ಜನಸಾಮಾನ್ಯರ ಅಂಬಾರಿ: ಬೆಸ್ಟ್ 5-ಸೀಟರ್, ಲಕ್ಷುರಿ ಫೀಚರ್ಸ್‌ನ ಕಿಯಾ ಕಾರು ಬಿರುಗಾಳಿ ಎಬ್ಬಿಸಲು ಸಜ್ಜು
ಕಿಯಾ ಮೋಟಾರ್ಸ್ (Kia Motors) ಭಾರತದಲ್ಲಿ ಜನಪ್ರಿಯ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಾರು ತೆಗೆದುಕೊಳ್ಳಬೇಕು ಎಂಬ ಮಧ್ಯಮ ವರ್ಗದ ಜನರ ಕನಸನ್ನು ನನಸು ಮಾಡಲು ಕಿಯಾ ಕಂಪನಿಯು ಹೊಚ್ಚ ಹೊಸ 'ಸೈರಸ್' ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಈ ಕಾರು ನೀರಿಕ್ಷೆಗೂ ಮೀರಿದ ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಶೀಘ್ರದಲ್ಲಿಯೇ ಅತಿಕಡಿಮೆ ಬೆಲೆಗೆ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಈ ನೂತನ ಕಿಯಾ ಸೈರಸ್ (Kia Syros) ಎಸ್‌ಯುವಿಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ. ಹೊಸ ಕಿಯಾ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ 2025ರ ಜನವರಿ 3 ರಿಂದ ಪ್ರಾರಂಭವಾಗಲಿದೆ.
ಕಿಯಾ ಎಸ್‍ಯುವಿಯ ವಿತರಣೆಯು ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಈ ಹೊಸ ಯಾ ಸೈರಸ್ ಎಸ್‌ಯುವಿಯು ಅರೋರಾ ಬ್ಲ್ಯಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್, ಫ್ರಾಸ್ಟ್ ಬ್ಲೂ, ಪ್ಯೂಟರ್ ಆಲಿವ್, ಇಂಟೆನ್ಸ್ ರೆಡ್, ಇಂಪೀರಿಯಲ್ ಬ್ಲೂ, ಗ್ರಾವಿಟಿ ಗ್ರೇ ಮತ್ತು ಸ್ಪಾರ್ಕ್ಲಿಂಗ್ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಕಿಯಾ ಸೈರಸ್ ಎಸ್‌ಯುವಿ ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಹಾಗೂ ಹೆಚ್‌ಟಿಎಕ್ಸ್ ಪ್ಲಸ್ (ಒ) ಎಂಬ ಆಕರ್ಷಕ ರೂಪಾಂತರಗಳ ಆಯ್ಕೆಯನ್ನು ಹೊಂದಿದೆ. ಕಿಯಾ ಸೈರಸ್ ಎಸ್‌ಯುವಿ ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸ ಹೊಂದಿದ್ದು, ಈ ಎಸ್‍ಯುವಿಯು 3-ಪಾಡ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್' ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ.
ಇದರೊಂದಿಗೆ ಫ್ಲಾಟ್ ಟೈಲ್‌ಗೇಟ್, 17-ಇಂಚಿನ ಅಲಾಯ್ ವೀಲ್‌ಗಳು, ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಮತ್ತು ಪನೊರೊಮಿಕ್ ಸನ್‌ರೂಫ್ ಅನ್ನು ಪಡೆದುಕೊಂಡಿದೆ. ಕಿಯಾ ಸೈರಸ್ ಎಸ್‌ಯುವಿಯಲ್ಲಿ ಎರಡು ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಇದರಲ್ಲಿ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಪಿಎಸ್ ಪವರ್ ಹಾಗೂ 172 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ ಆಗಿದೆ. ಈ ಎಂಜಿನ್ 116 ಪಿಎಸ್ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಹಾಗೂ 6-ಸ್ಪೀಡ್ ಎಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಇನ್ನು ಈ ಎಸ್‍ಯುವಿಯ ಮೈಲೇಜ್ ಕುರಿತಂತೆ ಯಾವುದೇ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಈ ಸೈರಸ್ ಎಸ್‌ಯುವಿಯಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡ್ರೈವರ್ಸ್ ಡಿಸ್‌ಪ್ಲೇಗಾಗಿ 12.3-ಇಂಚಿನ ಡುಯಲ್ ಸ್ಕ್ರೀನ್ ಸೆಟಪ್, ಡುಯಲ್-ಜೋನ್ ಎಸಿ, 4-ವೇ ಪವರ್ಡ್ ಡ್ರೈವರ್ ಸೀಟ್, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ & ರೇರ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಅಪ್/ ಡೌನ್ ಪವರ್ ವಿಂಡೋಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಕಿಯಾ ಸೈರಸ್ ಎಸ್‌ಯುವಿಯ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತವೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್ - 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಹೊಸ ಸೈರಸ್ ಎಸ್‌ಯುವಿಗೆ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಗಳಿಗೆ ನೇರ ಪ್ರತಿಸ್ಪರ್ಧಿಯಾಗಿವೆ.
ಸದ್ಯಕ್ಕೆ ಈ ಹೊಚ್ಚ ಹೊಸ ಕಿಯಾ ಸೈರಸ್ ಎಸ್‌ಯುವಿ ಬೆಲೆಯನ್ನು ಘೋಷಣೆ ಮಾಡಲಾಗಿಲ್ಲ. ಅದರ ಬಗ್ಗೆ ಮುಂಬರುವ ದಿನಗಳಲ್ಲಿ ಕಂಪನಿಯು ಮಾಹಿತಿ ನೀಡಲಿದೆ. ಈ ಕಾರು ಕೈಗೆಟುಕುವ ಬೆಲೆಗೆ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಸುಮಾರು ರೂ.9 ಲಕ್ಷ ಎಕ್ಷ ಶೋರೂಂ ಬೆಲೆಯನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಹೊಸ ಕಿಯಾ ಸೈರಸ್ 5-ಸೀಟರ್ ಎಸ್‍ಯುವಿಯಾಗಿದೆ.


Click it and Unblock the Notifications








