Audi Q7 Bold: ಹೊಸ ಐಷಾರಾಮಿ ಆಡಿ ಕ್ಯೂ7 ಬೋಲ್ಡ್ ಎಡಿಷನ್ ವಿಶೇಷತೆಗಳು
ಐಷಾರಾಮಿ ಕಾರು ತಯಾರಕರಾದ ಆಡಿ ಇತ್ತಿಚೆಗೆ ಆಡಿ ಕ್ಯೂ7 ಬೋಲ್ಡ್ ಎಡಿಷನ್ ಅನ್ನು ರೂ. 97,84,000 ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ, ಆಧುನಿಕ ಡಿಸೈನ್ ಹಾಗೂ ಸಾಟಿಯಿಲ್ಲದ ಪರ್ಫಾಮೆನ್ಸ್‌ನೊಂದಿಗೆ ಈ ಕಾರನ್ನು ಬಿಡುಗಡೆ ಮಾಡಿರುವುದಾಗಿ ಕಂಪನಿ ಹೇಳಿದೆ. ಆಡಿ ಕ್ಯೂ7 ಬೋಲ್ಡ್ ಎಡಿಷನ್ ವಿಶೇಷತೆಗಳನ್ನು ಇಲ್ಲಿ ನೋಡೋಣ.
Audi Q7 ವಿಶೇಷತೆಗಳು: 4 ಝೋನ್ ಏರ್ ಕಂಡೀಷನಿಂಗ್ ಜೊತೆಗೆ ಏರ್ ಅಯೋನೈಜರ್ ಮತ್ತು ಆರೊಮ್ಯಾಟೈಸೇಶನ್, ಕೀ ಲೆಸ್ ಪ್ರವೇಶಕ್ಕಾಗಿ ಕಂಫರ್ಟ್ ಕೀ ಮತ್ತು ಗೆಸ್ಚರ್ ಆಧಾರಿತ ಕಾರ್ಯಾಚರಣೆಯೊಂದಿಗೆ ಎಲೆಕ್ಟ್ರಿಕ್ ಬೂಟ್ ಲಿಡ್ ನೀಡಲಾಗಿದೆ. ಹಾಗೆಯೇ 19 ಸ್ಪೀಕರ್‌ಗಳೊಂದಿಗೆ B&O ಪ್ರೀಮಿಯಂ 3D ವಾಯಿಸ್ ಸಿಸ್ಟಮ್, 730 ವ್ಯಾಟ್‌ಗಳ ಒಟ್ಟು ಪವರ್ ಉತ್ಪಾದನೆ, ಇಂಟಿಗ್ರೇಟೆಡ್ ವಾಷರ್, ಅಡಾಪ್ಟಿವ್ ವಿಂಡ್‌ಶೀಲ್ಡ್ ವೈಪರ್, ಆಡಿ ವರ್ಚುವಲ್ ಕಾಕ್‌ಪಿಟ್ ಪ್ಲಸ್, ಆಡಿ ಸ್ಮಾರ್ಟ್ಫೋನ್ ಇಂಟರ್ಫೇಸ್, MMI ಟಚ್ ರೆಸ್ಪಾನ್ಸ್‌ನೊಂದಿಗೆ MMI ನ್ಯಾವಿಗೇಷನ್ ಪ್ಲಸ್, ಪವರ್ಡ್ ಫೋಲ್ಡಬಲ್ 3ನೇ ಸಾಲಿನ ಆಸನಗಳನ್ನು ನೀಡಲಾಗಿದೆ.

ಆಡಿ ಕ್ಯೂ7 ಬೋಲ್ಡ್ ಎಡಿಷನ್ ಡಿಸೈನ್: ಶೈನಿಂಗ್ ಬ್ಲಾಕ್ ಗ್ರಿಲ್, ಮುಂಭಾಗ ಮತ್ತು ಹಿಂಭಾಗದಲ್ಲಿ ಬ್ಲಾಕ್ ಆಡಿ ರಿಂಗ್‌ಗಳು, ಬ್ಲಾಕ್ ವಿಂಡೋ ಕವರ್‌ಗಳು, ಬ್ಲಾಕ್ ORVM, ಬ್ಲಾಕ್ ರೂಫ್ ರೈಲ್‌ಗಳನ್ನು ಹೊಂದಿದೆ. ಬೋಲ್ಡ್ ಎಡಿಷನ್ ಆಗಿರುವುದರಿಂದ ಸೀಮಿತ ಕಾರುಗಳು ಮಾತ್ರ ಲಭ್ಯವಿರಲಿವೆ. ಆಡಿ ಕ್ಯೂ7 ಬೋಲ್ಡ್ ಗ್ಲೇಸಿಯರ್ ವೈಟ್, ಮಿಥೋಸ್ ಬ್ಲ್ಯಾಕ್, ನವರ್ರಾ ಬ್ಲೂ ಮತ್ತು ಸಮುರಾಯ್ ಗ್ರೇ ಎಂಬ ನಾಲ್ಕು ಬಣ್ಣಗಳಲ್ಲಿ ನೀಡಲಾಗುತ್ತಿದೆ.
ಇವಿಷ್ಟೇ ಅಲ್ಲದೇ ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಪ್ಯಾಕೇಜ್ ಪ್ಲಸ್, ಮೇಲ್ಮೈ ಮತ್ತು ಬಾಹ್ಯರೇಖೆಯ ಲೈಟಿಂಗ್‌ಗಾಗಿ ತಲಾ 30 ಬಣ್ಣಗಳೊಂದಿಗೆ ಕಸ್ಟಮೈಸ್ ಮಾಡಿಸಿಕೊಳ್ಳಬಹುದಾಗಿದೆ. ಈ ಹೊಸ ಕಾರಿನಲ್ಲಿ ಆಟೋ, ಕಂಫರ್ಟ್, ಡೈನಾಮಿಕ್, ಎಫಿಷಿಯೆನ್ಸಿ, ಆಫ್-ರೋಡ್, ಆಲ್-ರೋಡ್ ಮತ್ತು ಇಂಡಿವಿಜುವಲ್ ಎಂಬ ಏಳು ಡ್ರೈವ್ ಮೋಡ್‌ಗಳನ್ನು ನೀಡಲಾಗಿದೆ.
Audi Q7 ಎಂಜಿನ್: ಹೊಸ Audi Q7 ಕಾರು, ಗಂಟೆಗೆ 250 ಕಿ.ಮೀ ಗರಿಷ್ಠ ವೇಗ ಮತ್ತು 5.6 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಈ ಮಟ್ಟದ ಪವರ್‌ಗಾಗಿ 48V ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಮತ್ತು ಲೆಜೆಂಡರಿ ಕ್ವಾಟ್ರೋ ಆಲ್ ವೀಲ್ ಡ್ರೈವ್‌ನೊಂದಿಗೆ 3.0l V6 TFSI ಎಂಜಿನ್ ಅನ್ನು ಹೊಂದಿದೆ. ಇದು 340 hp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಗ್ನೇಚರ್ ಡಿಆರ್ಎಲ್, ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳೊಂದಿಗೆ LED ಟೈಲ್ ಲ್ಯಾಂಪ್‌ಗಳು, 48.26 cm (R19)5 ಆರ್ಮ್ ಸ್ಟಾರ್ ಅಲಾಯ್ ವೀಲ್, ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲ್ಯಾಂಪ್ ನೀಡಲಾಗಿದೆ.
ಸುರಕ್ಷತಾ ಫಿಚರ್ಸ್: ವೇಗ ಮಿತಿಯೊಂದಿಗೆ ಕ್ರೂಸ್ ಕಂಟ್ರೋಲ್, 360° ಕ್ಯಾಮೆರಾದೊಂದಿಗೆ ಪಾರ್ಕ್ ಅಸಿಸ್ಟ್ ಪ್ಲಸ್, ಲೇನ್ ಎಕ್ಸಿಟ್ ವಾರ್ನಿಂಗ್, ಅತ್ಯಂತ ಸುರಕ್ಷತೆಗಾಗಿ 8 ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಆಡಿ ಒರಿಜಿನಲ್ ಬಿಡಿಭಾಗಗಳು (ಐಚ್ಛಿಕ) ಡ್ಯುಯಲ್ ಟೋನ್ ಅಲಾಯ್ ವೀಲ್ ಪೇಂಟ್ (ಆಪ್ಷನಲ್) ಅನ್ನು ಪಡೆಯಬಹುದು.
ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಆಡಿ ಇಂಡಿಯಾದ ಮುಖ್ಯಸ್ಥಶ್ರೀ ಬಲ್ಬೀರ್ ಸಿಂಗ್ ಧಿಲ್ಲೋನ್, "Audi Q7 ಆಡಿಯ Q ಕುಟುಂಬದಲ್ಲಿ ಒಂದು ಐಕಾನ್ ಆಗಿದ್ದು, ಅದ್ಭುತವಾದ ಚಾಲನಾ ಡೈನಾಮಿಕ್ಸ್ ಅನ್ನು ನಂಬಲಾಗದ ಬಹುಮುಖತೆಯೊಂದಿಗೆ ವಿಲೀನಗೊಳಿಸಿದೆ. Audi Q7 ವಿಶೇಷ ಆವೃತ್ತಿಯನ್ನು ಶಕ್ತಿಯುತ, ಸೌಕರ್ಯ, ಅತ್ಯಾಧುನಿಕತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಪರಿಪೂರ್ಣ ಸಂಶ್ಲೇಷಣೆಯನ್ನು ಹುಡುಕುವವರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








