ಕಿ.ಮೀ ವೇಗದಲ್ಲಿ ಮುಂಭಾಗವನ್ನು ಟೆಸೃ ಮಾಡಿದ್ದಾರೆ. ಹೊಸ ಸ್ವಿಫ್ಟ್‌ನಲ್ಲಿ ಸೈಡ್ ಇಂಪ್ಯಾಕ್ಟ್ ಟೆಸ್ಟ್ ಅನ್ನು ನಡೆಸಲಾಯಿತು. ವಾಹನವು ಸಂಪೂರ್ಣ ಸುತ್ತು-ಮುಂಭಾಗ, ಆಫ್-ಸೆಟ್ ಮುಂಭಾಗದ ಘರ್ಷಣೆ ಮತ್ತು ಪ್ರಯಾಣಿಕರ ಸೀಟ್ ಬೆಲ್ಟ್ ರಿಮೈಂಡರ್ ಟೆಸ್ಟ್ ನಲ್ಲಿ 4 ಸ್ಟಾರ್ ಗಳಿಸಿದೆ.

ಇನ್ನು ಸೈಡ್ ಡಿಕ್ಕಿ, ಕುತ್ತಿಗೆ ಗಾಯದ ರಕ್ಷಣೆ ಮತ್ತು ಪಾದಚಾರಿ ಲೆಗ್ ರಕ್ಷಣೆ ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಗಳಿಸಿತು. ಒಟ್ಟಾರೆಯಾಗಿ, ಸ್ವಿಫ್ಟ್ 197 ಅಂಕಗಳಲ್ಲಿ 117.80 ಅಂಕಗಳೊಂದಿಗೆ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಜಪಾನ್ ನಲ್ಲಿ ನಡೆದ ಕ್ರ್ಯಾಶ್ ಟೆಸ್ಟ್ ಆಗಿದ್ದು, ಭಾರತದಲ್ಲಿಯೂ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸ್ವಿಫೃ ಇದೇ ರೀತಿಯ ಸುರಕ್ಷತಾ ಸಾಮರ್ಥ್ಯವನ್ನು ತೊರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಹೀಗರಲಿದೆ ಭಾರತದ ಸ್ವಿಫ್ಟ್: ಭಾರತದಲ್ಲಿ ಮುಂಬರುವ ಮಾದರಿಯು ಈ ಕೆಲವು ADAS ವೈಶಿಷ್ಟ್ಯಗಳನ್ನು ಹೊಂದಿರುವುದಿಲ್ಲವಾದರೂ, ವಾಹನದ ಕಾರ್ಯಕ್ಷಮತೆಯು ಅದರ ಪಿಲ್ಲರ್‌ಗಳ ಕಂಡೀಷನ್ ಮತ್ತು ಏರ್‌ಬ್ಯಾಗ್‌ಗಳ ಸಮಯೋಚಿತ ನಿಯೋಜನೆಗಾಗಿ ಗಮನಾರ್ಹವಾಗಿದೆ. ಈ ಹೊಸ ಸ್ವಿಫ್ಟ್ ಭಾರತಕ್ಕೆ ಬಂದಾಗ, ಇದು ಅದರ ಅಂತರಾಷ್ಟ್ರೀಯ ಪ್ರತಿರೂಪದಂತೆಯೇ ಅದೇ ಬಾಹ್ಯ ವಿನ್ಯಾಸವನ್ನು ಹೊಂದಿರುತ್ತದೆ.

ಆದರೆ ಕೆಲವು ಅತ್ಯಾಧುನಿಕ ADAS ನಂತಹ ಫೀಚರ್ ಅನ್ನು ಕಳೆದುಕೊಳ್ಳುತ್ತದೆ. ಇನ್ನು ಹೊಸ ಸ್ವಿಫ್ಟ್ ಕಾರಿನ ಒಳಗೆ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ. ಒಟ್ಟಿನಲ್ಲಿ ಹೊಸ ಸ್ವಿಫ್ಟ್ ಕಾರು ಹಿಂದಿನ ಮಾದರಿಗಿಂತ ಹೆಚ್ಚು ಸುರಕ್ಷಿತವಾಗಿರುವುದರಲ್ಲಿ ಅನುಮಾನವಿಲ್ಲ. ಜೊತೆಗೆ ಹಳೇಯ ಸ್ವಿಫ್ಟ್ ಮಾದರಿಗಿಂತ ಹೊಸ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಸ್ವಿಫ್ಟ್ ಬರೊಬ್ಬರಿ 30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡಲಿದೆ.
ಪ್ರಮುಖವಾಗಿ ಇದರ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಸ್ವಿಫ್ಟ್ ಕಾರಿನಲ್ಲಿ 1.2-ಲೀಟರ್, 3-ಸಿಲಿಂಡರ್, ನ್ಯಾಚುರಲ್ ಎಂಜಿನ್ ಅನ್ನು ಹೊಂದಿದೆ. ಇದು ಸುಧಾರಿತ ಕಾರ್ಯಕ್ಷಮತೆ ಮತ್ತು ಮೈಲೇಜ್ ಹೆಚ್ಚಿಸುವ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರಲಿದೆ. ಈ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications