360 ಕಿ.ಮೀ ರೇಂಜ್: ಆಟಿಕೆ ಕಾರಿನಂತೆ ಕಂಡರೂ ಅಸಮಾನ್ಯ ಸಾಮಥ್ಯದ ಪುಟ್ಟ ಹ್ಯುಂಡೈ ಕಾರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಹೊಸ ಇನ್‌ಸ್ಟರ್ ಕ್ರಾಸ್ ಅನ್ನು ಅನಾವರಣಗೊಳಿಸಿದೆ. ಇದು ಕೆಲವು ತಿಂಗಳ ಹಿಂದೆ ಅನಾವರಣಗೊಂಡ ಆಲ್-ಎಲೆಕ್ಟ್ರಿಕ್ ಇನ್‌ಸ್ಟರ್‌ನ ರೂಪಾಂತರವಾಗಿದೆ. ಇನ್‌ಸ್ಟರ್ ಕ್ರಾಸ್ ಹೊಸ ಸ್ಟೈಲಿಂಗ್ ಅಂಗಳನ್ನು ಪಡೆದುಕೊಂಡಿದೆ. ಇದು ಹೆಚ್ಚು ಆಫ್-ರೋಡ್ ಲುಕ್ ಅನ್ನು ಹೊಂಡಿದೆ. ಕೊರಿಯಾದಲ್ಲಿರುವ ತನ್ನ ಸ್ಥಾವರದಲ್ಲಿ ಈ ವರ್ಷದ ಕೊನೆಯಲ್ಲಿ ವಾಹನದ ಉತ್ಪಾದನೆಯನ್ನು ಪ್ರಾರಂಭಿಸಲಾಗುವುದು ಎಂದು ಹುಂಡೈ ಹೇಳಿದೆ. ಈ ಹ್ಯುಂಡೈ ಇನ್‌ಸ್ಟರ್ ಕ್ರಾಸ್ (Hyundai Inster Cross) ಕಾರು ವಿದೇಶ ಮಾರುಕಟ್ಟೆಗಾಗಿ ಹ್ಯುಂಡೈ ಕಂಪನಿಯು ತರುತ್ತಿದೆ.

ಹ್ಯುಂಡೈ ಇನ್‌ಸ್ಟರ್ ಕ್ರಾಸ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಇನ್‌ಸ್ಟರ್ ಕ್ರಾಸ್ ಸ್ಟ್ಯಾಂಡರ್ಡ್ ಕಾರಿನ ಅದೇ ಮೂಲ ವಿನ್ಯಾಸವನ್ನು ಉಳಿಸಿಕೊಂಡಿದೆ. ಈ ಕಾರಿನ ಹೊರಬಾಗದಲ್ಲಿ ನೋಟಕ್ಕಾಗಿ ಕೆಲವು ಕಾಸ್ಮೆಟಿಕ್ ಟ್ವೀಕ್‌ಗಳನ್ನು ಪಡೆಯುತ್ತದೆ. ಈ ಹೊಸ ಕಾರಿನ ಆಯತಾಕಾರದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ 17-ಇಂಚಿನ ಅಲಾಯ್ ವ್ಹೀಲ್ ಗಳು, ಫಾಕ್ಸ್ ಸ್ಕಿಡ್ ಪ್ಲೇಟ್‌ಗಳು ಮತ್ತು ವ್ಹೀಲ್ ಅರ್ಚಾರ್ ಗಳ ಸುತ್ತಲೂ ಕಪ್ಪು ಕ್ಲಾಡಿಂಗ್ ಅನ್ನು ಹೊಂದಿದೆ.

Hyundai Inster Cross

ಪ್ರಮುಖವಾಗಿ ಮತ್ತೊಂದು ಬದಲಾವಣೆ ಏನೆಂದರೆ, ಇನ್‌ಸ್ಟರ್‌ನಲ್ಲಿ ನೀಡಲಾದ ಇತರ ಐದು ಬಣ್ಣಗಳನ್ನು ಹೊರತುಪಡಿಸಿ ಇನ್‌ಸ್ಟರ್ ಕ್ರಾಸ್ ಅನ್ನು ಹೊಸ ಅಮೆಜಾನಾಸ್ ಗ್ರೀನ್ ಮ್ಯಾಟ್ ಶೇಡ್‌ನಲ್ಲಿ ನೀಡಲಾಗುತ್ತದೆ. ಆಂತರಿಕ ವಿನ್ಯಾಸವು ಒಂದೇ ಆಗಿರುತ್ತದೆ. ಈ ಕಾರು ಅಟ್ಲಾಸ್ ವೈಟ್, ಅನ್‌ಬ್ಲೀಚ್ಡ್ ಐವರಿ, ಏರೋ ಸಿಲ್ವರ್ ಮ್ಯಾಟ್, ಅಬಿಸ್ ಬ್ಲ್ಯಾಕ್ ಪರ್ಲ್ ಮತ್ತು ಟಾಮ್‌ಬಾಯ್ ಖಾಕಿಯಂತಹ ಬಣ್ಣ ಆಯ್ಕೆಗಳನ್ನು ನೀಡಲಾಗುವುದು.

ಇದರ ಹೊರತಾಗಿ, ವಿಶೇಷವಾದ ಅಮೆಜೋನಿಯನ್ ಗ್ರೀನ್ ಮ್ಯಾಟ್ ಬಣ್ಣದ ಆಯ್ಕೆಯೂ ಇರುತ್ತದೆ. ಈ ಕೆಲವು ಬಾಹ್ಯ ಬಣ್ಣ ಆಯ್ಕೆಗಳು ಕಪ್ಪು ರೂಫ್ ಡ್ಯುಯಲ್-ಟೋನ್ ಬಣ್ಣದ ಯೋಜನೆಯಲ್ಲಿ ಇವಿ ಅನ್ನು ಸಹ ನೀಡುತ್ತವೆ. ಈ ಹ್ಯುಂಡೈ ಇನ್‌ಸ್ಟರ್ ಕ್ರಾಸ್ ಅನ್ನು ಹಲವು ಟಾಪ್-ಸೆಪ್ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಲಿದೆ. ಇದು ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಜೊತೆಗೆ ಇನ್ಫೋಟೈನ್‌ಮೆಂಟ್ ಮತ್ತು ಡ್ರೈವ್ ಡಿಸ್ ಪ್ಲೇಗಾಗಿ 10.25-ಇಂಚಿನ ಸ್ರ್ಕೀನ್ ಪಡೆಯುತ್ತದೆ.

Hyundai Inster Cross

ಈ ಹ್ಯುಂಡೈ ಇನ್‌ಸ್ಟರ್ ಕ್ರಾಸ್ ಎಲೆಕ್ಟ್ರಿಕ್ ಎಸ್‌ಯುವಿಯು ADAS ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇವುಗಳಲ್ಲಿ ಹೈವೇ ಡ್ರೈವಿಂಗ್ ಅಸಿಸ್ಟ್ 1.5, ಸ್ಮಾರ್ಟ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಕೊಲಿಷನ್-ಅವಾಯಿಡೆನ್ಸ್ ಅಸಿಸ್ಟ್ 1, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ನ್ಯಾವಿಗೇಷನ್ ಡೇಟಾದೊಂದಿಗೆ ಲೇನ್ ಸೆಂಟರ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

ಮುಂದೆ ಬೆಂಚ್ ಸೀಟುಗಳು ಬರುತ್ತಿವೆ. ಎರಡನೇ ಸಾಲಿನ ಸೀಟುಗಳನ್ನು ನಾವು ಮಡಚಬಹುದು. ಈ ಕಾರಿನ ಸೀಟುಗಳನ್ನು ಪ್ರತ್ಯೇಕವಾಗಿ ಮುಂದಕ್ಕೆ ಮತ್ತು ಹಿಂದಕ್ಕೆ ಸ್ಲಿಡ್ ಮಾಡಬಹುದು. ಕಾರು 280 ಲೀಟರ್ ಬೂಟ್ ಸ್ಪೇಸ್ ಪಡೆಯಲಿದೆ. ಇನ್ನು ಎರಡನೇ ಸಾಲಿನ ಸೀಟುಗಳನ್ನು ಮಡಿಚಿದರೆ 351 ಲೀಟರ್‌ಗೆ ವಿಸ್ತರಿಸಬಹುದು. ಗಾತ್ರದಲ್ಲಿ, ಹ್ಯುಂಡೈ ಇನ್‌ಸ್ಟರ್ ಕ್ರಾಸ್ 3,825 ಎಂಎಂ ಉದ್ದ, 1,610 ಎಂಎಂ ಅಗಲ ಮತ್ತು 1,575 ಎಂಎಂ ಎತ್ತರವನ್ನು ಹೊಂದಿದೆ.

Hyundai Inster Cross

ಇನ್‌ಸ್ಟರ್ ಕಾರಿನಲ್ಲಿ 49kWh ಬ್ಯಾಟರಿ ಪ್ಯಾಕ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ದೊಡ್ಡ ಬ್ಯಾಟರಿ ಪ್ಯಾಕ್ WLTP ಸೈಕಲ್‌ನಲ್ಲಿ 360 ಕಿಮೀ ರೇಂಜ್ ಅನ್ನು ನೀಡುತ್ತದೆ. ಈ ಇವಿ 113 bhp ಪವರ್ ಮತ್ತು 147 Nm ಟಾರ್ಕ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ. ಇವಿ 120kWh ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ರೀತಿಯಾಗಿ, ಬ್ಯಾಟರಿಯನ್ನು 30 ನಿಮಿಷಗಳಲ್ಲಿ 10-80 ಪ್ರತಿಶತದಿಂದ ಚಾರ್ಜ್ ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, October 17, 2024, 13:41 [IST]
English summary
New hyundai inster cross unveiled details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+