ಜನಸಾಮಾನ್ಯರ ಅಂಬಾರಿ: ಲಕ್ಷುರಿ ಫೀಚರ್ಸ್‌ನೊಂದಿಗೆ ಬರುತ್ತಿದೆ ಹೊಸ ಕಿಯಾ ಕಾರು

ಕಿಯಾ ಮೋಟಾರ್ಸ್ (Kia Motors) ಭಾರತದಲ್ಲಿ ಜನಪ್ರಿಯ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಾರು ತೆಗೆದುಕೊಳ್ಳಬೇಕು ಎಂಬ ಮಧ್ಯಮ ವರ್ಗದ ಜನರ ಕನಸನ್ನು ನನಸು ಮಾಡಲು ಕಿಯಾ ಕಂಪನಿಯು ಹೊಚ್ಚ ಹೊಸ 'ಸೈರಸ್' ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಈ ಕಾರು ನೀರಿಕ್ಷೆಗೂ ಮೀರಿದ ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಶೀಘ್ರದಲ್ಲಿಯೇ ಅತಿಕಡಿಮೆ ಬೆಲೆಗೆ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಈ ನೂತನ ಕಿಯಾ ಸೈರಸ್ (Kia Syros) ಎಸ್‌ಯುವಿಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ. ಹೊಸ ಕಿಯಾ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ 2025ರ ಜನವರಿ 3 ರಿಂದ ಪ್ರಾರಂಭವಾಗಲಿದೆ.

ಕಿಯಾ ಎಸ್‍ಯುವಿಯ ವಿತರಣೆಯು ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಈ ಹೊಸ ಕಿಯಾ ಸೈರಸ್ ಎಸ್‌ಯುವಿಯು ಅರೋರಾ ಬ್ಲ್ಯಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್, ಫ್ರಾಸ್ಟ್ ಬ್ಲೂ, ಪ್ಯೂಟರ್ ಆಲಿವ್, ಇಂಟೆನ್ಸ್ ರೆಡ್, ಇಂಪೀರಿಯಲ್ ಬ್ಲೂ, ಗ್ರಾವಿಟಿ ಗ್ರೇ ಮತ್ತು ಸ್ಪಾರ್ಕ್ಲಿಂಗ್ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹೊಸ ಕಿಯಾ ಸೈರಸ್ ಎಸ್‌ಯುವಿಯ ಪ್ರಮುಖ ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.

Kia Syros

AC ಗಾಗಿ 5 ಇಂಚಿನ ಡಿಸ್ ಪ್ಲೇ: ಈ ಹೊಸ ಕಿಯಾ ಸೈರಸ್ ಎಸ್‍ಯುವಿಯಲ್ಲಿ 30-ಇಂಚಿನ ಇನ್ಸ್ಟ್ರುಮೆಂಟ್ ಪ್ಯಾನೆಲ್ ಡ್ರೈವರ್ ಕ್ಲಸ್ಟರ್, ಮೈನ್ ಇನ್ಫೋಟೈನ್ಮೆಂಟ್ ಡಿಸ್ ಪ್ಲೇ ಮತ್ತು ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂಗಾಗಿ ಮೀಸಲಾದ 5-ಇಂಚಿನ ಡಿಸ್ ಪ್ಲೇಯನ್ನು ಒಳಗೊಂಡಿದೆ. ಈ ಫೀಚರ್ ಅತ್ಯಂತ ಪ್ರಯೋಜನಕಾರಿಯಾಗಿದೆ ಮತ್ತು ಆಕರ್ಷಕವಾಗಿದೆ.

ADAS ಲೆವೆಲ್ 2: ಈ ಹೊಸ ಕಿಯಾ ಸೈರಸ್ ಎಸ್‌ಯುವಿಯು ADAS ಲೆವೆಲ್ 2 ನೊಂದಿಗೆ ಬರುತ್ತಿದೆ. ಈ ಎಸ್‍ಯುವಿಯಲ್ಲಿ 16 ಡ್ರೈವರ್ ಅಸಿಸ್ಟ್ ಫಂಕ್ಷಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಫ್ರಂಟ್ ಕೊಲಿಷನ್ ವಾರ್ನಿಂಗ್ ವಿಥ್ ಅವೈಡ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಹೆಚ್ಚಿನವುಗಳನ್ನು ಹೊಂದಿವೆ.

Kia Syros

ರೇರ್ ಸೀಟ್ ವೆಂಟಿಲೆಷನ್: ಕಿಯಾ ಸೈರಸ್ ಎಸ್‌ಯುವಿಯ ಮುಂಭಾಗ ಮತ್ತು ಹಿಂಭಾಗದ ಸೀಟುಗಳಿಗೆ ಕೂಲಿಂಗ್ ಪಂಕ್ಷನ್ ಅನ್ನು ಹೊಂದಿದೆ. ಈ ವಿಭಾಗದಲ್ಲಿ ಅನೇಕ ಕಾರುಗಳ ಮುಂಭಾಗದಲ್ಲಿ ವೆಂಟಿಲೆಷನ್ ಸೀಟ್‌ಗಳನ್ನು ನಾವು ನೋಡಿದ್ದೇವೆ ಆದರೆ ಸೈರಸ್ ನೀವು ಹಿಂಭಾಗದ ಸೀಟುಗಳಿಗೂ ಕೂಡ ಕೂಲಿಂಗ್ ಫಂಕ್ಷನ್ ಅನ್ನು ಪಡೆಯುತ್ತೀರಿ.

ಪನರೊಮಿಕ್ ಸನ್‌ರೂಫ್ ಮತ್ತು ಹಿಂದಿನ ಸೀಟುಗಳಿಗೆ ಬಹು ಹೊಂದಾಣಿಕೆಗಳು: ಕಿಯಾ ಸೈರಸ್ ಎಸ್‌ಯುವಿಯ ಸೆಲ್ಟೋಸ್‌ನಂತೆಯೇ ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರುತ್ತದೆ. ಇದು ಕ್ಯಾಬಿನ್‌ನ ಹಿಂಭಾಗದವರೆಗೂ ವಿಸ್ತರಿಸುತ್ತದೆ. ಹೊಸ ಕಿಯಾ ಸೈರಸ್ ಎಸ್‌ಯುವಿಯ ಹಿಂಭಾಗದ ಸೀಟುಗಳನ್ನು ಒರಗಿಸಬಹುದು ಮತ್ತು ಇವುಗಳ ಸ್ಲೈಡಿಂಗ್ ಆಯ್ಕೆಯನ್ನು ಸಹ ಹೊಂದಿವೆ.

Kia Syros

ಈ ಕಿಯಾ ಸೈರಸ್ ಎಸ್‌ಯುವಿ ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಹಾಗೂ ಹೆಚ್‌ಟಿಎಕ್ಸ್ ಪ್ಲಸ್ (ಒ) ಎಂಬ ಆಕರ್ಷಕ ರೂಪಾಂತರಗಳ ಆಯ್ಕೆಯನ್ನು ಹೊಂದಿದೆ. ಕಿಯಾ ಸೈರಸ್ ಎಸ್‌ಯುವಿ ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸ ಹೊಂದಿದ್ದು, ಈ ಎಸ್‍ಯುವಿಯು 3-ಪಾಡ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್' ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ.

ಇದರೊಂದಿಗೆ ಫ್ಲಾಟ್ ಟೈಲ್‌ಗೇಟ್, 17-ಇಂಚಿನ ಅಲಾಯ್ ವೀಲ್‌ಗಳು, ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಮತ್ತು ಪನೊರೊಮಿಕ್ ಸನ್‌ರೂಫ್ ಅನ್ನು ಪಡೆದುಕೊಂಡಿದೆ. ಕಿಯಾ ಸೈರಸ್ ಎಸ್‌ಯುವಿಯಲ್ಲಿ ಎರಡು ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಇದರಲ್ಲಿ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಪಿಎಸ್ ಪವರ್ ಹಾಗೂ 172 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ ಆಗಿದೆ. ಈ ಎಂಜಿನ್ 116 ಪಿಎಸ್ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಹಾಗೂ 6-ಸ್ಪೀಡ್ ಎಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

More from DriveSpark

Article Published On: Friday, December 27, 2024, 17:51 [IST]
English summary
New kia syros suv top features details
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+