Hyundai: ಶೋರೂಂ ತಲುಪಿದ ನೂತನ ಹ್ಯುಂಡೈ ಫ್ಯಾಮಿಲಿ ಕಾರು.. 14.99 ಲಕ್ಷ, 7-ಸೀಟರ್.. 20 ಕಿ.ಮೀ ಮೈಲೇಜ್!

ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಖ್ಯಾತಿ ಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಹಲವು ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಖರೀದಿದಾರರು ಕೂಡ ತಾಮುಂದು - ನಾಮುಂದು ಎಂಬಂತೆ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಹ್ಯುಂಡೈ ಕಂಪನಿಯು ಸೋಮವಾರ 2024ರ ನವೀಕರಿಸಿದ ಅಲ್ಕಾಜರ್ (Alcazar) ಎಸ್‌ಯುವಿಯನ್ನು ಮಾರಾಟಕ್ಕೆ ತಂದಿದೆ. ಸದ್ಯ, ಈ ಹೊಚ್ಚ ಹೊಸ ಕಾರು ದೇಶಾದ್ಯಂತ ಶೋರೂಂಗಳನ್ನು ತಲುಪಲು ಶುರುವಾಗಿದೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲೂ ಕಂಡುಬಂದಿದ್ದು, ಶೀಘ್ರವೇ ಅಲ್ಕಾಜರ್ ಫ್ಯಾಮಿಲಿ ಎಸ್‌ಯುವಿ ವಿತರಣೆ ಆರಂಭವಾಗುವ ಸಾಧ್ಯತೆಯಿದೆ.

ನೂತನ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ (Hyundai Alcazar Suv) ಸ್ಪರ್ಧಾತ್ಮಕ ದರದಲ್ಲಿ ಖರೀದಿಗೆ ಲಭ್ಯವಿದೆ. ರೂ.14.99 ಲಕ್ಷದಿಂದ ರೂ.21.40 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಪ್ಲಾಟಿನಂ, ಸಿಗ್ನೇಚರ್, ಪ್ರೆಸ್ಟೀಜ್ ಮತ್ತು ಎಕ್ಸಿಕ್ಯೂಟಿವ್ ಎಂಬ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ. ಅಟ್ಲಾಸ್ ವೈಟ್, ಅಬಿಸ್ ಬ್ಲ್ಯಾಕ್ ಪರ್ಲ್, ರೇಂಜರ್ ಖಾಕಿ, ಫಿಯರಿ ರೆಡ್, ಟೈಟಾನ್ ಗ್ರೇ ಮ್ಯಾಟ್ ಸೇರಿದಂತೆ 9 ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

New Hyundai Alcazar Suv Starts Reaching Showrooms Details

ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾಗಿರುವ ವಿನ್ಯಾಸವನ್ನು ಹೊಂದಿದೆ. ಹೊಸದಾಗಿರುವ ಗ್ರಿಲ್, ಹೆಡ್‌ಲ್ಯಾಂಪ್‌ಗಳು, 18-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಪಡೆದಿದೆ. ಒಳಭಾಗದ ಕ್ಯಾಬಿನ್ ವಿನ್ಯಾಸವು ಕೂಡ ಉತ್ತಮವಾಗಿದೆ. ಈ ಕಾರು 4,560 ಎಂಎಂ ಉದ್ದ, 1,800 ಎಂಎಂ ಅಗಲ ಹಾಗೂ 1,710 ಎಂಎಂ ಎತ್ತರವಿದ್ದು, 2,760 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.

ಅಲ್ಕಾಜರ್ ಕಾರಿನ ಪವರ್‌ಟ್ರೇನ್‌ ಬಗ್ಗೆ ಹೇಳುವುದಾದರೆ, ಇದರ 1.5-ಲೀಟರ್ ಜಿಡಿಟಿ ಟರ್ಬೊ ಪೆಟ್ರೋಲ್ ಎಂಜಿನ್ 158 ಬಿಹೆಚ್‍ಪಿ ಗರಿಷ್ಠ ಅಶ್ವ ಶಕ್ತಿ (ಪವರ್) ಮತ್ತು 253 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 113 ಬಿಹೆಚ್‍ಪಿ ಗರಿಷ್ಠ ಅಶ್ವ ಶಕ್ತಿ ಹಾಗೂ 250 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುತ್ತದೆ.

New Hyundai Alcazar Suv Starts Reaching Showrooms Details

ಈ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17.5 ರಿಂದ 20.4 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ನಾರ್ಮಲ್, ಇಕೋ & ಸ್ಪೋರ್ಟ್ ಎಂಬ 3 ಡ್ರೈವಿಂಗ್ ಮೋಡ್‌ಗಳು ಹಾಗೂ ಸ್ಟಾರ್ಟ್/ಸ್ಟಾಪ್ ಸಿಸ್ಟಮ್‌ಗಳನ್ನು ಪಡೆದಿದೆ.

ನೂತನ ಕಾರು 6/7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಸಿಗುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡಿಸ್ಪ್ಲೇಗಳು, ಪನೊರೊಮಿಕ್ ಸನ್‌ರೂಫ್‌, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, 6 ಏರ್‌ಬ್ಯಾಗ್‌ ಹಾಗೂ ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

New Hyundai Alcazar Suv Starts Reaching Showrooms Details

ಒಟ್ಟಾರೆಯಾಗಿ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ (Hyundai Alcazar Suv) ಸಾಕಷ್ಟು ಅತ್ಯಾಧುನಿಕವಾಗಿದ್ದು, ನಿಮ್ಮ ಕುಟುಂಬಕ್ಕೆ ಹೆಚ್ಚು ಸೂಕ್ತವಾಗಲಿದೆ. ಈ ಹಬ್ಬದ ಋತುವಿನಲ್ಲಿ ಹೊಸ ಕಾರು ಖರೀದಿಸಬೇಕು ಅಂದುಕೊಂಡರೆ ಅಲ್ಕಾಜರ್ ಎಸ್‌ಯುವಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಈ ಕಾರು ಯಾವ ರೀತಿಯ ಬೇಡಿಕೆ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source Link

More from DriveSpark

Article Published On: Thursday, September 12, 2024, 10:16 [IST]
English summary
New hyundai alcazar suv starts reaching showrooms details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+