ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ಹೊಸ ರೂಪದಲ್ಲಿ ಬರುತ್ತಿದೆ ರೆನಾಲ್ಟ್‌ನ ಬ್ರಹ್ಮಾಸ್ತ್ರ ಡಸ್ಟರ್

ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‌ಯುವಿಯ ವಿಶ್ವ ಪ್ರೀಮಿಯರ್ ಇತ್ತೀಚೆಗೆ ಪೋರ್ಚುಗಲ್‌ನಲ್ಲಿ ಅನಾವರಣಗೊಳಿಸಿತು. ಮುಂಬರುವ ಮಾದರಿಯು ಮುಂದಿನ ವರ್ಷದ ಆರಂಭದಲ್ಲಿ ಯುರೋಪಿಯನ್ ಮಾರುಕಟ್ಟೆಗೆ ಬರಲಿದೆ. ಇದರ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಡಸ್ಟರ್ ಭಾರೀ ಜನಪ್ರಿಯತೆ ಗಳಿಸಿದ ಎಸ್‍ಯುವಿಗಳಲ್ಲಿ ಒಂದಾಗಿದೆ.

ಈ ಡಸ್ಟರ್ (Duster) ಯುರೋಪ್ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ರೆನಾಲ್ಟ್ ಗ್ರೂಪ್‌ನ (ರೆನಾಲ್ಟ್ + ಡೇಸಿಯಾ) ಅತ್ಯಂತ ಯಶಸ್ವಿ ಮಾದರಿಯಾಗಿದೆ. ಡೇಸಿಯಾ (Dacia) ಅಥವಾ ಡಸ್ಟರ್ ಮಾದರಿಯು 2010 ರಿಂದ 2.2 ಮಿಲಿಯನ್ ಯುನಿಟ್‌ಗಳನ್ನು ಉತ್ಪಾದಿಸಿದೆ. 2024ರ ರೆನಾಲ್ಟ್ ಡಸ್ಟರ್ (Renault Duster) ಹೊಸ ಸ್ಟೈಲಿಂಗ್ ಮತ್ತು ಎಲ್ಲಾ ಹೊಸ ಮೆಕ್ಯಾನಿಕ್ಸ್ ಜೊತೆಗೆ ಹೆಚ್ಚು ನವೀಕರಣಗಳೊಂದಿಗೆ ಒಳಾಂಗಣದೊಂದಿಗೆ ಬರುತ್ತದೆ.

Renault Duster

ನ್ಯೂ ಜನರೇಷನ್ ಡೇಸಿಯಾ ಡಸ್ಟರ್ ಅನ್ನು ರೆನಾಲ್ಟ್-ನಿಸ್ಸಾನ್ ಅಲೈಯನ್ಸ್‌ನ CMF-B ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಲಾಗಿದೆ. ಇದು ಸ್ಯಾಂಡೆರೊ ಮತ್ತು ಜೋಗರ್‌ಗೆ ಆಧಾರವಾಗಿದೆ. ಹೊಸ ಎಸ್‍ಯುವಿಯ ಪ್ರೊಫೈಲ್‌ನಲ್ಲಿ, ಹೊಸ ಡಸ್ಟರ್ ಕೆಲವು ಆಧುನಿಕ ಸ್ಟೈಲಿಂಗ್ ಅಂಶಗಳೊಂದಿಗೆ ಪರಿಚಿತವಾಗಿದೆ. ಈ ಹೊಸ ಜನರೇಷನ್ ಮಾದರಿಯು ಹಿಂದಿನ ಮಾದರಿಗಿಂತ ಸ್ವಲ್ಪ ಉದ್ದವಾಗಿದೆ. ಇದು ಗಮನಾರ್ಹವಾಗಿ ದೊಡ್ಡದಾಗಿ ಮತ್ತು ಸ್ಪೋರ್ಟಿಯರ್ ಆಗಿ ಕಾಣುತ್ತದೆ.

ಈ ಹೊಸ ಡಸ್ಟರ್ ಎಸ್‍ಯುವಿಯ ಚಿತ್ರಗಳು ಬಹಿರಂಗವಾಗಿವೆ. ಈ ಚಿತ್ರಗಳಲ್ಲಿ ಡಸ್ಟರ್ ಎಸ್‍ಯುವಿ ದೊಡ್ಡ ವ್ಹೀಲ್ ಗಳು ಮತ್ತು ಸ್ಲಿಮ್ ಹೆಡ್‌ಲ್ಯಾಂಪ್‌ಗಳೊಂದಿಗೆ ಡಬಲ್-ಸ್ಟಾಕ್ ಗ್ರಿಲ್ ಅನ್ನು ಬಹಿರಂಗಪಡಿಸುತ್ತವೆ. ಸಿಲೂಯೆಟ್ ಪರಿಚಿತವಾಗಿದೆ ಮತ್ತು ಐಕಾನಿಕ್ ಡಸ್ಟರ್ ಆಕಾರವನ್ನು ಉಳಿಸಿಕೊಂಡಿದೆ, ಈ ಎಸ್‍ಯುವಿ ಹಿಂಭಾಗದಲ್ಲಿ ತ್ರಿಕೋನ ಟೈಲ್ ಲ್ಯಾಂಪ್‌ಗಳು ಮತ್ತು ದಪ್ಪನಾದ ಬೂಟ್ ಡೋರ್ ಅನ್ನು ಪಡೆಯುತ್ತದೆ.

Renault Duster

ಈ ಹೊಸ ಡಸ್ಟರ್ ಎಸ್‍ಯುವಿಯ ಒಳಬಾಗದಲ್ಲಿ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು, ಮೂರು-ಸ್ಪೋಕ್ ಸ್ಟೀರಿಂಗ್ ವೀಲ್, ಬೂದು ಮತ್ತು ಕಪ್ಪು ಕ್ಯಾಬಿನ್ ಮತ್ತು ಸ್ಟ್ಯಾಕ್ ಮಾಡಿದ ಸೆಂಟರ್ ಕನ್ಸೋಲ್‌ನಂತಹ ಕೆಲವು ತಿಂಗಳ ಹಿಂದೆ ನಾವು ನೋಡಿದ ಕ್ಯಾಬಿನ್‌ನಂತೆಯೇ ಇದೆ. ಈ ಎಸ್‍ಯುವಿ ಪಿಲ್ಲರ್‌ಗಳು ಬ್ಲ್ಯಾಕ್ ಬಣ್ಣದಲ್ಲಿದೆ ಮತ್ತು ಹಿಂಭಾಗದ ಡೋರುಗಳ ಹ್ಯಾಂಡಲ್ ಗಳನ್ನು ಸಿ-ಪಿಲ್ಲರ್‌ನಲ್ಲಿ ಮರೆಮಾಡಲಾಗಿದೆ.

ಈ ಎಸ್‍ಯುವಿ ದೊಡ್ಡ ಸ್ಕ್ವೇರ್ಡ್ ಆಫ್ ವೀಲ್ ಆರ್ಚ್‌ಗಳು, ಪ್ರಮುಖ ರೂಫ್ ರೈಲ್‌ಗಳು ಮತ್ತು ರೂಫ್ ಇಂಟಿಗ್ರೇಟೆಡ್ ಸ್ಪಾಯ್ಲರ್‌ಗಳನ್ನು ಹೊಂದಿದೆ. ಹೊಸ ಡಸ್ಟರ್ ಎಸ್‍ಯುವಿಯು 4,343mm ಉದ್ದ ಮತ್ತು 1656mm ಎತ್ತರ ಮತ್ತು 2657mm ವ್ಹೀಲ್‌ಬೇಸ್ ಹೊಂದಿದೆ. 2ನೇ ತಲೆಮಾರಿನ ಮಾದರಿಗೆ ಹೋಲಿಸಿದರೆ, ಹೊಸ ಎಸ್‍ಯುವಿ 2mm ಉದ್ದವಾಗಿದೆ. ಆದರೆ ಸುಮಾರು 16 ಮಿಮೀ ಕಡಿಮೆಯಾದ ವೀಲ್‌ಬೇಸ್ ಅನ್ನು ಹೊಂದಿದೆ. ಬೂಟ್ ಸ್ಪೇಸ್ ಅನ್ನು 27-ಲೀಟರ್ ಹೆಚ್ಚಿಸಲಾಗಿದೆ.

Renault Duster

ಹೊಸ ಡಸ್ಟರ್ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮತ್ತು ಸೆಂಟ್ರಲ್ ಕನ್ಸೋಲ್ ಅನ್ನು ಒಳಗೊಂಡಿರುವ ಎಲ್ಲಾ-ಹೊಸ ಒಳಾಂಗಣದೊಂದಿಗೆ ಬರುತ್ತದೆ. ಇದು ಡಿಜಿಟಲ್ ಉಪಕರಣ ಕನ್ಸೋಲ್ ಅನ್ನು ಒಳಗೊಂಡಿದೆ. ಇದರ ಮೂಲ ಮಾದರಿಯು ಸೆಮಿ-ಡಿಜಿಟಲ್ ಡ್ರೈವರ್‌ಗಳ ಡಿಸ್ ಪ್ಲೇಯನ್ನು ನೀಡುವುದನ್ನು ಮುಂದುವರಿಸುತ್ತದೆ. ಇದು ಕನೆಕ್ಟಿವಿಟಿ ಆಯ್ಕೆಗಳೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಅನ್ನು ಹೊಂದಿದೆ.

ಹೊಸ ಡಸ್ಟರ್‌ನ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ತಂತ್ರಜ್ಞಾನದಲ್ಲಿ ಅತ್ಯಾಧುನಿಕ ವೈಶಿಷ್ಟ್ಯವಿದೆ. ಈ ಎಸ್‌ಯುವಿ ಮರುವಿನ್ಯಾಸಗೊಳಿಸಲಾದ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸೆಲೆಕ್ಟರ್ ಲಿವರ್ನೊಂದಿಗೆ ಬರುತ್ತದೆ. ಇದು ಕ್ರೂಸ್ ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ ಕಂಟ್ರೋಲ್ ಗಳೊಂದಿಗೆ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ. ಕಂಪನಿಯು ಕ್ಯಾಬಿನ್‌ನಾದ್ಯಂತ ಗಟ್ಟಿಯಾದ ಪ್ಲಾಸ್ಟಿಕ್ ಅನ್ನು ಬಳಸಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಇದು ಗುಣಮಟ್ಟದಲ್ಲಿ ಉತ್ತಮವಾಗಿ ಕಾಣುತ್ತದೆ.

ಹೊಸ ರೆನಾಲ್ಟ್ ಡಸ್ಟರ್ 4 ಅಥವಾ 6 ಯೂಕ್ಲಿಪ್ ಹೋಲ್ಡರ್‌ಗಳೊಂದಿಗೆ ಬರುತ್ತದೆ, ಇದು ಟ್ಯಾಬ್ಲೆಟ್ ಹೋಲ್ಡರ್, ಬ್ಯಾಗ್, ಇಂಡಕ್ಷನ್ ಚಾರ್ಜರ್ ಹೊಂದಿರುವ ಸ್ಮಾರ್ಟ್‌ಫೋನ್ ಹೋಲ್ಡರ್ ಇತ್ಯಾದಿಗಳಿಗೆ ಅವಕಾಶ ಕಲ್ಪಿಸುತ್ತದೆ. ಪನಿಯು ಹೆಚ್ಚಿನ ಮೈಲೇಜ್ ಅನ್ನು ನೀಡಲು 48V ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನಲ್ಲಿ ಕೆಲಸ ಮಾಡಿದೆ, ಇದು ಡೀಸೆಲ್‌ಗೆ ಹತ್ತಿರವಾಗಿರುತ್ತದೆ. ಡಸ್ಟರ್ ಹೈಬ್ರಿಡ್ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ 140bhp, 1.6-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, February 10, 2024, 13:27 [IST]
English summary
New generation renault duster suv images revealed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+