ರಸ್ತೆ ಮೇಲಿನ ಅರಮನೆ: ಭಾರತದಲ್ಲಿ ಹೊಸ ಐಷಾರಾಮಿ ಲೆಕ್ಸಸ್ ಕಾರಿನ ವಿತರಣೆ ಪ್ರಾರಂಭ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಲೆಕ್ಸಸ್ ಇಂಡಿಯಾ ಅಧಿಕೃತವಾಗಿ ತನ್ನ ಐಷಾರಾಮಿ ಎಂಯುವಿ ಲೆಕ್ಸಸ್ LM 350h ಮಾದರಿಯ ವಿತರಣೆಯನ್ನು ಪ್ರಾರಂಭಿಸಿದೆ. 2023ರ ಮಾರ್ಚ್ ತಿಂಗಳಿನಲ್ಲೇ ಬೆಲೆಗಳನ್ನು ಮೊದಲು ಘೋಷಿಸಲಾಗಿದ್ದರೂ, ಈಗ ಒಂದು ವರ್ಷದ ನಂತರ ಅಧಿಕೃತ ವಿತರಣೆಗಳು ಪ್ರಾರಂಭವಾಗಿವೆ. ಕಂಪನಿಯು ಇದಕ್ಕೆ ಸ್ಪಷ್ಟೀಕರಣವನ್ನು ನೀಡದಿದ್ದರೂ, ಲಭ್ಯತೆಯ ಸಮಸ್ಯೆಗಳಿಂದಾಗಿ ವಿಳಂಬವಾಗಿದೆ ಎಂದು ನಾವು ಅನುಮಾನಿಸುತ್ತೇವೆ. ಲೆಕ್ಸಸ್ LM 350h (Lexus LM 350h) ಸಂಪೂರ್ಣವಾಗಿ ಬಿಲ್ಟ್-ಅಪ್ (CBU) ವಾಹನವಾಗಿ ಭಾರತಕ್ಕೆ ಬಂದಿದೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.

ಹೊಸ ಲೆಕ್ಸಸ್ LM ಮಿನಿವ್ಯಾನ್ ರಡು ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದರಲ್ಲಿ 7-ಸೀಟರ್ VIP ರೂಪಾಂತರ ಬೆಲೆಯು ರೂ. 2 ಕೋಟಿಯಾಗಿದ್ದರೆ, 4-ಸೀಟರ್ ಅಲ್ಟ್ರಾ ಲಕ್ಸುರಿ ರೂಪಾಂತರದ ಬೆಲೆಯು ರೂ. 2.50 ಕೋಟಿಯಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಎರಡೂ ರೂಪಾಂತರಗಳು ಒಂದೇ 2.5-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಪವರ್‌ಟ್ರೇನ್‌ನಿಂದ ಚಾಲಿತವಾಗಿದ್ದು, ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ.

Lexus LM 350h

ಈ ಪವರ್‌ಟ್ರೇನ್ 190 bhp ಮತ್ತು 240 Nm ಟಾರ್ಕ್‌ನ ಸಂಯೋಜಿತ ಉತ್ಪಾದನೆಯನ್ನು ನೀಡುತ್ತದೆ, ಆದರೆ ಆಟೋಮ್ಯಾಟಿಕ್ ರಂತರ ವೇರಿಯಬಲ್ ಟ್ರಾನ್ಸ್‌ಮಿಷನ್ (CVT) ಗೆ ಜೋಡಿಸಲಾಗಿದೆ. ಕಂಪನಿಯು 19.28 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ ಮತ್ತು ಫುಲ್ ಟ್ಯಾಂಕ್‌ನಲ್ಲಿ ಈ ಕಾರು 1200 km ಗಿಂತಲೂ ಹೆಚ್ಚು ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಹೊಸ ಲೆಕ್ಸಸ್ LM ಮಿನಿವ್ಯಾನ್ ಅನ್ನು ಉತ್ತಮ ಏರೋಡೈನಾಮಿಕ್ಸ್‌ಗಾಗಿ ವಿನ್ಯಾಸದಲ್ಲಿ ಹೊಸ ನವೀಕರಣಗಳನ್ನು ಮಾಡಲಾಗಿದೆ. ಹೊಸ ವಿನ್ಯಾಸದಲ್ಲಿರುವ ಹೊರಭಾಗಗಳು ಹೊಸ ಸ್ಪಿಂಡಲ್ ಬಾಡಿ ಫ್ರಂಟ್ ಗ್ರಿಲ್ ವಿನ್ಯಾಸ ಮತ್ತು ಕ್ರೋಮ್ ಅಸ್ಸೆಂಟ್ ಗಳನ್ನು ಸೊಗಸಾಗಿ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಮಿನಿವ್ಯಾನ್ ಒಳಭಾಗವು ಐಷಾರಾಮಿಯಾಗಿದೆ.

Lexus LM 350h

ಇದು ಒಂದು ವಿಭಾಗ ಮತ್ತು ಅಗಲದ ಡಿಸ್ ಪ್ಲೇ ಯುನಿಟ್ ನೊಂದಿಗೆ ಕಂಡುಬರುತ್ತದೆ. ಇದು ಹಿಂತೆಗೆದುಕೊಳ್ಳುವ ಗ್ಲಾಸ್ ವಿಭಾಗವನ್ನು ಸಹ ಹೊಂದಿದೆ, ಅದು ಮುಂಭಾಗವನ್ನು ಹಿಂದಿನ ವಿಭಾಗಗಳಿಂದ ಪ್ರತ್ಯೇಕಿಸುತ್ತದೆ ಆದರೆ ಅದೇ ಸಮಯದಲ್ಲಿ ಮುಂದೆ ರಸ್ತೆಯ ಸ್ಪಷ್ಟ ನೋಟ ನೀಡುತ್ತದೆ. ಈ ಐಷಾರಾಮಿ ಮಿನಿವ್ಯಾನ್ ಮಾದರಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ, ಟೇಬಲ್ ಮತ್ತು ಲೆದರ್ ಸುತ್ತುವ ಮೇಲ್ಮೈಗಳಿಂದ ಕೂಡಿದೆ.

ಅತ್ಯುತ್ತಮವಾದ ಸೌಕರ್ಯವನ್ನು ನೀಡುವ ದೊಡ್ಡ ಸೀಟುಗಳನ್ನು ಸಹ ಒಳಗೊಂಡಿದೆ. ಇನ್ನು ಈ ಕಾರಿನಲ್ಲಿ ರೆಫ್ರಿಜರೇಟರ್, ಸ್ಟೋರೇಜ್ ವಿಭಾಗಗಳು, ಹಿಟೆಡ್ ಆರ್ಮ್ ರೆಸ್ಟ್‌ಗಳು ಮತ್ತು ಬಾಡಿಯ ಉಷ್ಣತೆಯನ್ನು ಪತ್ತೆಹಚ್ಚುವ ಮತ್ತು HVAC ಅನ್ನು ನಿಯಂತ್ರಿಸುವ ಸುಧಾರಿತ ತಾಪಮಾನ ಮತ್ತು ಕೂಲಿಂಗ್ ಸಿಸ್ಟಂ ಸಹ ಅದರ ಒಳಾಂಗಣದ ಒಂದು ಭಾಗವಾಗಿದೆ. ಈ ಹೊಸ ಲೆಕ್ಸಸ್ LM ಮಿನಿವ್ಯಾನ್ ಆರಾಮದಾಯಕ ಪ್ರಯಾಣಕ್ಕೆ ಸೂಕ್ತವಾಗಿದೆ.

Lexus LM 350h

ಹೊಸ ಲೆಕ್ಸಸ್ LM 5,125 mm ಉದ್ದ, 1,890 mm ಅಗಲ ಮತ್ತು 1,945 mm ಎತ್ತರವನ್ನು ಹೊಂದಿದೆ. ಇನ್ನು ಈ ಲೆಕ್ಸಸ್ ಮಿನಿವ್ಯಾನ್ 3,000 mm ಉದ್ದದ ವೀಲ್‌ಬೇಸ್‌ ಅನ್ನು ಹೊಂದಿದೆ. ಹಿಂದಿನ Lexus LM ಮಿನಿವ್ಯಾನ್ ಮಾದರಿಗೆ ಹೋಲಿಸಿದರೆ, 85 mm ಉದ್ದ, 40 mm ಅಗಲ ಮತ್ತು 10 mm ಎತ್ತರವನ್ನು ಹೊಂದಿದೆ. ಇನ್ನು ಇದು 17 ಇಂಚಿನ ಅಥವಾ 19 ಇಂಚಿನ ಅಲಾಯ್ ವ್ಹೀಲ್ ಗಳನ್ನು ಪಡೆದಿದೆ.

ಇನ್ನು ಸೂಕ್ಷ್ಮ ಪಿಸ್ಟನ್ ಸುಧಾರಿತ AVS ಸಸ್ಪೆಕ್ಷನ್ ಅನ್ನು ಹೊಂದಿದ್ದು, ಸುಗಮ ಸವಾರಿಯನ್ನು ನೀಡುವುದಲ್ಲದೆ ಕಾರಿನೊಳಗಿನ ಕಂಪನಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹೊಸ ಲೆಕ್ಸಸ್ LM ಸುರಕ್ಷತಾ ಫೀಚರ್ಸ್ ದೀರ್ಘ ಪಟ್ಟಿಯೊಂದಿಗೆ ಬರುತ್ತದೆ. ಇವುಗಳಲ್ಲಿ ಪ್ರೀ-ಕೊಲಿಷನ್ ವಾರ್ನಿಂಗ್, ಪ್ರಿ-ಕೊಲಿಶನ್ ಬ್ರೇಕ್ ಅಸಿಸ್ಟ್ ಮತ್ತು ಪ್ರಿ-ಕೊಲಿಶನ್ ಬ್ರೇಕಿಂಗ್ ಸೇರಿವೆ. ಇನ್ನು ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ಅಲರ್ಟ್ ಮತ್ತು ಅಸಹಜ ಡ್ರೈವರ್ ರೆಸ್ಪಾನ್ಸ್ ಸಿಸ್ಟಮ್ ಅನ್ನು ಒಳಗೊಂಡಿವೆ.

More from DriveSpark

Article Published On: Monday, July 29, 2024, 20:07 [IST]
English summary
New lexus lm 350h deliveries begin in india details
Read more on lexus india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+