Hyundai: ಹೊಸ ಹ್ಯುಂಡೈ MPV ಬಿಡುಗಡೆ: ಹೈಬ್ರಿಡ್ ಎಂಜಿನ್, ಅದ್ಬುತ ಮೈಲೇಜ್
ಇತ್ತೀಚೆಗೆ ವಿಶ್ವದಾದ್ಯಂತ ಪ್ರೀಮಿಯಂ ಎಂಪಿವಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಹ್ಯುಂಡೈ ಸ್ಟಾರಿಯಾ, ಇದು ವಿಶ್ವದ ಹಲವು ವಾಹನ ಮಾರುಕಟ್ಟೆಗಳಲ್ಲಿ ಬಹಳ ಜನಪ್ರಿಯತೆ ಪಡೆದಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಈಗ ಅದರ ಪವರ್ ಹೆಚ್ಚಿಸಿ ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ.
ಹ್ಯುಂಡೈ 2024ರ ಸ್ಟಾರಿಯಾ ಹೈಬ್ರಿಡ್ ಎಂಪಿವಿಯನ್ನು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆ ಮಾಡಿದೆ. ಇದು 5.3 ಮೀ. ಉದ್ದ, 3.5 ಲೀಟರ್ V6 ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ನಿರ್ಧಿಷ್ಟವಾಗಿ ಹೇಳುವುದಾದ್ರೆ ಹ್ಯುಂಡೈ ಸ್ಟಾರಿಯಾ' ಕಿಯಾ ಕಾರ್ನಿವಲ್‌ನ ಪ್ರತಿರೂಪವಾಗಿದ್ದು, ಇದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

ಸ್ಟಾರಿಯಾ ಹೈಬ್ರಿಡ್ ಕಾರ್ಗೋ ಬೆಲೆಯು 3 ಸೀಟರ್‌ಗೆ KRW 34,330,000 (ಅಂದಾಜು ರೂ. 21.33 ಲಕ್ಷ) ಮತ್ತು 5 ಸೀಟರ್‌ಗೆ KRW 35,130,000 (ಅಂದಾಜು ರೂ. 21.83 ಲಕ್ಷ) ನಿಂದ ಪ್ರಾರಂಭವಾಗುತ್ತದೆ. ಸ್ಟಾರಿಯಾ ಟೂರರ್ ಹೈಬ್ರಿಡ್ 9 ಸೀಟರ್ ಮತ್ತು 11 ಸೀಟರ್ ಗಳ ಬೆಲೆಯು KRW 36,530,000 (ಅಂದಾಜು 22.7 ಲಕ್ಷ ರೂ.) ನಿಂದ ಪ್ರಾರಂಭವಾಗುತ್ತದೆ.
ಹ್ಯುಂಡೈ ಸ್ಟಾರಿಯಾ ಲಾಂಜ್ ಹೈಬ್ರಿಡ್ ಪ್ರೆಸ್ಟೀಜ್ 9 - ಸೀಟರ್ ಎಂಪಿವಿ KRW 41,100,000 (ಅಂದಾಜು ರೂ. 25.54 ಲಕ್ಷ) ದಿಂದ ಪ್ರಾರಂಭವಾಗುತ್ತದೆ. ಇನ್‌ಸ್ಪಿರೇಶನ್ 7 - ಸೀಟರ್ ಬೆಲೆಯು KRW 46,140,000 (ಅಂದಾಜು ರೂ. 28.7 ಲಕ್ಷ) ವರೆಗೆ ಹೋಗುತ್ತದೆ.

ಹ್ಯುಂಡೈ ಸ್ಟಾರಿಯಾ ಭಾರತದಲ್ಲಿ ಕಾಣಿಸಿಕೊಂಡಿತ್ತು: ಭಾರತದಲ್ಲಿ ಈ ಕಾರು ನೀಲಿ ನಂಬರ್ ಪ್ಲೇಟ್‌ನೊಂದಿಗೆ ಕಾಣಿಸಿಕೊಂಡಿತ್ತು. ಅಂದ್ರೆ ರಾಜತಾಂತ್ರಿಕರ ವಾಹನಗಳಿಗೆ ಈ ನೀಲಿ ನಂಬರ್ ಪ್ಲೇಟ್ ನೀಡಲಾಗುತ್ತದೆ. ಅಲ್ಲಿಗೆ ಇದು ದಕ್ಷಿಣ ಕೊರಿಯಾದ ಪ್ರತಿನಿಧಿಗಳ ಕಾರು ಎಂಬುದನ್ನು ಸೂಚಿಸುತ್ತದೆ. ಇದು ಗಣ್ಯರಲ್ಲಿ ಹ್ಯುಂಡೈ ಸ್ಟಾರಿಯಾದ ಜನಪ್ರಿಯತೆಯನ್ನು ತೋರಿಸುತ್ತದೆ. ಟಾಪ್-ಸ್ಪೆಕ್ ಇನ್‌ಸ್ಪಿರೇಷನ್ 7-ಸೀಟರ್ ವಿಐಪಿಗಳಲ್ಲಿ ಬಹಳ ಜನಪ್ರಿಯವಾಗಿದೆ. ಇದರಲ್ಲಿ ಕಾರವಾನ್ ಆವೃತ್ತಿಯೂ ಇದೆ.
ಹ್ಯುಂಡೈ ಸ್ಟಾರಿಯಾ - ಕಿಯಾ ಕಾರ್ನಿವಲ್: ಮೊದಲೇ ಹೇಳಿದಂತೆ ಹ್ಯುಂಡೈ ಸ್ಟಾರಿಯಾ, ಕಿಯಾದ ಕಾರ್ನಿವಲ್ ಪ್ರತಿರೂಪವಾಗಿದೆ. ಸ್ಟಾರಿಯಾ ಮತ್ತು ಕಾರ್ನಿವಲ್ ಎರಡೂ ಹ್ಯುಂಡೈ-ಕಿಯಾ ಎನ್ 3 ಪ್ಲಾಟ್ ಫಾರ್ಮ್ ಅನ್ನು ಆಧರಿಸಿವೆ. ವೆರ್ನಾ ಸೆಡಾನ್‌ನಲ್ಲಿ ನೋಡುವಂತೆ ಅದೇ ವಿನ್ಯಾಸವನ್ನು ಸ್ಟಾರಿಯಾ ಹೊಂದಿದ್ದು, ಸೈಡ್ ಗ್ಲಾಸ್ ಪ್ರದೇಶವು ದೊಡ್ಡದಾಗಿ ಮತ್ತು ಸ್ಟಾರಿಯಾ ಸ್ಲೈಡಿಂಗ್ ಬಾಗಿಲುಗಳನ್ನು ಹೊಂದಿದೆ.

ಹೊಸ ಹ್ಯುಂಡೈ ಸ್ಟಾರಿಯಾ ಲೀಟರ್‌ಗೆ 13 ಕಿ.ಮೀ ಮೈಲೇಜ್ ನೀಡಲಿದ್ದು, ಇದು 2.5 ಟನ್ ತೂಕದ ವಾಹನವಾಗಿದೆ. ಹ್ಯುಂಡೈ ಸ್ಟಾರಿಯಾ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿಲ್ಲ. ಏಕೆಂದರೆ ಕಿಯಾ ಇಂಡಿಯಾ ಈ ಟರ್ಬೊ ಪೆಟ್ರೋಲ್ ಹೈಬ್ರಿಡ್ ಪವರ್ ಟ್ರೇನ್ ಅನ್ನು 4ನೇ ಜೆನ್ ಕಾರ್ನಿವಲ್ ಫೇಸ್ ಲಿಫ್ಟ್ ನೊಂದಿಗೆ ಭಾರತಕ್ಕೆ ತರುವ ಸಾಧ್ಯೆತಗಳು ಹತ್ತಿರದಲ್ಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications