ಲಕ್ಷುರಿ ಫೀಚರ್ಸ್‌ಗಳ ಅತ್ಯುತ್ತಮ ಕಾರು: ಬಿರುಗಾಳಿ ಎಬ್ಬಿಸಲು ರೆಡಿಯಾದ ಕಿಯಾದ ಮದಗಜ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ತನ್ನ ಜನಪ್ರಿಯ ಕಿಯಾ ಕಾರ್ನಿವಲ್ ಕಾರನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಜನರೇಷನ್ ಕಿಯಾ ಕಾರ್ನಿವಲ್ ( Kia Carnival) ಮಾದರಿಯು 2024ರ ಅಕ್ಟೋಬರ್ 3 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಕಾರಿನ ಜೊತೆಗೆ ಕಿಯಾ ತನ್ನ ಹೊಸ EV9 ಎಲೆಕ್ಟ್ರಿಕ್ ಕಾರನ್ನು ಕೂಡ ಬಿಡುಗಡೆಗೊಳಿಸಲಿದೆ. ಹೊಸ ಕಾರ್ನಿವಲ್ ಅನ್ನು 2023 ಆಟೋ ಎಕ್ಸ್‌ಪೋದಲ್ಲಿ KA4 ಕಾನ್ಸೆಪ್ಟ್ ಮಾದರಿಯಾಗಿ ಪ್ರದರ್ಶಿಸಿದ್ದರು. ಇದೀಗ ಕಿಯಾ ಇಂಡಿಯಾ ತನ್ನ ಹೊಸ ಕಾರ್ನಿವಲ್‌ಗಾಗಿ ಪ್ರೀ-ಲಾಂಚ್ ಬುಕಿಂಗ್ ದಿನಾಂಕವನ್ನು ಪ್ರಕಟಿಸಿದೆ.
ಹೊಸ ಕಿಯಾ ಕಾರ್ನಿವಲ್ (Kia Carnival) ಪ್ರೀಮಿಯಂ ಎಂಪಿವಿಯ ಬುಕ್ಕಿಂಗ್ 2024ರ ಸೆಪ್ಟೆಂಬರ್ 16 ರಂದು ಬುಕಿಂಗ್ ಪ್ರಾರಂಭವಾಗುತ್ತದೆ. ಭಾರತದಾದ್ಯಂತ ಕಿಯಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಅಥವಾ ಸೆಪ್ಟೆಂಬರ್ 16 ರಂದು ಬೆಳಿಗ್ಗೆ 12 ಗಂಟೆಯಿಂದ ಅಧಿಕೃತ ಕಿಯಾ ವೆಬ್‌ಸೈಟ್ ಮೂಲಕ ಟೋಕನ್ ಮೊತ್ತ 2 ಲಕ್ಷ ರೂ. ಪಾವತಿಸಿ ಬುಕ್ ಮಾಡಬಹುದು. ಈ ಹೊಸ ಕಿಯಾ ಕಾರ್ನಿವಲ್ ಹಲವಾರು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ.

ಇತ್ತೀಚೆಗೆ ಕ್ಯಾಮೋ ಫ್ಲಾಗ್ ಇಲ್ಲದೆ ಭಾರತೀಯ ಹೆದ್ದಾರಿಗಳಲ್ಲಿ ಕಿಯಾ ಈ ಕಾರ್ನಿವಲ್ ಪರೀಕ್ಷಾರ್ಥ ಚಾಲನೆಯನ್ನು ನಡೆಸುತ್ತಿದ್ದು ಇದು ಕ್ಯಾಮರಾ ಕಣ್ಣಿಗೆ ಸೆರೆಯಾಗಿತ್ತು. 2024ರ ಕಿಯಾ ಕಾರ್ನಿವಲ್ ಕಾರಿನ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಹೊಸ ಕಿಯಾ ಕಾರ್ನಿವಲ್ ಕಾರಿನಲ್ಲಿ ಅದೇ 2.2 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.
ಈ ಎಂಜಿನ್ 200 PS ಗರಿಷ್ಠ ಪವರ್ ಹಾಗೂ 440 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಹೊಸ ಕಿಯಾ ಕಾರ್ನಿವಲ್ ಈ ಎಂಪಿವಿಯು ಸಂಪೂರ್ಣವಾಗಿ ಪರಿಷ್ಕೃತ ಮುಂಭಾಗದ ಫಾಸಿಕವನ್ನು ಹೊಂದಿದ್ದು, ಹೊಸದಾಗಿ ವಿನ್ಯಾಸಗೊಳಿಸಿದ ಗ್ರಿಲ್, ಟ್ವೀಕ್ ಮಾಡಿದ ಬಂಪರ್ ಮತ್ತು LED DRL ಗಳೊಂದಿಗೆ ಹೊಸ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿರುತ್ತದೆ.

ಇದರ ಪೂರ್ವವರ್ತಿಗೆ ಹೋಲಿಸಿದರೆ, ಹೊಸ ಮಾದರಿಯು ಒಟ್ಟಾರೆ 5,156mm ಉದ್ದದೊಂದಿಗೆ ಬರಲಿದೆ. 2024ರ ಕಿಯಾ ಕಾರ್ನಿವಲ್ ಕಾರಿನ ಒಳಭಾಗದಲ್ಲಿ, ಹೊಸ ಕಾರ್ನಿವಲ್ 12.3-ಇಂಚಿನ ಯುನಿಟ್ ಗಳೊಂದಿಗೆ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು ಹೊಂದಿರುತ್ತದೆ. ಇದು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೋಟರಿ ಡ್ರೈವ್ ಸೆಲೆಕ್ಟರ್ ಮತ್ತು ಪರಿಷ್ಕೃತ ಎಸಿ ಮತ್ತು ಆಡಿಯೊ ಕಂಟ್ರೋಲ್ ಗಳನ್ನು ಸೆಂಟ್ರಲ್ ಡಿಸ್ ಪ್ಲೇ ಕೆಳಗೆ ಇರಿಸಲಾಗುತ್ತದೆ.
ಇದರೊಂದಿಗೆ ಹೆಡ್-ಅಪ್ ಡಿಸ್ಪ್ಲೇ, ಫ್ರಂಟ್ ಮತ್ತು ರಿಯರ್ ಡ್ಯಾಶ್ ಕ್ಯಾಮ್‌ಗಳು, ನವೀಕರಿಸಿದ ಡಿಜಿಟಲ್ ಕೀ, ಡಿಜಿಟಲ್ ರಿಯರ್‌ವ್ಯೂ ಮಿರರ್, ಆಂಬಿಯೆಂಟ್ ಲೈಟಿಂಗ್ ಮತ್ತು ಆಯ್ಕೆಯ 14.6-ಇಂಚಿನ ಹಿಂಭಾಗದ ಮನರಂಜನಾ ಡಿಸ್ ಪ್ಲೇಯ ವೈಶಿಷ್ಟ್ಯಗಳು ಸಹ ಕೊಡುಗೆಯಲ್ಲಿರುತ್ತವೆ. ಹೊಸ ಕಾರ್ನೀವಲ್‌ಗಾಗಿ ಜಾಗತಿಕವಾಗಿ ಬಹು ಸೀಟುಗಳ ಸಂರಚನೆಗಳು ಲಭ್ಯವಿವೆ. ಆದರೆ ಭಾರತದಲ್ಲಿ ಯಾವ ಸಂರಚನೆಗಳಲ್ಲಿ ನೀಡಲಾಗುವುದು ಎಂಬುದು ಸ್ಪಷ್ಟವಾಗಿಲ್ಲ.
ಸ್ವಲ್ಪ ಪರಿಷ್ಕೃತ ಟೈಲ್‌ಲ್ಯಾಂಪ್‌ಗಳು, ಮೆಟಾಲಿಕ್ ಟ್ರಿಮ್‌ನೊಂದಿಗೆ ಕಿರಿದಾದ ಲ್ಯಾಂಪ್ ಗಳನ್ನು ಹೊಂದಿರುವ ಹಿಂಭಾಗದ ಬಂಪರ್ ಮತ್ತು ಮರುಸ್ಥಾನಗೊಳಿಸಲಾದ ಲೋಗೋ ಮತ್ತು ಲೈಸೆನ್ಸ್ ಪ್ಲೇಟ್ ಸೇರಿದಂತೆ ಹಿಂಭಾಗದ ತುದಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಸಹ ಮಾಡಲಾಗುತ್ತದೆ. ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿದ್ದ ಕಿಯಾ ಕಾರ್ನಿವಲ್ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯು ತುಸು ದುಬಾರಿಯಾಗಿರಬಹುದು.
ಇನ್ನು ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಇದರಿಂದ ಕಿಯಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಭಾರತದಲ್ಲಿ ಮೂರು-ಸಾಲಿನ ಎಲೆಕ್ಟ್ರಿಕ್ ಎಸ್‍ಯುವಿ ಕಿಯಾ ಅನ್ನು ಬಿಡುಗಡೆಗೊಳಿಸಲು ರೆಡಿಯಾಗಿದೆ.


Click it and Unblock the Notifications








