ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಹೊಸ ಪವರ್‌ಫುಲ್‌ ಲ್ಯಾಂಬೊರ್ಗಿನಿ ಎಸ್‍ಯುವಿಯ ವಿಶೇಷತೆಗಳು

ಇಟಲಿಯ ಸೂಪರ್‌ಕಾರ್ ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ (Lamborghini) ತನ್ನ ಬಹುನಿರೀಕ್ಷಿತ ಹೊಸ ಉರುಸ್ SE ಪ್ಲಗ್-ಇನ್ ಹೈಬ್ರಿಡ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.ಈ ಹೊಸ ಲ್ಯಾಂಬೊರ್ಗಿನಿ ಉರುಸ್ SE ಪ್ಲಗ್-ಇನ್ ಹೈಬ್ರಿಡ್ ಎಸ್‍ಯುವಿ ಮಾದರಿಯು ಹೈಬ್ರಿಡ್ ಪವರ್‌ಟ್ರೇನ್‌ನಿಂದ ಚಾಲಿತವಾಗಿದೆ, ಇದು ಟ್ವಿನ್-ಟರ್ಬೊ ವಿ8 ಅನ್ನು ಎಲೆಕ್ಟ್ರಿಕ್ ಮೋಟಾರ್ ಮತ್ತು ಆನ್-ಬೋರ್ಡ್ ಬ್ಯಾಟರಿ ಪ್ಯಾಕ್‌ನೊಂದಿಗೆ ಸಂಯೋಜಿಸುತ್ತದೆ. ಈ ಹೊಸ ಲ್ಯಾಂಬೊರ್ಗಿನಿ ಉರುಸ್ SE (Lamborghini Urus SE) ಪ್ಲಗ್-ಇನ್ ಹೈಬ್ರಿಡ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.57 ಕೋಟಿಯಾಗಿದೆ.

ಎಂಜಿನ್: ಹೊಸ ಲ್ಯಾಂಬೊರ್ಗಿನಿ ಉರುಸ್ SE ಎಸ್‍ಯುವಿಯಲ್ಲಿ 4.0-ಲೀಟರ್ ಟ್ವಿನ್ ಟರ್ಬೊ V8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 612 bhp ಮತ್ತು 800 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಸಂಯೋಜಿಸಲಾದ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಸಲಾಗಿದ್ದು, ಇದು ಹೆಚ್ಚುವರಿ 189 bhp ಮತ್ತು 483 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Lamborghini Urus SE

ಎಲೆಕ್ಟ್ರಿಕ್ ಪವರ್‌ಟ್ರೇನ್ : ಪ್ಲಗ್-ಇನ್ ಹೈಬ್ರಿಡ್ ಸಿಸ್ಟಂನ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಬೂಟ್ ಫ್ಲೋರ್ ಅಡಿಯಲ್ಲಿ 25.9 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಜೋಡಿಸಲಾಗಿದೆ. ಇದು 60 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಲ್ಯಾಂಬೊರ್ಗಿನಿ ಉರುಸ್ SE ಎಸ್‍ಯುವಿ 3.4 ಸೆಕೆಂಡ್‌ಗಳ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದು ಉರುಸ್ S ಗಿಂತ 0.1 ಸೆಕೆಂಡುಗಳು ವೇಗವಾಗಿರುತ್ತದೆ ಆದರೆ ಉರುಸ್ ಪರ್ಫಾರ್ಮೆಂಟೆಗಿಂತ 0.1 ಸೆಕೆಂಡ್‌ಗಳಷ್ಟು ಹಿಂದಿದೆ. 11.2 ಸೆಕೆಂಡ್‌ಗಳಲ್ಲಿ 0-200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಇನ್ನು ಲ್ಯಾಂಬೊರ್ಗಿನಿ ಎಸ್‍ಯುವಿಯ ಟಾಪ್ ಸ್ಪೀಡ್ 312 ಕಿ.ಮೀ ಆಗಿದೆ. ಈ ಲ್ಯಾಂಬೊರ್ಗಿನಿ ಉರುಸ್ SE ಎಸ್‍ಯುವಿಯು ಟಾರ್ಕ್ ವೆಕ್ಟರಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ, ಇದು ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳ ನಡುವೆ ನಿರಂತರವಾಗಿ ಪವರ್ ಅನ್ನು ವಿತರಿಸುತ್ತದೆ. ಇನ್ನು ಈ ಹೊಸ ಹಿಂದಿನ ಎಲೆಕ್ಟ್ರಾನಿಕ್ ಲಿಮಿಟೆಡ್-ಸ್ಲಿಪ್ ಡಿಫರೆನ್ಷಿಯಲ್ ಕೂಡ ಇದೆ. ಹೆಚ್ಚುವರಿಯಾಗಿ, ಎಸ್‍ಯುವಿ ಇವಿ ಡ್ರೈವ್, ಪರ್ಫಾಮೆನ್ಸ್ ಮತ್ತು ರೀಚಾರ್ಜ್ ಡ್ರೈವ್ ಮೋಡ್‌ಗಳನ್ನು ಸಹ ಪಡೆಯುತ್ತದೆ.

Lamborghini Urus SE

ವಿನ್ಯಾಸ: ಲ್ಯಾಂಬೊರ್ಗಿನಿ ಉರುಸ್ SE ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಎಸ್‍ಯುವಿಯಲ್ಲಿ ಸಿ-ಆಕಾರದ ಡಿಆರ್‌ಎಲ್‌ಗಳಿಂದ ವಿವರಿಸಲ್ಪಟ್ಟ ಮುಂಭಾಗದ ಸ್ಲಿಮ್ಮರ್ ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ ಮತ್ತು ಪರಿಷ್ಕೃತ ಏರ್ ಇನ್‌ಟೇಕ್‌ಗಳೊಂದಿಗೆ ಹೊಸ ಮುಂಭಾಗದ ಬಂಪರ್‌ನೊಂದಿಗೆ ಬರುತ್ತದೆ, ಇದು ಸ್ಟ್ಯಾಂಡರ್ಡ್ ಉರುಸ್‌ಗಿಂತ ದೊಡ್ಡದಾಗಿ ಕಾಣುತ್ತದೆ. ಇ ಎಸ್‍ಯುವಿಯ ಬಾನೆಟ್ ಕೂಡ ಹೊಸದಾಗಿದೆ ಮತ್ತು ಈಗ ಹೆಡ್‌ಲ್ಯಾಂಪ್‌ಗಳನ್ನು ವಿಸ್ತರಿಸಿದೆ.

ಈ ಹೊಸ ಲ್ಯಾಂಬೊರ್ಗಿನಿ ಎಸ್‍ಯುವಿಯಲ್ಲಿ ಅಲಾಯ್ ವೀಲ್‌ಗಳ ಹೊರತಾಗಿ ಬದಿಯಲ್ಲಿ ಸ್ವಲ್ಪ ಬದಲಾಗಿದೆ. ಹಿಂಭಾಗದಲ್ಲಿ ಹೊಸ ಟೈಲ್‌ಗೇಟ್ ಮತ್ತು ಬಂಪರ್ ಅನ್ನು ಪಡೆಯುತ್ತದೆ, ಜೊತೆಗೆ ಇಂಟಿಗ್ರೇಟೆಡ್ ಸ್ಪಾಯ್ಲರ್ ಲಿಪ್‌ನ ಅಡಿಯಲ್ಲಿ ವಾಹನದ ಅಗಲವನ್ನು ವ್ಯಾಪಿಸಿರುವ ಹೊಸ ಅಂಶವನ್ನು ಹೊಂದಿದೆ. ಇನ್ನು ಹೊಸ ಲ್ಯಾಂಬೊರ್ಗಿನಿ ಉರುಸ್ SE ಎಸ್‍ಯುವಿಯ ಒಳಭಾಗವನ್ನು ಸಹ ನವೀಕರಿಸಲಾಗಿದೆ ಮತ್ತು ಪರಿಷ್ಕೃತ ವಿನ್ಯಾಸವನ್ನು ಪಡೆಯುತ್ತದೆ.

Lamborghini Urus SE

ಫೀಚರ್ಸ್: ಲ್ಯಾಂಬೊರ್ಗಿನಿ ಉರುಸ್ SE ಎಸ್‍ಯುವಿಯ ಸೆಂಟ್ರಲ್ ಟಚ್‌ಸ್ಕ್ರೀನ್ ಗಾತ್ರದಲ್ಲಿ ಬೆಳೆದಿದೆ, ಈಗ 12.3 ಇಂಚುಗಳಷ್ಟು ಅಳತೆಯನ್ನು ಹೊಂದಿದೆ. ಕ್ಲೈಮೆಂಟ್ ಕಂಟ್ರೋಲ್ ಡಿಸ್ ಪ್ಲೇ ಮತ್ತು ಲೆದರ್ ಅಥವಾ ಅಲ್ಕಾಂಟರಾ ಮೂಲಕ ಮುಖ್ಯ ಡಿಸ್ ಪ್ಲೇಯನ್ನು ಪ್ರತ್ಯೇಕಿಸಲಾಗಿದೆ. ಕೆಲವು ಸ್ವಿಚ್‌ಗಿಯರ್‌ಗಳ ಸ್ಥಾನೀಕರಣವನ್ನು ಸಹ ಬದಲಾಯಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, August 10, 2024, 13:00 [IST]
English summary
New lamborghini urus se top things to know
Read more on lamborghini india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+