ಸದ್ದಿಲ್ಲದೇ ಬರುತ್ತಿದೆ ಐದು ಮಂದಿ ಪ್ರಯಾಣಕ್ಕೆ ಬೆಸ್ಟ್ ಕಾರು: ಏನಿದರ ವಿಶೇಷತೆ?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ನಾಲ್ಕನೇ ತಲೆಮಾರಿನ ಪಾಸ್‌ಪೋರ್ಟ್ ಎಸ್‍ಯುವಿಯನ್ನು ಇತ್ತೀಚೀಗೆ ಅನಾವರಣಗೊಳಿಸಲಾಗಿದೆ. ಈ ಹೊಸ ಹೋಂಡಾ ಪಾಸ್‌ಪೋರ್ಟ್ ಅದರ ಹಿಂದಿ ಮಾದರಿಗೆ ಹೋಲಿಸಿದರೆ ಸ್ವಲ್ಪ ದೊಡ್ಡದಾಗಿದೆ ಮತ್ತು ಹೆಚ್ಚು ಅಗ್ರೇಸಿವ್ ಆಗಿದೆ. ಇದು ಆಫ್-ರೋಡ್ ಫೋಕಸ್ಡ್ ಟ್ರೈಲ್‌ಸ್ಪೋರ್ಟ್ ರೂಪಾಂತರವನ್ನು ಸಹ ಹೊಂದಿರುತ್ತದೆ. ಇದು ಹೋಂಡಾ ಅದನ್ನು ಒರಟಾದ ಗೋ-ಎನೀವೇರ್ ಎಸ್‍ಯುವಿಯಾಗಿ ಪರಿಚಯಿಸಬಹುದು. ಅಂದರೆ ಇದು ಆಫ್-ರೋಡ್ ರೂಪಾಂತರವಾಗಿರುತ್ತದೆ. ಈ ಹೊಸ ಎಸ್‍ಯುವಿಯು ಆಕರ್ಷಕ ಫೀಚರ್ಸ್ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ.

ಎಂಜಿನ್: ಹೊಸ ಹೋಂಡಾ ಪಾಸ್‌ಪೋರ್ಟ್ ಎಸ್‍ಯುವಿಯಲ್ಲಿ ಪವರ್ ಫುಲ್ 3.5-ಲೀಟರ್ V6 ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 285 hp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಎಂಜಿನ್ ಅನ್ನು ಜಾಗತಿಕವಾಗಿ ಅನೇಕ ಹೋಂಡಾ ಕಾರುಗಳಲ್ಲಿ ಬಳಸಲಾಗಿದೆ. ಈ ಎಸ್‍ಯುವಿಯ ಟ್ರಯಲ್‌ಸ್ಪೋರ್ಟ್ ಆಫ್-ರೋಡ್ ಫೋಕಸ್ಡ್ ರೂಪಾಂತರವು ವಿಶಿಷ್ಟವಾದ ಸಸ್ಪೆನ್ಶನ್ ಸೆಟಪ್ ಅನ್ನು ಪಡೆಯುತ್ತದೆ.

Honda Passport

ವಿನ್ಯಾಸ: ಹೊಸ ಹೋಂಡಾ ಪಾಸ್‌ಪೋರ್ಟ್ (Honda Passport) ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಮುಂಭಾಗದ ದೊಡ್ಡ ಹೆಡ್‌ಲ್ಯಾಂಪ್‌ಗಳೊಂದಿಗೆ ಬಾಕ್ಸಿಯಾಗಿ ಕಾಣುತ್ತದೆ, ವಿಶಾಲವಾದ ಹುಡ್ ಸ್ಕೂಪ್‌ನೊಂದಿಗೆ ಫ್ಲಾಟ್ ಕ್ಲ್ಯಾಮ್‌ಶೆಲ್ ಹುಡ್ ಅನ್ನು ಕಾಂಟ್ರಾಸ್ಟ್ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಇರಡೂ ಸ್ಲ್ಯಾಟ್‌ಗಳೊಂದಿಗೆ ನೇರವಾದ ಗ್ರಿಲ್ ಜೊತೆಗೆ ಮಧ್ಯದಲ್ಲಿ ದೊಡ್ಡ ಹೋಂಡಾ ಲೋಗೋವಿದೆ.

ಹೋಂಡಾ ಪಾಸ್‌ಪೋರ್ಟ್ ಎಸ್‍ಯುವಿಯ ಮುಂಭಾಗದ ಬಂಪರ್‌ನ ಮೇಲ್ಭಾಗದಲ್ಲಿ ವಿಶಾಲವಾದ ಏರ್ ಡ್ಯಾಂ ಹೊಂದಿದ್ದು, ಅದರ ಕೆಳಗೆ ದೊಡ್ಡ ಸ್ಕಿಡ್ ಪ್ಲೇಟ್, ಫಾಕ್ಸ್ ಅಲ್ಯೂಮಿನಿಯಂ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯ ಬದಿಗಳಲ್ಲಿ ಅಗ್ರೇಸಿವ್ ವ್ಹೀಲ್ ಅರ್ಚಾರ್ ಗಳು ಸುತ್ತಲೂ ಪ್ಲಾಸ್ಟಿಕ್ ಹೊದಿಕೆ ಮತ್ತು ಬ್ಲ್ಯಾಕ್ ಡೋರ್ ಹ್ಯಾಂಡಲ್ ಗಳನ್ನು ಹೊಂದಿವೆ. ಈ ಹೊಸ ಪಾಸ್‌ಪೋರ್ಟ್‌ನ ಗ್ರೌಂಡ್ ಕ್ಲಿಯರೆನ್ಸ್ ಹಿಂದಿನ ಮಾದರಿಗಿಂತ ಹೆಚ್ಚಾಗಿದ.

Honda Passport

ಮುಂಭಾಗದ ಓವರ್‌ಹ್ಯಾಂಗ್‌ ಅನ್ನು ಹೊಂದಿದ್ದು, ಇದು ಆಫ್-ರೋಡ್ ಸಾಮರ್ಥ್ಯಕ್ಕಾಗಿ ಬಳಸಬಹುದು. ಈ ಹೊಸ ಹೋಂಡಾ ಎಸ್‍ಯುವಿಯಲ್ಲಿ 31-ಇಂಚಿನ ಟೈರ್‌ಗಳೊಂದಿಗೆ 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಹಿಂಭಾಗದಲ್ಲಿ, ಇದು ಸುತ್ತುವ ವಿಂಡ್‌ಸ್ಕ್ರೀನ್, ನೋಂದಣಿ ಪ್ಲೇಟ್ ಹೌಸಿಂಗ್‌ನ ಮೇಲೆ ಬ್ಲ್ಯಾಕ್ ಕಾಂಟ್ರಾಸ್ಟಿಂಗ್ ಟ್ರಿಮ್ ಮತ್ತು ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್‌ನೊಂದಿಗೆ ಬಂಪರ್ ಅನ್ನು ಹೊಂದಿದೆ.

ಫೀಚರ್ಸ್: ಈ ಹೊಸ ಹೋಂಡಾ ಪಾಸ್‌ಪೋರ್ಟ್ ಎಸ್‍ಯುವಿಯ ಒಳಭಾಗದಲ್ಲಿ 5-ಸೀಟುಗಳ ಮಾದರಿಯಾಗಿದ್ದು, ಡ್ಯಾಶ್‌ಬೋರ್ಡ್‌ಗಾಗಿ ಸಂಪೂರ್ಣ-ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಸೀಟ್ ಅಪ್ಹೋಲ್‌ಸ್ಟರಿ ಮತ್ತು ಡೋರ್ ಪ್ಯಾಡ್‌ಗಳು ವಿಭಿನ್ನವಾದ ಬಣ್ಣಗಳ ಜೊತೆ ಸ್ಟಿಚಿಂಗ್ ಗಳನ್ನು ಪಡೆಯುತ್ತವೆ. ಈ ಹೊಸ ಎಸ್‍ಯುವಿಯಲ್ಲಿ 12.4-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯು ಆಫ್-ರೋಡ್ ನಿರ್ದಿಷ್ಟ ಮಾಹಿತಿಯನ್ನು ಸಹ ಪಡೆಯುತ್ತದೆ.

Honda Passport

ಇದರೊಂದಿಗೆ ಈ ಹೊಸ ಹೋಂಡಾ ಎಸ್‍ಯುವಿಯಲ್ಲಿ 10.2-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇದೆ. ಇತರ ವೈಶಿಷ್ಟ್ಯಗಳಲ್ಲಿ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಮತ್ತು ADAS ಸೂಟ್ ಸೇರಿವೆ. ಒನ್ನು ಹೋಂಡಾ ಕಂಪನಿಯು ಈ ಪಾಸ್‌ಪೋರ್ಟ್ ಎಸ್‍ಯುವಿಯನ್ನು ಎಲೆಕ್ಟ್ರಿಕ್ ಆವೃತ್ತಿಯಾಗಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ. ಪಾಸ್‌ಪೋರ್ಟ್ ಎಸ್‌ಯುವಿ ಉತ್ತರ ಅಮೆರಿಕಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಆದರೆ ಭಾರತಕ್ಕೆ ಬರುವುದಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, November 17, 2024, 11:00 [IST]
English summary
New honda passport suv top things details
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+