ಹೊಸ ಹೈಬ್ರಿಡ್ ಬಲೆನೊ ಕಾರಿನಲ್ಲಿ ಏನೆಲ್ಲಾ ಇರಲಿದೆ ಗೊತ್ತಾ?: ಬೆಲೆ ಕೇಳಿದರೆ ಆಶ್ಚರ್ಯ ಖಂಡಿತಾ!
ಮಾರುತಿ ಸುಜುಕಿ ಕಂಪನಿಯ ಕಾರುಗಳಲ್ಲಿ ಬಹಳ ಪ್ರಸಿದ್ದವಾದ ಕಾರು ಮಾದರಿಗಳಲ್ಲಿ ಮಾರುತಿ ಸುಜುಕಿ ಬಲೆನೊ ಸಹ ಒಂದು. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿರುವ ಬಲೇನೋ, ಬಲ್ಕೀ ಮತ್ತು ಅಗ್ರೆಸಿವ್ ಲುಕ್ ಜೊತೆಗೆ ಸಾಕಷ್ಟು ಪ್ರೀಮಿಯಂ ಫೀಚರ್‌ಗಳನ್ನು ಸಹ ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ.
ಮಾರಾಟದ ಪಟ್ಟಿಯಲ್ಲಿ ನೊಡಿದರೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳ ಸೆಗ್ಮೆಂಟ್‌ನಲ್ಲಿ ಮಾರುತಿ ಸುಜುಕಿ ಬಲೆನೊ ಹೆಸರು ಯಾವಾಗಲೂ ಇರುತ್ತದೆ. 2015 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರು ಲಾಂಚ್ ಆದಾಗಿನಿಂದ ಮಾರಾಟದಲ್ಲಿ ತನ್ನ ಪಾರುಪತ್ಯವನ್ನು ಸಾಧಿಸುತ್ತಲೇ ಬಂದಿದೆ. 2019 ರಲ್ಲಿ ಈ ಕಾರಿಗೆ ಮೊದಲ ಫೇಸ್‌ಲಿಫ್ಟ್ ದೊರಕಿತ್ತು, ಮಾತ್ರವಲ್ಲದೇ ಈ ಕಾರನ್ನು ಟೊಯೊಟಾದ ಗ್ಲಾಂಝಾ ಜೊತೆ ಹಂಚಿಕೊಳ್ಳಲಾಗಿತ್ತು.

ಇದೀಗ ಮಾಹಿತಿಗಳ ಪ್ರಕಾರ ಸದ್ಯದಲ್ಲೇ ಬಲೆನೊಗೆ ಮತ್ತೊಂದು ದೊಡ್ಡ ಅಪ್‌ಡೇಟ್ ಸಿಗುವ ಮಾತುಗಳು ಕೇಳಿ ಬರುತ್ತಿವೆ. ಹೊಸ ಬಲೆನೊದಲ್ಲಿ (New Generation Baleno) ಸಂಪೂರ್ಣ ರೀ ಡಿಸೈನ್ ಆಗಿರುವ ಇಂಟೀರಿಯರ್ ಸಿಗಲಿದೆ ಎಂದು ತಿಳಿದು ಬಂದಿದೆ. ಹೊಸ ಡ್ಯಾಶ್‌ಬೋರ್ಡ್, ಹೊಸ ಈಟಿಂಗ್ ಮತ್ತು ಅಪ್‌ಹೋಲ್ಸ್ಟ್ರೀ ಹಾಗೂ ಜೊತೆಗೆ ಮಲ್ಟಿ ಫಂಕ್ಷನ್ ಸ್ಟಿಯರಿಂಗ್ ವ್ಹೀಲ್‌ಗಳು ಸಿಗಲಿವೆ.
ಇನ್ನು ಈ ಕಾರಿನಲ್ಲಿ ಸಿಗಲಿವೆ ಎನ್ನಲಾದ ಬಹುದೊಡ್ಡ ಅಪ್‌ಡೇಟ್ ಎಂದರೆ ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್ ಎಂದು ಹೇಳಲಾಗುತ್ತಿದೆ. ಹೌದು, ಸನ್‌ರೂಫ್ ಹೊಸ ಬಲೇನೋದಲ್ಲಿ ಬರಲಿರುವ ಬಹುದೊಡ್ಡ ಅಪ್‌ಡೇಟ್ ಆಗಿರಲಿದ್ದು, ಇದರಿಂದ ಈ ಕಾರಿನ ಮಾರಾಟ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗುತ್ತಿದೆ.

ಹೊಸ ಬಲೆನೊ ಎಂಜಿನ್‌ನಲ್ಲೂ ಬಹುದೊಡ್ಡ ಅಪ್‌ಡೇಟ್ ಸಿಗಲಿದ್ದು, ಮುಂದಿನ ಬಲೆನೊ ಎಂಜಿನ್‌ನಲ್ಲಿ ಹೈಬ್ರಿಡ್ ಟೆಕ್ನಾಲಜಿ ಇರಲಿದ್ದು, ಇದು ಕಾರಿನ ಮೈಲೇಜ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರ ಜೊತೆಗೆ ಈ ಕಾರಿನ ಹಿಂಭಾಗದಲ್ಲೂ ಎಸಿ ವೆಂಡ್ಸ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಿಗಲಿದೆ ಎಂಬುವುದು ಕಾರಿಗಾಗಿ ಕಾಯುತ್ತಿರುವವರ ಮನಸ್ಸಿಗೆ ಮುದ ನೀಡುವ ವಿಷಯವಾಗಿದೆ.
ಇನ್ನು ಹೊಸ ಬಲೆನೊ ಕಾರಿನ ಬೆಲೆಯಲ್ಲೂ ಕೊಂಚ ಏರಿಕೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ ಸುಮಾರು 6.66 ಲಕ್ಷದಿಂದ 9.88 ಲಕ್ಷದವರೆಗೆ ಇದ್ದು, ಹೊಸ ಬಲೇನೋ ಈ ಬೆಲೆಗಿಂತ ಸುಮಾರು 50 ರಿಂದ 60 ಸಾವಿರಗಳಷ್ಟು ಹೆಚ್ಚು ಬೆಲೆ ಬಾಳಲಿದೆ ಎಂಬುದು ಕಾರು ಪಂಡಿತರ ಲೆಕ್ಕಾಚಾರ.

ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರು 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್/ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಇಂಧನ ದಕ್ಷತೆ ಕುರಿತು ಹೇಳುವುದಾದರೆ, ಪೆಟ್ರೋಲ್ ರೂಪಾಂತರಗಳು 22.35 ಕೆಎಂಪಿಎಲ್ - 22.94 ಕೆಎಂಪಿಎಲ್, ಸಿಎನ್‌ಜಿ ರೂಪಾಂತರ 30.61 ಕೆಎಂ/ಕೆಜಿ ಮೈಲೇಜ್ ಕೊಡುತ್ತದೆ.
ಮಾರುತಿ ಸುಜುಕಿ ಬಲೆನೊ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 4-ಸ್ಪೀಕರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications