ಈ ಹ್ಯುಂಡೈ ಕಾರಿನ ಖರೀದಿಗಾಗಿ ಮುಗಿಬಿದ್ದ ಜನ: ಇದು ನಿಮಗೆ ಬೇಕು ಅಂದ್ರೆ ಕಾಯಲೇಬೇಕು!

ಜನಪ್ರಿಯ ಮತ್ತು ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (Hyundai Motor India Limited) ತನ್ನ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿ ಮಾದರಿಯ ವಿತರಣೆಯನ್ನು ಪ್ರಾರಂಭಿಸಿದೆ.

ಈ ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಬುಕ್ ಮಾಡಿದ ಗ್ರಾಹಕರು ಇದನ್ನು ಪಡೆಯಲು ಐದು ತಿಂಗಳವರೆಗೆ ಕಾಯಬೇಕಾಗುತ್ತದೆ. ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಅನ್ನು E, EX, S, S(O), SX, SX Tech, ಮತ್ತು SX(O) ಎಂಬ ಏಳು ರೂಪಾಂತರಗಳಲ್ಲಿ ಹೊಂದಬಹುದು. ಡೀಸೆಲ್ ರೂಪಾಂತರಗಳು ನಾಲ್ಕರಿಂದ ಐದು ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದ್ದರೆ, ಪೆಟ್ರೋಲ್-ಚಾಲಿತ ಕ್ರೆಟಾ ಬುಕಿಂಗ್ ದಿನದಿಂದ ಮೂರರಿಂದ ನಾಲ್ಕು ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ.

Hyundai Creta

ಈ ಕಾಯುವ ಅವಧಿಯು ಪ್ರದೇಶ, ಡೀಲರ್‌ಶಿಪ್, ರೂಪಾಂತರ, ಬಣ್ಣ, ಎಂಜಿನ್, ಪ್ರಸರಣ ಮತ್ತು ಇತರ ಅಂಶಗಳನ್ನು ಅವಲಂಬಿಸಿ ಬದಲಾಗಬಹುದು. ನಿಖರವಾದ ಮಾಹಿತಿಗಾಗಿ ನಿಮ್ಮ ಹತ್ತಿರದ ಅಧಿಕೃತ ಡೀಲರ್‌ಶಿಪ್‌ಗೆ ಭೇಟಿ ನೀಡಿ. ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿಗೆ ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿಯಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಈ ಕಾರು ಇ, ಇಎಕ್ಸ್, ಎಸ್, ಎಸ್(ಒ), ಎಸ್ಎಕ್ಸ್ ಟೆಕ್, ಎಸ್ಎಕ್ಸ್(ಒ) ರೂಪಾಂತರಗಳು (Variants), ರೇಂಜರ್ ಖಾಕಿ, ಅಬಿಸ್ ಬ್ಲಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಸೇರಿದಂತೆ 6-ಮೊನೊಟೋನ್, 1-ಡುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಸಿಗುತ್ತದೆ. ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್, ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯುವ ಸಲುವಾಗಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

Hyundai Creta

ಈ ಹೊಸ ಎಸ್‍ಯುವಿಯ ಮುಂಭಾಗ ಎಲ್ ಆಕಾರದ ಎಲ್ಇಡಿ ಡಿಆರ್‌ಎಲ್‌, ನವೀನವಾದ ಎಲ್ಇಡಿ ಹೆಡ್‌ಲೈಟ್‌, ಹೊಸದಾದ ಪ್ಯಾರಾಮೆಟ್ರಿಕ್ ಫ್ರಂಟ್ ಗ್ರಿಲ್ ಅನ್ನು ಪಡೆದಿದೆ. ಹಿಂಭಾಗದ ವಿನ್ಯಾಸವು ಕೂಡ ಆಕರ್ಷಕವಾಗಿದ್ದು, ವಿಶೇಷವಾಗಿ 17-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಸ್ ಒಳಗೊಂಡಿದೆ. ಈ ಎಸ್‍ಯುವಿಯಲಿ ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಇದರಲ್ಲಿ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 PS ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್/ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಮತ್ತೊಂದು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 PS ಗರಿಷ್ಠ ಪವರ್, 253 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಒಳಗೊಂಡಿದೆ.

Hyundai Creta

1.5-ಲೀಟರ್ ಡಿಸೇಲ್ ಎಂಜಿನ್ 116 PS ಪವರ್, 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಪೆಟ್ರೋಲ್ ರೂಪಾಂತರಗಳು 17.4 kmpl-18.4 kmpl, ಡೀಸೆಲ್ ರೂಪಾಂತರಗಳು 19.1 kmpl-21.8 kmpl ಮೈಲೇ ಹೊಂದಿವೆ ಎಂದು ವರದಿಯಾಗಿದೆ.

ಈ ಎಸ್‍ಯುವಿಯಲ್ಲಿ 10.25 - ಇಂಚಿನ ಡಿಸ್ಪ್ಲೇ, ಡುಯಲ್-ಝೋನ್ ಎಸಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಸ್‌ಯುವಿ, ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, 6 - ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS , 360-ಡಿಗ್ರಿ ಕ್ಯಾಮೆರಾ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, January 30, 2024, 19:35 [IST]
English summary
New hyundai creta suv waiting period details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+