ಹೊಸ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಅನಾವರಣ: ಈ ಕಾರಿಗೆ ಶಬರಿಯಂತೆ ಕಾಯುತ್ತಿರುವ ಭಾರತೀಯರು!
ಹೋಂಡಾ ಸಿಟಿ ಕಾರು ಪ್ರಪಂಚಾದ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಥೈಲ್ಯಾಂಡ್‌ನಲ್ಲಿ, ಹೋಂಡಾ ಸಿಟಿ ಮಾದರಿಯು ಹ್ಯಾಚ್‌ಬ್ಯಾಕ್ ಆಗಿಯೂ ಲಭ್ಯವಿದೆ. ಇದೀಗ ಹೋಂಡಾ ಕಂಪನಿಯು ಥೈಲ್ಯಾಂಡ್‌ನಲ್ಲಿ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಅನ್ನು ನವೀಕರಿಸಲಾಗಿದೆ. ಈ ಹೊಸ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಕಾರು e:HEV ಮತ್ತು ADAS ಸೂಟ್ ಅನ್ನು ಒಳಗೊಂಡಿರುತ್ತದೆ.
2024ರ ಹೋಂಡಾ ಸಿಟಿ ಒಟ್ಟು ಐದು ರೂಪಾಂತರಗಳನ್ನು ಪರಿಚಯಿಸುತ್ತದೆ. ಈ ಹೊಸ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಬೇಸ್ ವೆರಿಯೆಂಟ್ 1.0-ಲೀಟರ್ VTEC ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 121 bhp ಮತ್ತು 173 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಪರಿಣಾಮಕಾರಿಯಾಗಿರುವುದಲ್ಲದೆ ಗ್ಯಾಸೋಹೋಲ್ ಎಂದು ಕರೆಯಲ್ಪಡುವ ಇಂಧನದ ಮಿಶ್ರಣವನ್ನು ಬೆಂಬಲಿಸುತ್ತದೆ, ಇದು ಸುಮಾರು 10% ಎಥೆನಾಲ್ ಅನ್ನು ಒಳಗೊಂಡಿರುತ್ತದೆ.

2024ರ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ( Honda City Hatchback) ಕಾರನ್ನು e:HEV SV ರೂಪಾಂತರ ನವೀನ ಇಂಟೆಲಿಜೆಂಟ್ ಮಲ್ಟಿ-ಮೋಡ್ ಡ್ರೈವ್ (i-MMD) ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದ್ದು, ಇದು 97 bhp ಪವರ್ ಉತ್ಪಾದಿಸಿದರೆ, 1.5-ಲೀಟರ್ ಅಟ್ಕಿನ್ಸನ್-ಸೈಕಲ್ ಪೆಟ್ರೋಲ್ ಎಂಜಿನ್ ಅನ್ನು 108bhp ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಸಂಯೋಜಿಸುತ್ತದೆ.
ಫೇಸ್‌ಲಿಫ್ಟೆಡ್ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ತನ್ನ ಸೆಡಾನ್ ಕೌಂಟರ್‌ಪಾರ್ಟ್‌ನಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆಯುತ್ತದೆ, ಇದು ಹೆಚ್ಚು ನವೀಕರಿಸಿದ ಮುಂಭಾಗದ ಗ್ರಿಲ್ ಮತ್ತು ಸ್ಲಿಮ್ಮರ್ ಕ್ರೋಮ್ ಅಕ್ಸೆಟ್ ನಯವಾದ ಲುಕ್ ಅನ್ನು ಹೊಂದಿದೆ. RS ರೂಪಾಂತರಗಳು, ನಿರ್ದಿಷ್ಟವಾಗಿ, ಹೆಚ್ಚು ಅಗ್ರೇಸಿವ್ ಬಂಪರ್ ಮತ್ತು ಹಿಂಭಾಗದಲ್ಲಿ ಹೊಸ ಡಿಫ್ಯೂಸರ್ ತರಹದ ಅಂಶವನ್ನು ಹೊಂದಿದೆ.

ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಒಳಭಾಗದಲ್ಲಿ ತನ್ನ ಪರಿಚಿತ ವಿನ್ಯಾಸವನ್ನು ನಿರ್ವಹಿಸುತ್ತದೆ ಆದರೆ ಪ್ರಯಾಣಿಕರ ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಟ್ವೀಕ್‌ಗಳನ್ನು ಪರಿಚಯಿಸುತ್ತದೆ, ಉದಾಹರಣೆಗೆ ಹೆಚ್ಚುವರಿ USB-C ಚಾರ್ಜಿಂಗ್ ಪೋರ್ಟ್‌ಗಳು ಮತ್ತು e:HEV ರೂಪಾಂತರಗಳಲ್ಲಿ ಹಿಂಭಾಗದ ಪ್ರಯಾಣಿಕರಿಗೆ ಮೀಸಲಾದ ಸ್ಮಾರ್ಟ್‌ಫೋನ್ ಪಾಕೆಟ್ ಅನ್ನು ಹೊಂದಿದೆ.
ತಂತ್ರಜ್ಞಾನದ ಪ್ರಕಾರ, ಕಾರು ಎಲ್ಲಾ ರೂಪಾಂತರಗಳಲ್ಲಿ ಹೋಂಡಾ ಸೆನ್ಸಿಂಗ್ ಸೂಟ್ ಅನ್ನು ಹೊಂದಿದ್ದು, ಸುರಕ್ಷಿತ ಮತ್ತು ಹೆಚ್ಚು ಕನೆಕ್ಟಿವಿಟಿ ಚಾಲನಾ ಅನುಭವವನ್ನು ಖಚಿತಪಡಿಸಿಕೊಳ್ಳಲು ಮಲ್ಟಿ-ಆಂಗಲ್ ರಿವರ್ಸ್ ಕ್ಯಾಮೆರಾ ಮತ್ತು ಹೋಂಡಾ ಲೇನ್‌ವಾಚ್‌ನಂತಹ ಸುಧಾರಿತ ಡ್ರೈವರ್-ಅಸಿಸ್ಟ್ ಸಿಸ್ಟಂಗಳನ್ನು (ADAS) ಹೊಂದಿವೆ. ಅದರ ಅಪ್‌ಡೇಟ್‌ಗಳು ಮತ್ತು ಹೈಬ್ರಿಡ್ ರೂಪಾಂತರದ ಪರಿಚಯದ ಹೊರತಾಗಿಯೂ, ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಅನನುಕೂಲತೆಯನ್ನು ಹೊಂದಿದೆ.

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ಭಾರತದಲ್ಲಿ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಅನ್ನು ಸದ್ಯಕ್ಕೆ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ. ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯನ್ನು ಭಾರತಿಯ ಮಾರುಕಟ್ಟೆಯಲ್ಲಿ ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿತು. ಈ ಹೊಂಡಾ ಎಲಿವೇಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಇತರ ಜನಪ್ರಿಯ ಎಸ್‍ಯುವಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.
ಹೋಂಡಾ ಎಸ್‍ಯುವಿಯು ಪವರ್‌ಟ್ರೇನ್ ವಿಶೇಷಣಗಳು, ಆಕರ್ಷಕ ಒಳಾಂಗಣ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ. ಹೋಂಡಾ ಎಲಿವೇಟ್ ಎಸ್‍ಯುವಿಯ SV, V, VX ಮತ್ತು ZX ಎಂಬಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯು ಅದರ LED DRL ನೊಂದಿಗೆ ಹೊಸ ಬೋಲ್ಡ್ LED ಹೆಡ್‌ಲೈಟ್‌ಗಳು ಹೈಲೈಟ್ ಆಗಿದೆ. ಹೋಂಡಾ ಎಲಿವೇಟ್ ಎಸ್‍ಯುವಿಯನ್ನು ಹೋಂಡಾ ಆರ್&ಡಿ ಏಷ್ಯಾ ಪೆಸಿಫಿಕ್, ಥೈಲ್ಯಾಂಡ್ ಅಭಿವೃದ್ಧಿಪಡಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








