ಬಿಡುಗಡೆಗೆ ಸಜ್ಜಾಗುತ್ತಿದೆ ಕಿಯಾ ಕಂಪನಿಯ ಮದಗಜ: ಲಕ್ಷುರಿ ಫೀಚರ್ಸ್‌ಗಳ ದೈತ್ಯ ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ತನ್ನ ನವೀಕರಿಸಿದ ಕಿಯಾ ಕಾರ್ನಿವಲ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಕಿಯಾ ಕಾರ್ನಿವಲ್ ಮಾದರಿಯು ಅಕ್ಟೋಬರ್‌ನಲ್ಲಿ ಮಾರಾಟವಾಗಲಿದೆ ಎಂದು ವರದಿಯಾಗಿದೆ ಮತ್ತು ಈ ಕಾರಿನ ವಿತರಣೆಯು ದೀಪಾವಳಿ ಹಬ್ಬದ ಮೊದಲು ಪ್ರಾರಂಭವಾಗಬಹುದು. CBU (ಸಂಪೂರ್ಣವಾಗಿ ಬಿಲ್ಟ್-ಅಪ್) ಯುನಿಟ್ ಆಗಿರುವುದರಿಂದ, ಇದರ ಬೆಲೆಯು 50 ಲಕ್ಷಕ್ಕಿಂತ ಹೆಚ್ಚು ಬೆಲೆಯದ್ದಾಗಿರಬಹುದು ಮತ್ತು ದೇಶದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿರುವುದಿಲ್ಲ. ಹೊಸ ಕಾರ್ನಿವಲ್ ಅನ್ನು 2023 ಆಟೋ ಎಕ್ಸ್‌ಪೋದಲ್ಲಿ KA4 ಕಾನ್ಸೆಪ್ಟ್ ಮಾದರಿಯಾಗಿ ಪ್ರದರ್ಶಿಸಿದ್ದರು.
ನಿಮಗೆಲ್ಲಾ ತಿಳಿದಿರುವಂತೆ ಕಿಯಾ ಕಾರ್ನಿವಲ್ (Kia Carnival) ಕಾರು ಮಾದರಿಯ ಫೇಸ್‌ಲಿಫ್ಟ್ ಅನ್ನು ಅಭಿವೃದ್ದಿಪಡಿಸುತ್ತಿದ್ದು ಈಗಾಗಲೇ ಈ ಸುದ್ದಿ ಎಲ್ಲೆಡೆಯೂ ಹರಿದಾಡಿದೆ. ಆದರೆ ಇದೇ ಮೊದಲ ಬಾರಿಗೆ ಕ್ಯಾಮೋ ಫ್ಲಾಗ್ ಇಲ್ಲದೆ ಭಾರತೀಯ ಹೆದ್ದಾರಿಗಳಲ್ಲಿ ಕಿಯಾ ಈ ಕಾರ್ನಿವಲ್ ಪರೀಕ್ಷಾರ್ಥ ಚಾಲನೆಯನ್ನು ನಡೆಸುತ್ತಿದ್ದು ಇದು ಕ್ಯಾಮರಾ ಕಣ್ಣಿಗೆ ಸೆರೆಯಾಗಿತ್ತು.

2024ರಯಾ ಕಾರ್ನಿವಲ್ ಕಾರಿನ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಎಂಪಿವಿಯು ಸಂಪೂರ್ಣವಾಗಿ ಪರಿಷ್ಕೃತ ಮುಂಭಾಗದ ಫಾಸಿಕವನ್ನು ಹೊಂದಿದ್ದು, ಹೊಸದಾಗಿ ವಿನ್ಯಾಸಗೊಳಿಸಿದ ಗ್ರಿಲ್, ಟ್ವೀಕ್ ಮಾಡಿದ ಬಂಪರ್ ಮತ್ತು LED DRL ಗಳೊಂದಿಗೆ ಹೊಸ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿರುತ್ತದೆ. ಅದರ ಪೂರ್ವವರ್ತಿಗೆ ಹೋಲಿಸಿದರೆ, ಹೊಸ ಮಾದರಿಯು ಒಟ್ಟಾರೆ 5,156mm ಉದ್ದದೊಂದಿಗೆ ಬರಲಿದೆ.
ಸ್ವಲ್ಪ ಪರಿಷ್ಕೃತ ಟೈಲ್‌ಲ್ಯಾಂಪ್‌ಗಳು, ಮೆಟಾಲಿಕ್ ಟ್ರಿಮ್‌ನೊಂದಿಗೆ ಕಿರಿದಾದ ಲ್ಯಾಂಪ್ ಗಳನ್ನು ಹೊಂದಿರುವ ಹಿಂಭಾಗದ ಬಂಪರ್ ಮತ್ತು ಮರುಸ್ಥಾನಗೊಳಿಸಲಾದ ಲೋಗೋ ಮತ್ತು ಲೈಸೆನ್ಸ್ ಪ್ಲೇಟ್ ಸೇರಿದಂತೆ ಹಿಂಭಾಗದ ತುದಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಸಹ ಮಾಡಲಾಗುತ್ತದೆ. ಈ ಕಾರಿನ ಒಳಭಾಗದಲ್ಲಿ, ಹೊಸ ಕಾರ್ನಿವಲ್ 12.3-ಇಂಚಿನ ಯುನಿಟ್ ಗಳೊಂದಿಗೆ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು ಹೊಂದಿರುತ್ತದೆ.

ಇದು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೋಟರಿ ಡ್ರೈವ್ ಸೆಲೆಕ್ಟರ್ ಮತ್ತು ಪರಿಷ್ಕೃತ ಎಸಿ ಮತ್ತು ಆಡಿಯೊ ಕಂಟ್ರೋಲ್ ಗಳನ್ನು ಸೆಂಟ್ರಲ್ ಡಿಸ್ ಪ್ಲೇ ಕೆಳಗೆ ಇರಿಸಲಾಗುತ್ತದೆ. ಹೆಡ್-ಅಪ್ ಡಿಸ್ಪ್ಲೇ, ಫ್ರಂಟ್ ಮತ್ತು ರಿಯರ್ ಡ್ಯಾಶ್ ಕ್ಯಾಮ್‌ಗಳು, ನವೀಕರಿಸಿದ ಡಿಜಿಟಲ್ ಕೀ, ಡಿಜಿಟಲ್ ರಿಯರ್‌ವ್ಯೂ ಮಿರರ್, ಆಂಬಿಯೆಂಟ್ ಲೈಟಿಂಗ್ ಮತ್ತು ಆಯ್ಕೆಯ 14.6-ಇಂಚಿನ ಹಿಂಭಾಗದ ಮನರಂಜನಾ ಡಿಸ್ ಪ್ಲೇಯ ವೈಶಿಷ್ಟ್ಯಗಳು ಸಹ ಕೊಡುಗೆಯಲ್ಲಿರುತ್ತವೆ.
ಈ ಕಿಯಾ ಕಾರ್ನಿವಲ್ ಕಾರಿನಲ್ಲಿ ಅದೇ 2.2 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 200 PS ಗರಿಷ್ಠ ಪವರ್ ಹಾಗೂ 440 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿದ್ದ ಕಿಯಾ ಕಾರ್ನಿವಲ್ ಬಗ್ಗೆ ನೊಡುವುದಾದರೆ, ಭಾರತದಲ್ಲಿ ಕಿಯಾ ಕಾರ್ನಿವಲ್ ರೂ.30.99 ಲಕ್ಷದಿಂದ ರೂ.35.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿತ್ತು ಹಾಗೂ ಏಳು ಆಸನ ವ್ಯವಸ್ಥೆಯಲ್ಲಿ ಮೂರು ರೂಪಾಂತರದಲ್ಲಿ ಸಿಗುತ್ತಿತ್ತು. ಇನ್ನು ಇದಕ್ಕಿಂತಲೂ ಮುಂಚೆ ಕಿಯಾ ಕಂಪನಿಯು ಕಾರೆನ್ಸ್ ಫೇಸ್‌ಲಿಫ್ಟ್ ಅನ್ನು ಸಹ ಲಾಂಚ್ ಮಾಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








