ಈ ಹ್ಯುಂಡೈ ಕಾರಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ: ಇದು ನಿಮಗೆ ಬೇಕು ಅಂದ್ರೆ ಕಾಯಲೇಬೇಕು!

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಮೊದಲ ಕಾಂಪ್ಯಾಕ್ಟ್ ಎಸ್‍ಯುವಿಯಾಗಿ ಬಿಡುಗಡೆಗೊಳಿಸಿದ ವೆನ್ಯೂ ಮಾದರಿಯು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ ಹ್ಯುಂಡೈ ವೆನ್ಯೂ (Hyundai Venue) ಅನ್ನು 13 ಒಟ್ಟು ರೂಪಾಂತರಗಳಲ್ಲಿ ನೀಡಲಾಗುತ್ತದೆ ಮತ್ತು ಆಯ್ಕೆ ಮಾಡಲು 3 ಎಂಜಿನ್ ಆಯ್ಕೆಗಳಿವೆ.

ಈ ಹ್ಯುಂಡೈ ವೆನ್ಯೂ ಕೆಲವು ಬದಲಾವಣೆಗಳೊಂದಿಗೆ ಹೆಚ್ಚು ಪವರ್ ಫುಲ್ ಆದ ಡೀಸೆಲ್ ಎಂಜಿನ್ ಸೇರಿದಂತೆ ಕೆಲವು ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಇದೀಗ ಹ್ಯುಂಡೈ ವೆನ್ಯೂ ಮಾದರಿಗೆ ಈ ಮಾರ್ಚ್ ಕಾಯುವ ಅವಧಿಯ ಮಾಹಿತಿಗಳು ಬಹಿರಂಗವಾಗಿದೆ. ಈ ಹ್ಯುಂಡೈ ವೆನ್ಯೂ ಎಸ್‍ಯುವಿಗೆ 12 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಇದು ಎಂಟ್ರಿ ಲೆವೆಲ್ ಪೆಟ್ರೋಲ್ E MT ರೂಪಾಂತರಕ್ಕೆ ಅನ್ವಯಿಸುತ್ತದೆ.

Hyundai Venue

ಡೀಸೆಲ್ ರೂಪಾಂತರಗಳನ್ನು ಆಯ್ಕೆ ಮಾಡುವ ಗ್ರಾಹಕರು 10 ವಾರಗಳವರೆಗೆ ಕಾಯಬೇಕಾಗುತ್ತದೆ, ಆದರೆ ಪೆಟ್ರೋಲ್ ಕೌಂಟರ್ಪಾರ್ಟ್ಸ್ ಆರು ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿರುತ್ತದೆ. ಇನ್ನು ಹ್ಯುಂಡೈ ವೆನ್ಯೂ ಎಸ್‍ಯುವಿಗೆ ಈ ತಿಂಗಳ ಅಂತ್ಯದವರೆಗೆ ರೂ.30,000 ವರೆಗಿನ ರಿಯಾಯಿತಿಯನ್ನು ನೀಡುತ್ತಿದೆ. ಹ್ಯುಂಡೈ ಈಗ ಮಿಡ್-ಸ್ಪೆಕ್ S(O) ಟ್ರಿಮ್ ಮಟ್ಟದಿಂದ 6 ಏರ್‌ಬ್ಯಾಗ್‌ಗಳನ್ನು ನೀಡುತ್ತಿದೆ.

ವೆನ್ಯೂ ಎಸ್‍ಯುವಿಯಲ್ಲಿ ಕೆಲವು ಫೀಚರ್ಸ್ ಗಳನ್ನು ಈಗ ಟಾಪ್ ಸ್ಪೀಡ್ SX(O) ರೂಪಾಂತರದಲ್ಲಿ ಬಂದಿದೆ. SX(O) ರೂಪಾಂತರದಲ್ಲಿರುವ ಪ್ರತ್ಯೇಕವಾಗಿ ಹಿಂದಿನ ಸೀಟ್ ರಿಕ್ಲೈನೇಶನ್, ಮತ್ತು ಕಪ್ ಹೋಲ್ಡರ್‌ನೊಂದಿಗೆ ಆರ್ಮ್‌ರೆಸ್ಟ್‌ನಂತಹ ಕೆಲವು ಪ್ರಮುಖ ಫೀಚರ್ಸ್ ಗಳಾಗಿವೆ. ಈ ಎಸ್‍ಯುವಿಯಲ್ಲಿ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ.

Hyundai Venue

ಈ ವೆನ್ಯೂ ಎಸ್‍ಯುವಿಯಲ್ಲಿ ಎಲ್ಇಡಿ ಟೈಲ್‌ಲೈಲ್, ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಜೊತೆಗೆ ಸ್ಕೂಪ್-ಔಟ್‌ನೊಂದಿಗೆ ಹಿಂಭಾಗದ ಬಂಪರ್ ಮತ್ತು ನಂಬರ್ ಪ್ಲೇಟ್ ವಿಭಾಗವನ್ನು ಬ್ಲ್ಯಾಕ್ ಬಣ್ಣದ ಪ್ಲಾಸ್ಟಿಕ್‌ನೊಂದಿಗೆ ಜೋಡಿಸಲಾಗಿದೆ. ವೆನ್ಯೂ ಎಸ್‍ಯುವಿಯಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗೆ ಬೆಂಬಲ ನೀಡುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಡಿಜಿಟಲ್ ಡ್ರೈವರ್‌ ಸೈಡ್ ಡಿಸ್ ಪ್ಲೇ ನೀಡಲಾಗಿದೆ.

ಇನ್ನು ಈ ಎಸ್‍ಯುವಿಯಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂ ಗೂಗಲ್ ಅಸಿಸ್ಟ್ ಮತ್ತು ಅಮೆಜಾನ್ ಅಲೆಕ್ಸಾಗೆ ಬೆಂಬಲ ಹೊಂದಿದ್ದು, ಹ್ಯುಂಡೈ ಕಂಪನಿಯು ಬ್ಲೂಲಿಂಕ್ ಕನೆಕ್ಟಿವಿಟಿ ಕಾರ್ ಸೂಟ್ ಮೂಲಕ 60ಕ್ಕೂ ಹೆಚ್ಚು ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ನೀಡಿದೆ. ಇನ್ನು ಡ್ರೈವರ್ ಸೈಡ್ ಡಿಜಿಟಲ್ ಡಿಸ್‌ಪ್ಲೇ, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಕೂಲ್ಡ್ ಗ್ಲೋ ಬಾಕ್ಸ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಸನ್‌ರೂಫ್ ಅನ್ನು ಒಳಗೊಂಡಿದೆ.

Hyundai Venue

ಈ ವೆನ್ಯೂ ಇಂಟಿರಿಯರ್ ನಲ್ಲಿ 4 ಹಂತದಲ್ಲಿ ಹೊಂದಾಣಿಕೆ ಮಾಡಹುದಾದ ಚಾಲಕನ ಸೀತ್ ಮತ್ತು ಹಿಂಬದಿಯ ಸೀಟುಗಳಿಗೆ ಎರಡು ಹಂತದ ರಿಕ್ಲೈನ್ ಆಯ್ಕೆ ನೀಡಲಾಗಿದೆ. ಇದರ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗೆ ಬೆಂಬಲ ನೀಡುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಹೊಸ ವೆನ್ಯೂ ಎಸ್‍ಯುವಿಯಲ್ಲಿ ಡಿಜಿಟಲ್ ಡ್ರೈವರ್‌ ಸೈಡ್ ಡಿಸ್ ಪ್ಲೇಯನ್ನು ನೀಡಿದೆ.

ಹೊಸ ವೆನ್ಯೂ ಎಸ್‍ಯುವಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌ ಅನ್ನು ನೀಡಲಾಗಿದೆ. ಇದು ಕ್ರೆಟಾದಂತೆಯೇ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುವಂತೆ ಅಪ್ಡೇಟ್ ಮಾಡಲಾಗಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಬದಲಿಗೆ, ವೆನ್ಯೂ ಡೀಸೆಲ್ ಈಗ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಈ ಹ್ಯುಂಡೈ ಎಸ್‍ಯುವಿಯ ಎಂಜಿನ್ 113.5 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇತರ ಎಂಜಿನ್ ಆಯ್ಕೆಗಳಲ್ಲಿ 1.2-ಲೀಟರ್ ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಸೇರಿವೆ. ಇದರಲ್ಲಿ 1.2-ಲೀಟರ್ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

1.2 ಲೀಟರ್ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಆದರೆ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ iMT ಅಥವಾ 7-ಸ್ಪೀಡ್ DCT ಯೊಂದಿಗೆ ನೀಡಲಾಗುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿರುವ ಹುಂಡೈ ಕ್ರೆಟಾ ಡೀಸೆಲ್‌ಗಿಂತ ಭಿನ್ನವಾಗಿದೆ. ಈ ಎಸ್‌ಯುವಿಯ ಡೀಸೆಲ್ ರೂಪಾಂತರವು ಪ್ರತ್ಯೇಕವಾಗಿ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ನೀಡಿದೆ.

Article Published On: Monday, March 18, 2024, 18:53 [IST]
English summary
New hyundai venue waiting period in march 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+